ಜಿಲ್ಲೆಗೆ 3400 ಕೋವಿಶೀಲ್ಡ್ ಲಸಿಕೆ | ಸೆಕೆಂಡ್ ಡೋಸ್‌ನವರಿಗೆ ಮಾತ್ರ ಹಂಚಿಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಮಂಗಳೂರು: ದ.ಕ. ಜಿಲ್ಲೆಗೆ ಕೊರೋನಾ ನಿಯಂತ್ರಣ ಲಸಿಕೆಯಾದ ಕೋವಿಶೀಲ್ಡ್ 3400 ಡೋಸ್ ಪೂರೈಕೆಯಾಗಿದ್ದು, ಇದನ್ನು ಮಂಗಳೂರು ಸೇರಿದಂತೆ ಜಿಲ್ಲೆಯ ವಿವಿಧ ಕಡೆಯ ಸರಕಾರಿ ಲಸಿಕಾ ಕೇಂದ್ರಗಳಿಗೆ ಸರಬರಾಜು ಮಾಡಲಾಗಿದೆ. ವೆನ್‌ಲಾಕ್‌ನ ಲಸಿಕಾ ಕೇಂದ್ರಕ್ಕೆ 380, ಸುರತ್ಕಲ್, ಮುಲ್ಕಿ ಹಾಗೂ ಮೂಡಬಿದ್ರೆ ಲಸಿಕಾ ಕೇಂದ್ರಗಳಿಗೆ ತಲಾ 200, ಉಳ್ಳಾಲಕ್ಕೆ 180 ಹಾಗೂ ಪುತ್ತೂರು ಸೇರಿದಂತೆ ಜಿಲ್ಲೆಯ ಇತರ ನಾಲ್ಕು ತಾಲೂಕುಗಳಿಗೆ ತಲಾ 500ರಂತೆ 2000 ಡೋಸ್‌ಗಳನ್ನು ಹಂಚಿಕೆ ಮಾಡಲಾಗಿದೆ. ಇದು ಮೇ 8ರಿಂದ ಎರಡನೆ ಡೋಸ್‌ನವರಿಗೆ ಮಾತ್ರ ಲಭ್ಯವಾಗಲಿದೆ ಎಂದು ದ.ಕ. ಜಿಲ್ಲಾ ಕೋವಿಡ್ ಲಸಿಕಾ ನೋಡಲ್ ಅಧಿಕಾರಿ ಡಾ.ರಾಜೇಶ್ ತಿಳಿಸಿದ್ದಾರೆ. ಕೋವ್ಯಾಕ್ಸಿನ್ ಲಸಿಕೆ ಇನ್ನೂ ಜಿಲ್ಲೆಗೆ ಪೂರೈಕೆಯಾಗಿಲ್ಲ.ಮಾತ್ರವಲ್ಲದೆ, ಸದ್ಯ ಫ್ರಂಟ್‌ಲೈನ್ ವರ್ಕರ್ಸ್ ಸೇರಿದಂತೆ ಇತರ ಎಲ್ಲರಿಗೂ ಪ್ರಥಮ ಹಂತದ ಲಸಿಕೆ ನೀಡುವುದನ್ನು ಲಸಿಕೆ ಪೂರ್ಣ ಪ್ರಮಾಣದಲ್ಲಿ ಲಭ್ಯ ಆಗುವವರೆಗೆ ತಡೆ ಹಿಡಿಯಲಾಗಿದೆ. ಪ್ರಸ್ತುತ ಈಗಾಗಲೇ ಪ್ರಥಮ ಡೋಸ್ ಪಡೆದು ದ್ವಿತೀಯ ಡೋಸ್‌ಗೆ ಅವಧಿ ಪೂರ್ಣಗೊಂಡಿರುವವರಿಗೆ ಲಭ್ಯವಿರುವ ಲಸಿಕೆಯನ್ನು ನೀಡಲಾಗುವುದು ಎಂದು ಡಾ. ರಾಜೇಶ್ ಸ್ಪಷ್ಟಪಡಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.