ಪಾರ್ಸೆಲ್ ನೀಡದ ಹಿನ್ನೆಲೆ: ಕೇಳಲು ಹೋದಾಗ ನಿಂದಿಸಿ ವೈದ್ಯೆಗೆ ಬೆದರಿಕೆ ಆರೋಪ ಬನ್ನೂರಿನ `ಡೆಲಿವರಿ’ ಫ್ರಾಂಚೈಸಿ ಮಾಲಕ ರಾಜ ಮಾವಿನಕಟ್ಟೆ ವಿರುದ್ಧ ಕೇಸು ದಾಖಲು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರಿಯರ್ ಮೂಲಕ ಬಂದ ಪಾರ್ಸೆಲ್‌ನ್ನು ನೀಡದೇ ಇರುವ ಬಗ್ಗೆ ಪ್ರಶ್ನಿಸಲು ತೆರಳಿದ  ಸಂದರ್ಭದಲ್ಲಿ ವೈದ್ಯೆಯೋರ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ ಆರೋಪದಡಿ ಪುತ್ತೂರು ನಗರ ಠಾಣಾ ಪೊಲೀಸರು ಬನ್ನೂರಿನಲ್ಲಿ ಕಾರ್ಯಾಚರಿಸುತ್ತಿರುವ ‘ಡೆಲಿವರಿ’ ಕೊರಿಯರ್ ಸಂಸ್ಥೆಯ ಫ್ರಾಂಚೈಸಿ ಮಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುತ್ತೂರಿನ ವೈದ್ಯೆ ಡಾ.ಚೇತನಾರವರು ನೀಡಿರುವ ದೂರಿನಂತೆ, ಬನ್ನೂರಿನಲ್ಲಿರುವ ‘ಡೆಲಿವರಿ’ ಕೊರಿಯರ್ ಸಂಸ್ಥೆ ಫ್ರಾಂಚೈಸಿ ಮಾಲಕ ಸುಳ್ಯದ ಗುತ್ತಿಗಾರು ನಿವಾಸಿ ರಾಜ ಮಾವಿನಕಟ್ಟೆ ಎಂಬವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನಗೆ ಸ್ನೇಹಿತೆಯಿಂದ ಪಾರ್ಸೆಲ್ ಒಂದು ಬರುವುದಿತ್ತು. ಪಾರ್ಸೆಲ್‌ನ ಮೊತ್ತವನ್ನು ಮೊದಲೇ ಪಾವತಿಸಲಾಗಿತ್ತು. ಎಪ್ರಿಲ್ 19ರೊಳಗೆ ಆ ಪಾರ್ಸೆಲ್ ನನಗೆ ತಲುಪಬೇಕಿತ್ತು. ಆದರೆ ತಲುಪದೇ ಇದ್ದಾಗ, ಆನ್‌ಲೈನ್‌ನಲ್ಲಿ ಪರಿಶೀಲಿಸಿದಾಗ ‘ಡೆಲಿವರ್ಡ್ ಟು ಕಸ್ಟಮರ್’ ಎಂದು ನನ್ನ ಸಹಿಯನ್ನು ಹಾಕಿ ಅದಾಗಲೇ ಕೊರಿಯರ್ ಪಾರ್ಸೆಲ್‌ನ್ನು ಸ್ವೀಕರಿಸಿರುವ ವಿಚಾರ ತಿಳಿದು ಬಂದಿತ್ತು. ಈ ಬಗ್ಗೆ ಎಪ್ರಿಲ್ 19ರಂದು ಬನ್ನೂರಿನಲ್ಲಿರುವ ಡೆಲಿವರಿ ಸಂಸ್ಥೆಯ ಫ್ರಾಂಚೈಸಿಗೆ ತೆರಳಿ ಪ್ರಶ್ನಿಸಿದ್ದ ಸಂದರ್ಭ ಫ್ರಾಂಚೈಸಿ ಮಾಲಕ ರಾಜ ಮಾವಿನಕಟ್ಟೆ ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪಾರ್ಸೆಲ್‌ನ್ನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ  ದೂರು ನೀಡಿರುವುದಾಗಿ ಡಾ.ಚೇತನಾರವರು ತಿಳಿಸಿದ್ದರು.

