ನೆಲ್ಯಾಡಿ ಆರೋಗ್ಯ ಕೇಂದ್ರದಲ್ಲೂ ಲಸಿಕೆ ಸಮಸ್ಯೆ 2ನೇ ಹಂತಕ್ಕೆ ಬೇಕು 2099 – ಬಂದಿರುವುದು ಕೇವಲ 50 ಲಸಿಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಆನ್‌ಲೈನ್‌ನಲ್ಲಿ ನೋಂದಾವಣೆ ಮಾಡಿಕೊಂಡವರಿಂದಲೂ ಲಸಿಕೆಗಾಗಿ ಬೇಡಿಕೆ

ನೆಲ್ಯಾಡಿ: ಕೊರೋನಾ 2ನೇ ಅಲೆ ಅಬ್ಬರದ ಹಿನ್ನೆಲೆಯಲ್ಲಿ ಲಸಿಕೆಗೂ ಭಾರೀ ಬೇಡಿಕೆ ಉಂಟಾಗಿದೆ. ಆದರೆ ಆರೋಗ್ಯ ಕೇಂದ್ರಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಸರಬರಾಜು ಆಗದೇ ಇರುವುದರಿಂದ ದೊಡ್ಡ ಸಮಸ್ಯೆ ಉಂಟಾಗಿದೆ. 2ನೇ ಹಂತದ ಲಸಿಕೆ ಹಾಕಿಕೊಳ್ಳಲು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೇ 6ರಂದು ಬೆಳಿಗ್ಗೆಯೇ ಜನರು ಬಂದು ಕ್ಯೂ ನಿಂತರೂ ಲಸಿಕೆ ಸಿಗದೇ ಬಹಳಷ್ಟು ಮಂದಿ ಹಿಂತಿರುಗಿದ್ದಾರೆ.

ಪುತ್ತೂರಿಗೆ ಮೇ 5ರಂದು ಬಂದಿರುವ 1 ಸಾವಿರ ಕೋವಿಶೀಲ್ಡ್ ಲಸಿಕೆ ಪೈಕಿ ಪುತ್ತೂರು ಮತ್ತು ಕಡಬ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ 50 ಕೋವಿಶೀಲ್ಡ್ ಲಸಿಕೆ ಹಂಚಿಕೆ ಮಾಡಲಾಗಿದೆ. ಅದರಂತೆ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ 50 ಕೋವಿಶೀಲ್ಡ್ ಲಸಿಕೆ ಬಂದಿದೆ. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಈಗಾಗಲೇ ಪ್ರಥಮ ಹಂತದಲ್ಲಿ ಲಸಿಕೆ ಹಾಕಿಕೊಂಡವರ ಪೈಕಿ 1501 ಮಂದಿಗೆ ಕೋವಿಶೀಲ್ಡ್ ಹಾಗೂ 598 ಮಂದಿಗೆ ಕೊವ್ಯಾಕ್ಸಿನ್ ಲಸಿಕೆ ಬೇಕಾಗಿದೆ. ಈ ಪೈಕಿ ಬಹುತೇಕ ಮಂದಿ ಮೇ 6ರಂದು ಲಸಿಕೆ ಹಾಕಿಕೊಳ್ಳಲು ಆಸ್ಪತ್ರೆಗೆ ಬಂದು ಕ್ಯೂನಲ್ಲಿ ನಿಂತಿದ್ದರು. ಆದರೆ ಆಸ್ಪತ್ರೆಗೆ ಕೇವಲ 50 ಕೋವಿಶೀಲ್ಡ್ ಲಸಿಕೆ ಬಂದಿರುವುದರಿಂದ ಈ ಹಿಂದೆ ಕೋವಿಶೀಲ್ಡ್ ಲಸಿಕೆ ಹಾಕಿಕೊಂಡವರ ಪೈಕಿ ಮೊದಲು ಬಂದ 50 ಮಂದಿಗೆ ಲಸಿಕೆ ನೀಡಲಾಗಿದೆ. ಇದರಿಂದಾಗಿ ಉಳಿದವರು ಲಸಿಕೆ ಸಿಗದೇ ಹಿಂತಿರುಗಿದ್ದಾರೆ.

