ಕುಟ್ರುಪಾಡಿ: ಕೋವಿಡ್ ಕಾರ್ಯಪಡೆ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ವಿಭಾಗ ತೆರೆಯುವಂತೆ ಆಗ್ರಹ
ಬೆಂಗಳೂರಿನಿಂದ ಬಂದವರು ಕ್ವಾರಂಟೈನ್ ಆಗುತ್ತಿಲ್ಲ-ಆರೋಪ

ಕಡಬ: ಕಡಬ ಸಮುದಾಯ ಆರೋಗ್ಯ ಕೇಂದ್ರದ ಹಳೆ ಕಟ್ಟಡದಲ್ಲಿ ಸುಮಾರು 25 ಹಾಸಿಗೆಗಳ ಆಮ್ಲಜನಕ ಸೌಲಭ್ಯದೊಂದಿಗೆ ಕೋವಿಡ್ ವಿಭಾಗ ತೆರೆಯುವಂತೆ ಆಗ್ರಹ ವ್ಯಕ್ತವಾದ ಘಟನೆ ಕುಟ್ರುಪಾಡಿ ಗ್ರಾ.ಪಂ. ಕೋವಿಡ್ ಕಾರ್ಯಪಡೆಯ ಸಭೆಯಲ್ಲಿ ನಡೆದಿದೆ.


ಸಭೆಯು ಗ್ರಾ.ಪಂ. ಅಧ್ಯಕ್ಷ ಮೋಹನ ಕೆರೆಕೋಡಿಯವರ ಅಧ್ಯಕ್ಷತೆಯಲ್ಲಿ ಮೇ.6ರಂದು ಕುಟ್ರುಪಾಡಿ ಹಿ.ಪ್ರಾ.ಶಾಲೆಯಲ್ಲಿ ನಡೆದಿದೆ, ನೋಡೆಲ್ ಅಧಿಕಾರಿಯಾಗಿರುವ ಕಡಬ ಮೆಸ್ಕಾಂ ಉಪವಿಭಾಗದ ಸಹಾಯಕ ಅಭಿಯಂತರರ ಸಜಿ ಕುಮಾರ್ ಅವರು ಮಾತನಾಡಿ, ಕೋವಿಡ್ 2ನೇ ಅಲೆಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಈ ಹಿನ್ನಲೆಯಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆ ಎದುರಾಗಿದೆ, ಕಡಬದಲ್ಲಿ ಈಗಾಗಲೇ ಸುಮಾರು 30 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ ಈ ಹಿನ್ನಲೆಯಲ್ಲಿ ಕೋವಿಡ್ ಕಾರ್ಯಪಡೆಯು ಜಾಗೃತರಾಗಬೇಕಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕುಟ್ರುಪಾಡಿ ಗ್ರಾಮ ಪಂಚಾಯತ್ ಸದಸ್ಯ ಮಹಮ್ಮದ್ ಆಲಿ ಅವರು ಮಾತನಾಡಿ, ಕಡಬ ತಾಲೂಕು ಕೇಂದ್ರವಾಗಿರುವುದರಿಂದ ಕಡಬ ಸಮುದಾಯ ಆಸ್ಪತ್ರೆಯ ಹಳೆ ಕಟ್ಟಡದಲ್ಲಿ ಸುಮಾರು 25ಬೆಡ್‌ಗಳ ಕೋವಿಡ್ ವಿಭಾಗವನ್ನು ತೆರೆಯಬೇಕು ಎಂದು ಅಧಿಕಾರಿಗಳಲ್ಲಿ ಆಗ್ರಹಿಸಿದರು.