ದೂರು ಸ್ವೀಕರಿಸಿದ ಪುತ್ತೂರು ನಗರ ಠಾಣೆಯ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಜಂಬೂರಾಜ್ ಮಹಾಜನ್ ಅವರು  ನ್ಯಾಯಾಧೀಶರ ಆದೇಶದಂತೆ ರಾಜ ಮಾವಿನಕಟ್ಟೆ ವಿರುದ್ಧ ಐಪಿಸಿ ಸೆಕ್ಷನ್ 504 ಮತ್ತು 506ರನ್ವಯ ಪ್ರಕರಣವನ್ನು  ದಾಖಲಿಸಿಕೊಂಡಿದ್ದಾರೆ. ಡಾ.ಚೇತನಾ ಪರವಾಗಿ ವಕೀಲರಾದ ರಾಕೇಶ್ ಮಸ್ಕರೇನಸ್ ಅವರು  ವಕಾಲತ್ತು ವಹಿಸಿ, ರಾಜ ಮಾವಿನಕಟ್ಟೆ ವಿರುದ್ಧ ಪ್ರಕರಣ ದಾಖಲಿಸಲು ಸಹಕರಿಸಿದ್ದಾರೆ.

ಬೆದರಿಕೆ ಆರೋಪ ಸುಳ್ಳು- ರಾಜ ಮಾವಿನಕಟ್ಟೆ ಸ್ಪಷ್ಟನೆ :
ಡಾ.ಚೇತನಾ ಅವರ ಪಾರ್ಸೆಲ್ ಅನ್ನು ಡೆಲಿವರಿ ಅಪ್‌ಡೇಟ್ ಮಾಡಿ ಕಚೇರಿಯಲ್ಲಿ ಇಟ್ಟದ್ದು ಹೌದು, ನಮ್ಮ ಡೆಲಿವರಿ ಬಾಯ್ ತಪ್ಪಾಗಿ ಡೆಲಿವರಿ ಅಪ್‌ಡೇಟ್ ಮಾಡಿದ್ದರಿಂದ ನಾನು ಕಂಪೆನಿಗೆ ರಿವೋಕ್ ಮಾಡಲು ತಿಳಿಸಿದ್ದೆ.ಇದಾದ ನಂತರ ಚೇತನಾ ಅವರು ನಮ್ಮ ಕಚೇರಿಗೆ ಬಂದಾಗ ಅವರಿಗೆ ಪಾರ್ಸೇಲ್ ಅನ್ನು ಹಸ್ತಾಂತರಿಸಿ ಡೆಲಿವರಿ ಅಪ್‌ಡೇಟ್ ಮಾಡಿದ ಕಾರಣವನ್ನೂ ತಿಳಿಸಲಾಗಿತ್ತು.ಆದರೆ ಅವರಿಗೆ ನಮ್ಮ ಮಾತನ್ನು ಕೇಳುವ ಸೌಜನ್ಯ ಇರಲಿಲ್ಲ.ನಾವು ಅವರ ಪಾರ್ಸೇಲ್ ಕೊಡಲು ನಿರಾಕರಿಸಿಲ್ಲ. ಬೆದರಿಕೆಯೂ ಹಾಕಿಲ್ಲ. ಅವರಿಗೆ ಪಾರ್ಸೆಲ್ ಕೊಟ್ಟಿದ್ದೇವೆ.ಅವರು ಅದನ್ನು ತೆಗೆದುಕೊಂಡು ಹೋಗಿದ್ದಾರೆ. ಇದಕ್ಕೆ ಬೇಕಾದ ಎಲ್ಲಾ ಸಾಕ್ಷ್ಯಾಧಾರಗಳು ನಮ್ಮ ಬಳಿ ಇದೆ ಎಂದು ರಾಜ ಮಾವಿನಕಟ್ಟೆ ಅವರು ಸ್ಪಷ್ಟನೆ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.