ಕೋವಿಡ್ ಕೋರೋನಾ ವೈರಸ್ ನಿಯಂತ್ರಣಕ್ಕೆ ಗ್ರಾ.ಪಂನಿಂದ ಖಡಕ್ ರೂಲ್ಸ್ | ಕೆದಂಬಾಡಿ,ಒಳಮೊಗ್ರು ಗ್ರಾಪಂ ವ್ಯಾಪ್ತಿಯಲ್ಲಿ 10 ಗಂಟೆ ತನಕ ಮಾತ್ರ ವ್ಯಾಪಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ 19 ಕೋರೋನ ವೈರಸ್ ಸೋಂಕಿನಿಂದ ಜನರನ್ನು ರಕ್ಷಿಸುವ ಸಲುವಾಗಿ ಕೆದಂಬಾಡಿ ಮತ್ತು ಒಳಮೊಗ್ರು ಗ್ರಾಮ ಪಂಚಾಯತ್ ಖಡಕ್ ನಿರ್ಣಯ ತೆಗೆದುಕೊಂಡಿದೆ. ಈ ಹಿಂದೆ ರಾಜ್ಯ ಸರಕಾರ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೇಗೆ ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಿತ್ತು. ಆ ಬಳಿಕ 6 ರಿಂದ 12 ಗಂಟೆಯವರೇಗೆ ವಿಸ್ತರಣೆ ಮಾಡಿತ್ತು. ಇದೀಗ ಕೆದಂಬಾಡಿ ಮತ್ತು ಒಳಮೊಗ್ರು ಗ್ರಾಮದ ಕೋವಿಡ್ 19 ನಿಯಂತ್ರಣ ಗ್ರಾಮೀಣ ಕಾರ್ಯಪಡೆಯ ಸಭೆಯ ನಿರ್ಣಯದಂತೆ ಗ್ರಾಪಂ ವ್ಯಾಪ್ತಿಯ ಎಲ್ಲಾ ವ್ಯಾಪಾರ ಮಳಿಗೆಗಳು ಮೇ. 07 ರಿಂದ ಬೆಳಿಗ್ಗೆ 6 ಗಂಟೆಯಿಂದ 10 ರವರೇಗೆ ಮಾತ್ರ ವ್ಯಾಪಾರ ನಡೆಸಲು ಅವಕಾಶ ನೀಡಿದೆ. 10 ಗಂಟೆಯ ಬಳಿಕ ದಿನಸಿ ವಸ್ತುಗಳು ಸೇರಿದಂತೆ ತರಕಾರಿ, ಹಣ್ಣುಹಂಪಲು ವ್ಯಾಪಾರಸ್ಥರೂ ಕೂಡ ತಮ್ಮ ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡುವಂತೆ ಖಡಕ್ ಎಚ್ಚರಿಕೆ ನೀಡಿದೆ. 10 ಗಂಟೆಯ ಬಳಿಕ ಮೆಡಿಕಲ್, ಬ್ಯಾಂಕ್ ಸೇರಿದಂತೆ ಇತರ ಸರಕಾರಿ ಕಛೇರಿಗಳು ತೆರೆದಿರುತ್ತವೆ.

ಬಾಗಿಲು ತೆರೆದರೆ ಬೀಳುತ್ತೆ ದಂಡ
ಬೆಳಿಗ್ಗೆ ೧೦ ರ ನಂತರ ಈ ಎರಡು ಗ್ರಾಪಂ ವ್ಯಾಪ್ತಿಯಲ್ಲಿ ಯಾರಾದರೂ ತಮ್ಮ ವ್ಯಾಪಾರ ಮಳಿಗೆಗಳನ್ನು ತೆರೆದಿರುವುದು ಕಂಡು ಬಂದರೆ ಆ ವ್ಯಾಪಾರ ಮಳಿಗೆಯ ಮಾಲಕರ ಮೇಲೆ ಕಾನೂನು ರೀತಿಯ ಕ್ರಮ ಜರಗಿಸುವುದು ಮತ್ತು ಭಾರೀ ದಂಡ ವಿಧಿಸುವ ಬಗ್ಗೆ ಗ್ರಾಪಂ ಎಚ್ಚರಿಕೆ ನೀಡಿದೆ. ಇದಲ್ಲದೆ ಅನಗತ್ಯವಾಗಿ ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸದೆ ತಿರುಗಾಡುವವರ ಮೇಲೆಯೂ ಗ್ರಾಪಂ ಕಣ್ಣಿಟ್ಟಿದ್ದು ಅಂತವರ ಮೇಲೂ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.ಜನ ಸಾಮಾನ್ಯರ ಅರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಈ ಕಠಿಣ ಮಾರ್ಗಸೂಚಿಗಳನ್ನು ಜಾರಿಗೆ ತಂದಿದ್ದು ವರ್ತಕರು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಕೆದಂಬಾಡಿ ಮತ್ತು ಒಳಮೊಗ್ರು ಗ್ರಾಮ ಪಂಚಾಯತ್‌ನ ಕೋವಿಡ್ ೧೯ ನಿಯಂತ್ರಣ ಗ್ರಾಮೀಣ ಕಾರ್ಯಪಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಕಾರ್ಯಪಡೆಯ ನಿರ್ಣಯದಂತೆ ಈ ನಿಯಮಗಳನ್ನು ಜಾರಿಗೆ ತಂದಿದ್ದೇವೆ. ಮೇ.೦೭ ರಿಂದ ಬೆಳಿಗ್ಗೆ ೬ ರಿಂದ ೧೦ ಗಂಟೆಯವರೇಗೆ ಮಾತ್ರ ಅಗತ್ಯ ವಸ್ತುಗಳ ಮಾರಾಟದ ವ್ಯಾಪಾರಸ್ಥರು ತಮ್ಮ ಅಂಗಡಿಮುಂಗಟ್ಟುಗಳಲ್ಲಿ ವ್ಯಾಪಾರ ನಡೆಸಲು ಅವಕಾಶವಿದೆ. ಬೆಳಿಗ್ಗೆ ೧೦ ಗಂಟೆಗೆ ಅಂಗಡಿಗಳನ್ನು ಬಂದ್ ಮಾಡಬೇಕು ತಪ್ಪಿದ್ದಲ್ಲಿ ದಂಡ ಅಥವಾ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು, ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಈ ಕಠಿಣ ಕ್ರಮ ಕೈಗೊಳ್ಳಲಾಗಿದ್ದು ಪ್ರತಿಯೊಬ್ಬರು ಸಹಕಾರ ನೀಡಬೇಕಾಗಿ ವಿನಂತಿ –
ಅಜಿತ್ ಜಿ.ಕೆ ಅಭಿವೃದ್ಧಿ ಅಧಿಕಾರಿ ಕೆದಂಬಾಡಿ ಗ್ರಾ.ಪಂ, ಗೀತಾ ಬಿ.ಎಸ್. ಅಭಿವೃದ್ಧಿ ಅಧಿಕಾರಿ ಒಳಮೊಗ್ರು ಗ್ರಾ.ಪಂ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.