ಪುತ್ತೂರು ಶಾಸಕರ ಮುತುವರ್ಜಿ- ಭಿಕ್ಷುಕರಿಗೆ, ಬೀದಿ ಬದಿಯ ಅನಾಥರಿಗೆ ನೆಲ್ಲಿಕಟ್ಟೆ ಶಾಲೆಯಲ್ಲಿ ಕಾಯಕಲ್ಪ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ ಸೋಂಕು ಹರಡುತ್ತಿರುವ ಸಂದರ್ಭ ಬೀದಿ ಬದಿಯಲ್ಲಿರುವ ಭಿಕ್ಷುಕರಿಗೆ ಮತ್ತು ಅನಾಥರಿಗೆ ಸರಿಯಾದ ವಸತಿ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಶಾಸಕ ಸಂಜೀವ ಮಠಂದೂರು ಅವರ ಮುತುವರ್ಜಿಯಿಂದ ನೆಲ್ಲಿಕಟ್ಟೆ ಶಾಲೆಯ ಕೊಠಡಿಯಲ್ಲಿ ಅವರಿಗೆ ಉಳಿದು ಕೊಳ್ಳುವ ವ್ಯವಸ್ಥೆ ಮಾಡಲಾಗಿದ್ದು, ಮೇ 6ರಂದು ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಪೌರಾಯುಕ್ತೆ ರೂಪಾ ಶೆಟ್ಟಿ, ಶಾಸಕರ ವಾರ್ ರೂಮ್ ನ ಪಿ.ಜಿ ಜಗನ್ನಿವಾಸ ರಾವ್, ರಪೀಕ್ ದರ್ಬೆ, ಹರಿಪ್ರಸಾದ್ ಯಾದವ್, ಡಾ.ಕೃಷ್ಣ ಪ್ರಸನ್ನ, ಪುರುಷೋತ್ತಮ ಮುಂಗ್ಲಿಮನೆ, ವಸಂತ ವೀರಮಂಗಲ, ಶಿವಪ್ರಸಾದ್, ರಾಘವೇಂದ್ರ ಕಾಮತ್, ರುಕ್ಮಯ ಇದ್ಪಾಡಿ, ರಾಘವೇಂದ್ರ ಪ್ರಭು, ಸೇರಿದಂತೆ ನಗರಸಭೆ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭ ಶಾಸಕ ಸಂಜೀವ ಮಠಂದೂರು ಅವರು ನೆಲ್ಲಿಕಟ್ಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಭೇಟಿ ಲಸಿಕೆ ಕೊರತೆ ಕುರಿತು ಮಾಹಿತಿ ಪಡೆದು ಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.