ಬೆಂಗಳೂರಿನಿಂದ ಬಂದವರು ಕ್ವಾರಂಟೈನ್ ಆಗುತ್ತಿಲ್ಲ-ಆರೋಪ
ಈಗಾಗಲೇ ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆ ಉದ್ಯೋದಲ್ಲಿದ್ದವರು ಊರಿಗೆ ಆಗಮಿಸಿದ್ದು, ಆದರೆ ಅವರು ಮಾತ್ರ ಸರಿಯಾಗಿ ಕ್ವಾರಂಟೈನ್ ಆಗುತ್ತಿಲ್ಲ ಎಂದು ಆಶಾಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿಯವರು ಆರೋಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಚರ್ಚೆ ನಡೆದು ಇನ್ನು ಮುಂದೆ ದೂರದ ಊರಿನಿಂದ ಬಂದವರು 17 ದಿನಗಳ ಕಾಲ ಕ್ವಾರಂಟೈನ್ ಆಗದಿದ್ದರೆ ಅಂತವರ ಮಾಹಿತಿಯನ್ನು ಕೋವಿಡ್ ಕಾರ್ಯಪಡೆಗೆ ತಿಳಿಸಬೇಕು, ಅವರ ವಿರುದ್ಧ ಕ್ರಮ ಕೈಗೊಳ್ಳುವ ಎಂದು ನೋಡೆಲ್ ಅಧಿಕಾರಿ ಸಜಿ ಕುಮಾರ್ ಹೇಳಿದರು.

ಕ್ವಾರಂಟೈನ್‌ನಲ್ಲಿರುವವರಿಗೆ ಆಹಾರ ಸಾಮಾಗ್ರಿ ವ್ಯವಸ್ಥೆ
ಗ್ರಾ.ಪಂ. ವ್ಯಾಪ್ತಿಯಲ್ಲಿ ಕ್ವಾರಂಟೈನ್‌ನಲ್ಲಿರುವವರಿಗೆ ಅಗತ್ಯ ಇದ್ದರೆ ಆಹಾರ ಸಾಮಾಗ್ರಿ ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದು ಗ್ರಾಮಕರಣಿಕ ಚಂದ್ರ ನಾಯ್ಕ್ ಹೇಳಿದರು.

ವೇದಿಕೆಯಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜೆರಾಲ್ದ್ ಮಸ್ಕರೇನಸ್, ಗ್ರಾ.ಪಂ. ಅಧ್ಯಕ್ಷ ಮೋಹನ್ ಕೆರೆಕೋಡಿ ಅವರು ಮಾತನಾಡಿ ಸೂಕ್ತ ಸಲಹೆ ನೀಡಿದರು. ಸಭೆಯಲ್ಲಿ ಗ್ರಾ,ಪಂ. ಸದಸ್ಯರಾದ ರಮೇಶ್.ಪಿ. ಲಕ್ಷ್ಮೀಶ ಬಂಗೇರ, ಸಂತೋಷ್ ದೋಳ, ಸುಧೀರ್ ದೇವಾಡಿಗ, ಮೋಹಿನಿ, ಯಶೋಧ, ಮೀನಾಕ್ಷಿ, ಮಾಧವಿ, ಸುಮನ, ಪ್ರೇಮಲೀಲಾ, ಶಕುಂತಳಾ, ಆರೋಗ್ಯ ಸಹಾಯಕಿ ಆನ್ಸಿ ತೋಮಸ್, ಗ್ರಾಮ ಕರಣಿಕ ಚಂದ್ರನಾಯ್ಕ್, ಪೊಲೀಸ್ ಸಿಬ್ಬಂದಿ ಮಹೇಶ್, ಆಶಾಕಾರ್ಯಕರ್ತೆಯರಾದ ಅನಿತಾ ದೇರಾಜೆ, ರಾಣಿ ಬಲ್ಯ, ರಾಜೀವಿ ಬಿ.ಎಸ್., ಲೋಲಾಕ್ಷಿ, ಮಿನಿಬೇನಿ ಕುಟ್ರುಪಾಡಿ, ಅಂಗನವಾಡಿ ಕಾರ್ಯಕರ್ತೆಯರಾದ ಪ್ರೇಮಲೀಲಾ, ಶಕುಂತಳಾ, ಪಾರ್ವತಿ.ಕೆ, ಮೇರಿ, ಧರ್ಮಾವತಿ, ರತ್ನಾ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸಿಬ್ಬಂದಿ ಅಂಗು ಸ್ವಾಗತಿಸಿ, ವಂದಿಸಿದರು. ಜಿತೇಶ್, ತಾರನಾಥ, ಉಮೇಶ್ ಅವರುಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.