ಅನಗತ್ಯ ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದ ಪುತ್ತೂರು ಪೊಲೀಸರು | ಮುಟ್ಟುಗೋಲು ಹಾಕಿದ ವಾಹನಗಳಿಗೆಲ್ಲಾ ಠಾಣಾ ಆವರಣದಲ್ಲಿ ದಂಡ ಪ್ರಕ್ರಿಯೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ -19 ಸೋಂಕಿನ 2ನೇ ಅಲೆ ದಿನೆ ದಿನೆ ಹೆಚ್ಚಾಗುತ್ತಿದ್ದರೂ ಪುತ್ತೂರು ಪೇಟೆಯಲ್ಲಿ ವಾಹನ ಸಂಚಾರ ದಟ್ಟಣೆಯನ್ನು ನಿಯಂತ್ರಣ ಮಾಡಲು ಅನಗತ್ಯ ಓಡಾಟ ನಡೆಸಿದ ವಾಹನಗಳನ್ನು ಪುತ್ತೂರು ಪೊಲೀಸರು ಮುಟ್ಟುಗೋಲು ಹಾಕಿದ ಘಟನೆ ಮೇ 6ರಂದು ನಡೆದಿದೆ.

ಅನಗತ್ಯವಾಗಿ ಪೇಟೆಗೆ ಬರುವ ವಾಹನಗಳ ವಿವಿಧ ಕಾರಣ ಹೇಳಿಕೊಂಡು ತೆರಳುತ್ತಿದ್ದರೂ ಪೊಲೀಸರು ಕೂಡಾ ವಾಹನ ಸವಾರರ ವಿವಿಧ ಕಾರಣಗಳನ್ನು ಪರಿಶೀಲಿಸಿ ತಪ್ಪು ಮಾಹಿತಿ ನೀಡಿದ ವಾಹನ ಚಾಲಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ೧೦ ಗಂಟೆಯ ಬಳಿಕವೂ ರಸ್ತೆಯಲ್ಲಿ ಓಡಾಟ ಮಾಡುತ್ತಿದ್ದ ವಾಹನಗಳನ್ನು ಮುಟ್ಟುಗೋಲು ಹಾಕಿದ್ದಾರೆ.

ರಿಕ್ಷಾ ಬಾಡಿಗೆ ಮಾಡುವಂತಿಲ್ಲ:
ಆಟೋ ರಿಕ್ಷಾಗಳು ತುರ್ತು ಸೇವೆ ಹೊರತು ಇತರ ಬಾಡಿಗೆ ಮಾಡುವಂತಿಲ್ಲ. ಬಾಡಿಗೆಗಾಗಿ ಪಾರ್ಕ್‌ನಲ್ಲಿ ನಿಲ್ಲಿಸುವಂತಿಲ್ಲ. ಹಾಗಾಗಿ ಸುಮಾರು 12 ಆಟೋ ರಿಕ್ಷಾಗಳನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದರು. ಬಳಿಕ ಠಾಣೆಯಲ್ಲಿ ದಂಡ ವಸೂಲಿ ಪ್ರಕ್ರಿಯೆ ಮಾಡಿ ಬಿಡುಗಡೆಗೊಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.