ಕೋಡಿಂಬಾಡಿ ಗ್ರಾ. ಪಂ. ಕೋವಿಡ್ ಕಾರ್ಯಪಡೆ ಸಭೆ | ಶಾಸಕರ ನೇತೃತ್ವದಲ್ಲಿ ನಡೆದಿದ್ದ ಸಭೆಯ ನಿರ್ಣಯದ ಅನುಷ್ಠಾನಕ್ಕೆ ತೀರ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶಾಸಕ ಸಂಜೀವ ಮಠಂದೂರುರವರ ನೇತೃತ್ವದಲ್ಲಿ ಮೇ 2ರಂದು ನಡೆದಿದ್ದ ಸಭೆಯಲ್ಲಿ ಅಂಗೀಕರಿಸಲಾಗಿರುವ ನಿರ್ಣಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೋಡಿಂಬಾಡಿ ಗ್ರಾಮ‌ ಪಂಚಾಯತ್ ಕೋವಿಡ್ ಕಾರ್ಯಪಡೆ ಸಭೆ ನಿರ್ಣಯ ಅಂಗೀಕರಿಸಿದೆ.

ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ರಾಮಚಂದ್ರ ಪೂಜಾರಿ ಶಾಂತಿನಗರರವರ ಅಧ್ಯಕ್ಷತೆಯಲ್ಲಿ ಮೇ 6ರಂದು ಗ್ರಾ.ಪಂ.ಸಭಾಂಗಣದಲ್ಲಿ ಸಭೆ‌ ನಡೆಯಿತು.

ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರತೀ ಎರಡು ದಿನಕ್ಕೊಮ್ಮೆ ಧ್ವನಿವರ್ಧಕದ ಮೂಲಕ ಕೊರೋನಾದ ಬಗ್ಗೆ ಜನಜಾಗೃತಿ ಮೂಡಿಸುವುದು, ಸರಕಾರದ ಮಾರ್ಗಸೂಚಿಯ ಮಾಹಿತಿ ನೀಡುವುದು, ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದಂಡ ವಿಧಿಸುವುದು, ನಿಗದಿತ ಸಮಯದೊಳಗೆ ಅಂಗಡಿ ವ್ಯವಹಾರ ಬಂದ್ ಮಾಡದವರಿಗೆ ದಂಡ ವಿಧಿಸುವುದು, ನಿಯಮಾವಳಿ ಉಲ್ಲಂಘಿಸುವ ವರ್ತಕರ ಲೈಸೆನ್ಸ್ ರದ್ದು ಪಡಿಸುವುದು, ಮದುವೆಗೆ ಮಾತ್ರ ಅನುಮತಿ ನೀಡುವುದು, ಉಳಿದ ಯಾವುದೇ ಸಮಾರಂಭಗಳಿಗೆ ಅನುಮತಿ ನೀಡದೇ ಇರುವುದು ಎಂದು ಶಾಸಕರ ನೇತೃತ್ವದ ಸಭೆಯಲ್ಲಿ ಕೈಗೊಳ್ಳಲಾಗಿದ್ದ ನಿರ್ಣಯವನ್ನು ಕಟ್ಟುನಿಟ್ಟಾಗಿ ಅನುಷ್ಠಾನ‌ ಮಾಡಲು ಈ ಸಭೆಯಲ್ಲಿ ತೀರ್ಮಾನಿಸಲಾಯಿತು. ಗ್ರಾ.ಪಂ.‌ಉಪಾಧ್ಯಕ್ಷೆ ಉಷಾ ಲಕ್ಷ್ಮಣ ಪೂಜಾರಿ ಕೋರ್ಯ, ಪಿಡಿಓ ಚಿತ್ರಾವತಿ, ಗ್ರಾ.ಪಂ. ಸದಸ್ಯರು, ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸಹಿತ ಕಾರ್ಯಪಡೆ ಸದಸ್ಯರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.