ನೆಲ್ಯಾಡಿ : ಬೈಕ್ ಗೆ ಡಿಕ್ಕಿಯಾದರೂ ಗಾಯಾಳುಗಳನ್ನು ನಿಲ೯ಕ್ಷಿಸಿ ತೆರಳಿದ ಕಾರು ಚಾಲಕ – ನೀರಕಟ್ಟೆ ಯಲ್ಲಿ ಪೊಲೀಸ್ ವಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ : ಬೈಕ್ ಗೆ ಢಿಕ್ಕಿ ಯಾಗಿ ಬೈಕ್ ಸವಾರ ಹಾಗೂ ಸಹ ಸವಾರೆ ಗಾಯಗೊಂಡಿದ್ದರೂ ಉಪಚರಿಸದೆ ತೆರಳಿದ ಕಾರನ್ನು ನೀರಕಟ್ಟೆ ಸಮೀಪ ಪೊಲೀಸರು ವಶಕ್ಕೆ ತೆಗೆದುಕೊಂಡಿರುವ ಘಟನೆ ಮೇ 6ರಂದು ಬೆಳಿಗ್ಗೆ ನಡೆದಿದೆ.

ನೆಲ್ಯಾಡಿ ಮರುವೋಡಿ ನಿವಾಸಿ ಮೋಹನ್ ಹಾಗೂ ಅವರ ಪತ್ನಿ ವಿದ್ಯಾರವರು ನೆಲ್ಯಾಡಿ ಸರಕಾರಿ ಆಸ್ಪತ್ರೆಗೆ ಹೋಗಲೆಂದು ಬೈಕ್ ನಲ್ಲಿ ಬಂದವರು ನೆಲ್ಯಾಡಿ ಯಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಆಸ್ಪತ್ರೆಗೆ ಹೋಗುವ ರಸ್ತೆಗೆ ತಿರುಗುತ್ತಿದ್ದ ವೇಳೆ ಬೆಂಗಳೂರು ಕಡೆಯಿಂದ ಬಂದ ಕಾರೊಂದು ಇವರ ಬೈಕ್ ಗೆ ಢಿಕ್ಕಿ ಯಾಗಿದೆ. ಘಟನೆಯಿಂದಾಗಿ ಮೋಹನ್ ಹಾಗೂ ಅವರ ಗಭಿ೯ಣಿ ಪತ್ನಿ ರಸ್ತೆ ಗೆ ಬಿದ್ದು ಗಾಯಗೊಂಡಿದ್ದರು. ಕಾರಿನಲ್ಲಿದ್ದವರೂ ಕಾರು ನಿಲ್ಲಿಸಿ ಸ್ಥಳಕ್ಕೆ ಬಂದರೂ ಗಾಯಾಳುಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಉಪ್ಪಿನಂಗಡಿ ಕಡೆಗೆ ತೆರಳಿದರು. ಸ್ಥಳೀಯ ರು ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ನೀರಕಟ್ಟೆ ಸಮೀಪ ಕಾರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.