ಕಡಬ ಪೊಲೀಸರಿಂದ ಬಿಗಿ ತಪಾಸಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನಿಯಮ ಉಲ್ಲಂಘಿಸಿದವರಿಗೆ ದಂಡ-ವಾಹನವೂ ವಶ

ಕಡಬ: ಕೊರೋನಾ 2ನೇ ಅಲೆ ನಿಯಂತ್ರಣ ನಿಟ್ಟಿನಲ್ಲಿ ರಾಜ್ಯದಲ್ಲಿ ಬಿಗಿ ಕ್ರಮ ಜಾರಿಯಲ್ಲಿದ್ದರೂ ನಿಯಮ ಉಲ್ಲಂಘಿಸಿ ವಾಹನಗಳಲ್ಲಿ ಓಡಾಟ ನಡೆಸುವವರಿಗೆ ಕಡಬ ಪೊಲೀಸರು ಮೇ 5ರಂದು ಬಿಸಿ ಮುಟ್ಟಿಸಿದ್ದಾರೆ. ಠಾಣಾ ವ್ಯಾಪ್ತಿಯ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ಬಿಗಿಗೊಳಿಸಿದ್ದಾರೆ.

ಮೇ 5ರಂದು ಸಂಚಾರ ನಿಯಮ ಮತ್ತು ಕೋವಿಡ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ 5 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ. ಒಂದೇ ದಿನ ಒಟ್ಟು 14 ಸಾವಿರ ರೂ., ದಂಡ ಸಂಗ್ರಹಿಸಿದ್ದಾರೆ. ಕಡಬ ಪೊಲೀಸ್ ಠಾಣಾ ಮುಂಭಾಗದಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ಎಲ್ಲಾ ವಾಹನಗಳನ್ನು ನಿಲ್ಲಿಸಿ ಸೂಕ್ತ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಸಂಚಾರಕ್ಕೆ ಅನುವು ಮಾಡಿಕೊಡುತ್ತಿರುವುದು ಕಂಡು ಬಂತು. ಚೆಕ್‌ಪೋಸ್ಟ್‌ನಲ್ಲಿ ಎಸ್.ಐ.ರುಕ್ಮ ನಾಯ್ಕ್‌ರವರೇ ಖುದ್ದು ತಪಾಸಣೆ ನಡೆಸಿದ್ದು ಹೆಲ್ಮೆಟ್, ಲೈಸೆನ್ಸ್ ಸೇರಿದಂತೆ ಅಗತ್ಯ ದಾಖಲೆಗಳಿಲ್ಲದೆ ರಸ್ತೆಗಿಳಿದ ವಾಹನಗಳಿಗೆ ದಂಡ ವಿಧಿಸಿದ್ದಾರೆ. ಸುಳ್ಳು ನೆಪ ಹೇಳಿಕೊಂಡು ಪೇಟೆಯಲ್ಲಿ ಓಡಾಟ ಮಾಡುತ್ತಿದ್ದವರಿಗೂ ದಂಡ ಪ್ರಯೋಗದ ಮೂಲಕ ಬಿಸಿ ಮುಟ್ಟಿಸಿದರು.

ವಾಹನ ಕೊಟ್ಟವರಿಗೂ ದಂಡ:

ದ್ವಿಚಕ್ರ ಚಲಾಯಿಸುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ನಿಲ್ಲಿಸಿ ವಿಚಾರಿಸಿದಾಗ ಲೈಸನ್ಸ್ ಇಲ್ಲದೆ ವಾಹನ ಚಲಾಯಿಸಿರುವುದು ಕಂಡು ಬಂತು. ಇದನ್ನು ಗಮನಿಸಿದ ಎಸ್.ಐ.ಯವರು ವಾಹನ ಕೊಟ್ಟವರನ್ನು ಸ್ಥಳಕ್ಕೆ ಕರೆಸಿ ಅವರಿಗೂ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.