ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಅಂಬಿಕಾ ಶಿಕ್ಷಣ ಸಂಸ್ಥೆಯಿಂದ ನೂತನ ಯೋಜನೆ – ದೇಸೀಯ ಜ್ಞಾನವನ್ನು ಮನೆಯಲ್ಲೇ ಗಳಿಸುವುದಕ್ಕೆ ಸಿದ್ಧರಾದ ವಿದ್ಯಾರ್ಥಿಗಳು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ನಟ್ಟೋಜ ಫೌಂಡೇಶನ್‌ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಅಂಬಿಕಾ ಬಾಲವಿದ್ಯಾಲಯ ಹಾಗೂ ಅಂಬಿಕಾ ಪಿಯು ವಿದ್ಯಾರ್ಥಿಗಳ ಮನೋವಿಕಾಸ ಹಾಗೂ ಸೃಜನಶೀಲತೆಯನ್ನು ವೃದ್ಧಿಗೊಳಿಸುವ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳೆಲ್ಲ ಮನೆಯಲ್ಲಿಯೇ ಇರುವುದರಿಂದ ವಿದ್ಯಾರ್ಥಿಗಳ ಬೆಳವಣಿಗೆಗೆ ಹಾನಿಯಾಗಬಾರದೆಂಬ ಉದ್ದೇಶದಿಂದ ಇಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

ಆಧುನಿಕ ಸಮಾಜದ ಧಾವಂತಮಯ ಬದುಕಿನಲ್ಲಿ ಹಿರಿಯರ ಅನುಭವ ಕಿರಿಯರಿಗೆ ಸಮರ್ಪಕವಾಗಿ ಹರಿಯದಿರುವುದರಿಂದ ಅನೇಕ ಕರಕುಶಲ ವಸ್ತುವಿನ್ಯಾಸಗಳನ್ನು ರೂಪಿಸುವವರ ಸಂಖ್ಯೆ ಗಣನೀಯವಾಗಿ ಕುಗ್ಗುತ್ತಿದೆ.ಇಂತಹ ಸಂದರ್ಭದಲ್ಲಿ ನಮ್ಮ ದೇಸೀಯ ಸೃಜನಶೀಲತೆಯನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಅಂಬಿಕಾ ಸಂಸ್ಥೆ ಇಂತಹದ್ದೊಂದು ಪ್ರಯತ್ನಕ್ಕೆಅಡಿಯಿಟ್ಟಿದೆ.

ವಿದ್ಯಾರ್ಥಿಗಳು ಮಾಡಬೇಕಾದ್ದೇನು? :
ವಿದ್ಯಾರ್ಥಿಗಳೆಲ್ಲ ಮನೆಯಲ್ಲಿಯೇ ಇರುವುದರಿಂದ ಎಲ್ಲರೂ ತಮ್ಮ ಹೆತ್ತವರಿಂದ ಅಥವ ಹಿರಿಯರಿಂದ ಕೆಲವೊಂದು ಕರಕುಶಲ ಸಂಗತಿಗಳನ್ನು ಕಲಿತು ಪ್ರಾಯೋಗಿಕವಾಗಿ ತಯಾರಿಸಬೇಕು. ವಸ್ತ್ರ ವಿನ್ಯಾಸ, ಬ್ಯಾಗ್‌ರಚನೆ, ಚಿತ್ರ ಕಲೆ, ಬುಟ್ಟಿ ಹೆಣೆಯುವಿಕೆ, ಕಸದಿಂದರಸ, ವಿವಿಧ ಬಗೆಯ ಅಲಂಕಾರಿಕ ವಸ್ತುಗಳು ಹೀಗೆ ಯಾವುದನ್ನೇ ಆದರೂ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡು ರಚಿಸಬೇಕು. ವಿದ್ಯಾರ್ಥಿಗಳು ