ಚಪ್ಪಲಿ ಅಂಗಡಿ ತೆರೆದು ಸರಕಾರದ ಮಾರ್ಗಸೂಚಿ ಉಲ್ಲಂಘನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು ಪೊಲೀಸರಿಂದ ಪ್ರಕರಣ ದಾಖಲು

ಪುತ್ತೂರು: ಅವಶ್ಯಕ ವಸ್ತುಗಳ ಪಟ್ಟಿಗೆ ಒಳಪಡದ ಚಪ್ಪಲಿ ಅಂಗಡಿ ತೆರೆದು ಕೋವಿಡ್ -19 ಸರಕಾರದ ಮಾರ್ಗಸೂಚಿ ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದ ಇಲ್ಲಿನ ಮುಖ್ಯ ರಸ್ತೆಯಲ್ಲಿನ ಚಪ್ಪಲಿ ಮಳಿಗೆಯ ಮಾಲಕರ ವಿರುದ್ಧ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇಲ್ಲಿನ ಮುಖ್ಯರಸ್ತೆಯಲ್ಲಿನ ಸ್ಟೆಪ್ ಫೂಟ್‌ವೇರ್ ಅಂಗಡಿ ಅವಶ್ಯಕ ವಸ್ತುಗಳ ಪಟ್ಟಿಗೆ ಒಳಪಡದಿದ್ದರೂ ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿದ್ದ ಅಂಗಡಿಯ ಮಾಲಕ ಮಜೀದ್ ಮತ್ತು ಕೆಲಸಗಾರ ಆಶೀಕ್ ಅವರ ವಿರುದ್ದ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆ ಎಸ್.ಐ ಜಂಬೂರಾಜ್ ಮಹಾಜನ್ ಅವರು ಕರ್ತವ್ಯ ನಿರತ ರೌಂಡ್ಸ್‌ನಲ್ಲಿದ್ದ ವೇಳೆ ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿರುವುದು ಬೆಳಕಿಗೆ ಬಂದಿತ್ತು. ಸರ್ಕಾರದ ಕೋವಿಡ್ 19 ನಿಯಮಗಳನ್ನು ಉಲ್ಲಂಘಿಸಿ ಜನರನ್ನು ಸೇರಿಸಿ ಯಾವುದೇ ಸಾಮಾಜಿಕ ಅಂತರವನ್ನು ಪಾಲಿಸದೇ, ಪ್ರಾಣಕ್ಕೆ ಅಪಾಯಕಾರಿಯಾದ ಸೋಂಕು ಹರಡುವ ಸಾಧ್ಯತೆ ಇದೆ ಎಂದು ತಿಳಿದ್ದಿದ್ದರೂ ಕೂಡ ನಿರ್ಲಕ್ಷತೆಯಿಂದ ವ್ಯಾಪಾರ ನಡೆಸಿ ಕೋವಿಡ್ -19ರ ನಿಯಮಾವಳಿಗಳನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.