ಮಾಸ್ಕ್ ಹಾಕದಿದ್ದರೆ ಬೀಳುತ್ತೆ ದಂಡ… ಒಳಮೊಗ್ರು ಗ್ರಾಪಂನಿಂದ ಭರ್ಜರಿ ಕಾರ್ಯಾಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • 2 ದಿನದಲ್ಲಿ 2500 ರೂ.ದಂಡ ಸಂಗ್ರಹ

ಪುತ್ತೂರು: ಕೋವಿಡ್-19 ಕೋರೋನ ವೈರಸ್ ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ಸರಕಾರ ಅದೆಷ್ಟೋ ಕಠಿಣ ಕ್ರಮಗಳನ್ನು ಜಾರಿಗೆ ತಂದರೂ ಕೆಲವೊಮ್ಮೆ ಜನರು ಎಲ್ಲವನ್ನು ಗಾಳಿಗೆ ತೂರಿಬಿಡುತ್ತಿದ್ದಾರೆ. ಮೂಗು, ಬಾಯಿ ಮುಚ್ಚಿಕೊಳ್ಳುವಂತೆ ಮಾಸ್ಕ್ ಹಾಕಿಕೊಳ್ಳಿ, ಮನೆಗೆ ಮುಟ್ಟಿದ ಕೂಡಲೇ ಸೋಪು ಹಾಕಿ ಕೈ ತೊಳೆದುಕೊಳ್ಳಿ, ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್‌ನಿಂದ ಕೈ ಉಜ್ಜಿಕೊಳ್ಳಿ, ಗುಂಪು ಸೇರಿದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬಿತ್ಯಾದಿ ಹಲವು ನಿಯಮಗಳನ್ನು ಜಾರಿಗೆ ತಂದರೂ ಸಾರ್ವಜನಿಕರು ಎಲ್ಲವನ್ನೂ ಪಾಲನೆ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಅಧಿಕಾರಿಗಳು, ಪೊಲೀಸರು ಕಾನೂನು ರೀತಿಯಲ್ಲಿ ಸಾರ್ವಜನಿಕರಿಗೆ ಬುದ್ದಿ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದೇ ರೀತಿಯಲ್ಲಿ ಒಳಮೊಗ್ರು ಗ್ರಾಪಂ ಕೋವಿಡ್ ನಿಯಂತ್ರಣ ಗ್ರಾಮೀಣ ಕಾರ್ಯಪಡೆಯು ಫೀಲ್ಡ್‌ಗೆ ಇಳಿದಿದ್ದು ಸರಿಯಾದ ಕ್ರಮದಲ್ಲಿ ಮಾಸ್ಕ್ ಹಾಕದವರ ಮೇಲೆ ದಂಡ ಪ್ರಯೋಗ ನಡೆಸಿದೆ. ಮೇ.06  ಮತ್ತು 07 ಎರಡು ದಿನಗಳಲ್ಲಿ ಬರೋಬ್ಬರಿ ೨೫೦೦ ರೂ. ದಂಡ ಸಂಗ್ರಹ ಮಾಡಿದೆ.

100 ರೂ.ದಂಡ
ಮಾಸ್ಕ್ ಅನ್ನು ಸರಿಯಾದ ರೀತಿಯಲ್ಲಿ ಮೂಗು ಮತ್ತು ಬಾಯಿ ಮುಚ್ಚುವಂತೆ ಹಾಕಿಕೊಂಡಿರದೆ ಕತ್ತಲ್ಲಿ ನೇತಾಡಿಸಿಕೊಂಡಿರುವುದು ಅಥವಾ ಬಾಯಿಗೆ ಮಾತ್ರ ಹಾಕಿಕೊಳ್ಳುವುದು ಅಥವಾ ಜೇಬಲ್ಲಿ ಇಟ್ಟುಕೊಂಡಿರುವುದು ಇತ್ಯಾದಿಗಳನ್ನು ಕಂಡು ಬಂದಲ್ಲಿ ಅಂತಹ ವ್ಯಕ್ತಿಯ ಮೇಲೆ ರೂ.100 ದಂಡ ವಿಧಿಸಲಾಗುತ್ತದೆ. ದಂಡ ವಿಧಿಸಿದ್ದಕ್ಕೆ ಗ್ರಾಪಂನಿಂದ ರಶೀದಿಯನ್ನು ಕೊಡಲಾಗುತ್ತಿದೆ. ಮಾಸ್ಕ್ ಇಲ್ಲದವರಿಗೆ ಸ್ಥಳದಲ್ಲೇ ಉಚಿತವಾಗಿ ಮಾಸ್ಕ್ ಕೊಡುವ ವ್ಯವಸ್ಥೆಯೂ ಆಗುತ್ತಿದೆ. ಕಾರ್ಯಪಡೆಯಲ್ಲಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಮತ್ತು ಸಿಬ್ಬಂದಿಗಳು, ಕಾರ್ಯಪಡೆಯ ಸದಸ್ಯರು ಇರುತ್ತಾರೆ.ಒಟ್ಟಿನಲ್ಲಿ ಜನರಲ್ಲಿ ವೈರಸ್ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿರುವುದು ಶ್ಲಾಘನೀಯ.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಪಂಚಾಯತ್ ಕಾರ್ಯಪಡೆಯಿಂದ ಮಾಡುತ್ತಿದ್ದೇವೆ. ಸರಿಯಾದ ರೀತಿಯಲ್ಲಿ ಮಾಸ್ಕ್ ಹಾಕದವರಿಗೆ ೧೦೦ ರೂ. ದಂಡ ಹಾಕುತ್ತಿದ್ದೇವೆ. ಮಾಸ್ಕ್ ಇಲ್ಲದವರಿಗೆ ಉಚಿತ ಮಾಸ್ಕ್ ಕೊಡಲಾಗುತ್ತಿದೆ. ಜನರು ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದು ನಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಸೂಕ್ತ. ಎರಡು ದಿನದಲ್ಲಿ ರೂ.೨೫೦೦ ದಂಡ ಸಂಗ್ರಹವಾಗಿದೆ – ಗೀತಾ ಬಿ.ಎಸ್. ಅಭಿವೃದ್ಧಿ ಅಧಿಕಾರಿ ಒಳಮೊಗ್ರು ಗ್ರಾಪಂ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.