ಉದ್ಯಮಿ ಮನ್ಮಿತ್ ರೈ ಓಲೆಮುಂಡೋವುರವರಿಂದ ರಂಜಾನ್ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸಾರೆಪುಣಿ, ಓಲೆಮುಂಡೋವು ಭಾಗದ 170 ಕ್ಕೂ ಅಧಿಕ ಮನೆಗಳಿಗೆ ಕಿಟ್

ಪುತ್ತೂರು: ಉದ್ಯಮಿ, ಎಂ.ಆರ್.ಗ್ರೂಪ್‌ನ ಮನ್ಮಿತ್ ರೈ ಓಲೆಮುಂಡೋವುರವರಿಂದ ರಂಜಾನ್ ಹಬ್ಬದ ಸಲುವಾಗಿ ಮುಸ್ಲಿಂ ಕುಟುಂಬಗಳಿಗೆ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು. ಕೆಯ್ಯೂರು ಗ್ರಾಮದ ಓಲೆಮುಂಡೋವು ಜಮಾಅತ್‌ನ ಎಲ್ಲಾ ಮನೆಗಳಿಗೆ ಮತ್ತು ಕೆದಂಬಾಡಿ ಗ್ರಾಮದ ಸಾರೆಪುಣಿ ಭಾಗದ ಆಯ್ದ ಮನೆಗಳಿಗೆ ಸೇರಿದಂತೆ ಸುಮಾರು 170 ಕ್ಕೂ ಅಧಿಕ ಮನೆಗಳಿಗೆ ಕಿಟ್ ವಿತರಿಸಲಾಯಿತು.

ಸೌಹಾರ್ದತೆ ಮೆರೆದ ಉದ್ಯಮಿ
ಮನ್ಮಿತ್ ರೈಯವರು ಕಳೆದ ವರ್ಷವೂ ಲಾಕ್‌ಡೌನ್ ಸಂದರ್ಭದಲ್ಲಿ ನೂರಾರು ಮುಸ್ಲಿಂ ಮನೆಗಳಿಗೆ ರಂಜಾನ್ ಕಿಟ್ ವಿತರಿಸಿದ್ದರು. ಈ ವರ್ಷವೂ 170 ಕ್ಕೂ ಅಧಿಕ ಮನೆಗಳಿಗೆ ಕಿಟ್ ವಿತರಿಸುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ. ಬಡವರ್ಗದ ಜನರಿಗೆ ತನ್ನ ಎಂ.ಆರ್.ಗ್ರೂಪ್‌ನ ಮೂಲಕ ಸಾಧ್ಯವಾಗುವ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ.

ಕಳೆದ ವರ್ಷವೂ ಕಿಟ್ ವಿತರಣೆ
ಮನ್ಮಿತ್ ರೈಯವರು ಕಳೆದ ವರ್ಷದ ಲಾಕ್‌ಡೌನ್ ಸಂದರ್ಭದಲ್ಲೂ ಎಂ.ಆರ್.ಗ್ರೂಪ್ ಪರವಾಗಿ ಕೆಯ್ಯೂರು, ಕೆದಂಬಾಡಿ, ಒಳಮೊಗ್ರು ಸೇರಿದಂತೆ ನೆರೆಹೊರೆಯ ಸಾವಿರಕ್ಕೂ ಅಧಿಕ ಮನೆಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

“ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬದ ಸಲುವಾಗಿ ಓಲೆಮುಂಡೋವು ಜಮಾಅತ್‌ನ ಎಲ್ಲಾ ಕುಟುಂಬಗಳಿಗೆ ಮತ್ತು ಸಾರೆಪುಣಿಯ ಆಯ್ದ ಮನೆಗಳಿಗೆ ರಂಜಾನ್ ಕಿಟ್ ವಿತರಣೆ ಮಾಡಲಾಗಿದೆ. ಕೊರೋನ ಲಾಕ್‌ಡೌನ್‌ನ ಈ ಸಂಕಷ್ಟದ ಸಂದರ್ಭದಲ್ಲಿ ನನ್ನ ಕೈಯಿಂದ ಸಾಧ್ಯವಾಗುವ ಸಹಾಯವನ್ನು ಮಾಡುತ್ತಿದ್ದೇನೆ. ಕೋರೋನ ಮುಕ್ತ ಭಾರತ ನಮ್ಮದಾಗಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ.”
ಮನ್ಮಿತ್ ರೈ ಓಲೆಮುಂಡೋವು, ಉದ್ಯಮಿ, ಎಂ,ಆರ್.ಗ್ರೂಪ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.