18 ವರ್ಷ ಮೇಲ್ಪಟ್ಟವರಿಗೆ ಮೇ 1ರಿಂದ ಲಸಿಕೆ ಹಾಕಿಸಿಕೊಳ್ಳಬೇಕೆಂಬ ಸೂಚನೆ ಬಂದಿದ್ದು ಇದಕ್ಕಾಗಿ ಆನ್‌ಲೈನ್‌ನಲ್ಲಿ ನೋಂದಾವಣೆ ಮಾಡಿಕೊಳ್ಳಬೇಕಾಗಿದೆ. ಅದರಂತೆ ಹಲವು ಮಂದಿ ಈಗಾಗಲೇ ನೋಂದಾವಣೆ ಮಾಡಿಕೊಂಡಿದ್ದಾರೆ. ಈ ರೀತಿ ನೋಂದಾವಣೆ ಮಾಡಿಕೊಂಡ ಚಾರ್ಮಾಡಿಯ ಮೂವರು, ಮಂಗಳೂರಿನ ಮೂವರಿಗೆ ಮೇ 6ರಂದು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚನೆ ಬಂದಿದೆ. ಅದರಂತೆ ಅವರು ವಾಹನ ಮಾಡಿಕೊಂಡು ಬೆಳಿಗ್ಗೆ ನೆಲ್ಯಾಡಿಗೆ ಬಂದರೂ ಇಲ್ಲಿ ಲಸಿಕೆ ಇರಲಿಲ್ಲ. ಈ ಬಗ್ಗೆ ಆಸ್ಪತ್ರೆಯ ವೈದ್ಯರು ಮನವರಿಕೆ ಮಾಡಿದರೂ ಅವರು ಕೇಳವ ಸ್ಥಿತಿಯಲ್ಲಿಲ್ಲ. ಬಳಿಕ ಮೂವರಿಗೆ ಬೇರೆ ಆಸ್ಪತ್ರೆಯಿಂದ ಲಸಿಕೆ ತರಿಸಿ ಕೊಡಲಾಗಿದೆ.

ಗ್ರಾ.ಪಂ.ಸದಸ್ಯರ ಭೇಟಿ:
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಪ್ರಕಾಶ್ ಪೂಜಾರಿ, ಯಾಕೂಬ್ ಸಲಾಂ ಬಿಲಾಲ್, ನೆಲ್ಯಾಡಿ ಜೆಸಿಐ ಅಧ್ಯಕ್ಷ ಗಿರೀಶ್‌ರವರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಮಾತನಾಡಿದ ಸದಸ್ಯ ರವಿಪ್ರಸಾದ್ ಶೆಟ್ಟಿಯವರು, ಲಸಿಕೆ ಸಮಸ್ಯೆ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಸುಳ್ಯ ಶಾಸಕರ ವಾರ್ ರೂಂ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಹೇಳಿದ್ದಾರೆ.

ಸಮಸ್ಯೆಗೆ ಯಾರು ಹೊಣೆ ?
ಆನ್‌ಲೈನ್ ನೋಂದಾವಣೆ ಮಾಡುವ ಮೊದಲು ಸರಕಾರ ಸಾಕಷ್ಟು ಲಸಿಕೆ ಸಂಗ್ರಹ ಮಾಡಿಕೊಳ್ಳಬೇಕಿತ್ತು. ಈಗ ಆನ್‌ಲೈನ್ ನೋಂದಾವಣೆ ಮಾಡಿಕೊಂಡ ಬೇರೆ ಬೇರೆ ಊರಿನವರು ಆಸ್ಪತ್ರೆಗೆ ಬಂದು ವೈದ್ಯರ ಜೊತೆ ಜಗಳ ಮಾಡುತ್ತಿದ್ದಾರೆ. ಇದಕ್ಕೆ ಯಾರು ಹೊಣೆ. ಸರಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ತಾ.ಪಂ.ಸದಸ್ಯೆ ಉಷಾ ಅಂಚನ್ ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.