ಮಜಲುಮಾರು ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ವಿಶ್ವನಾಥ ಗೌಡ ಹೃದಯಾಘಾತದಿಂದ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಕಾರ್ಯದರ್ಶಿಯಾಗಿರುವ ಶಾಂತಿಗೋಡು ಗ್ರಾಮದ ಕಲ್ಕಾರು ವಿಶ್ವನಾಥ ಗೌಡ(51.ವ)ರವರು ಮೇ.8ರಂದು ಹೃದಯಾಘಾತದಿಂದ ನಿಧನರಾದರು.


ನರಿಮೊಗರು ಗ್ರಾಮದ ಮಾಯಂಗಲ ದಿ.ಚೋಮಣ್ಣ ಗೌಡರ ಪುತ್ರನಾಗಿರುವ ವಿಶ್ವನಾಥ ಗೌಡರವರು ಕಳೆದ ಕೆಲ ವರ್ಷಗಳಿಂದ ಶಾಂತಿಗೋಡು ಕಲ್ಕಾರ್‌ನಲ್ಲಿ ವಾಸ್ತವ್ಯವಿದ್ದರು. ಪುರುಷರಕಟ್ಟೆಯಲ್ಲಿ ಈಶ ಇಲೆಕ್ಟ್ರಿಕಲ್‌ನ್ನು ಹೊಂದಿರುವ ವಿಶ್ವನಾಥ ಗೌಡರವರು ಕಳೆದ ಹಲವು ವರ್ಷಗಳಿಂದ ಮಜಲುಮಾರು ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಸೇರಿದಂತೆ ಹಲವು ಸಾಮಾಜಿಕ, ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ ವನಿತ, ಪುತ್ರಿಯರಾದ ವಿತಾಶ್ರಿ, ವಿಭಾಶ್ರೀ, ಸಹೋದರರಾದ ಕೇಶವ ಗೌಡ ಕುರೆಮಜಲು, ವಿಜಯ ಗೌಡ ಮಾಯಂಗಲ, ಉಮೇಶ ಗೌಡ ಮಾಯಂಗಲ, ಸಹೋದರಿಯರಾದ ಶೀಲಾವತಿ ಹಾಗೂ ಪ್ರೇಮಾವತಿಯವರನ್ನು ಅಗಲಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.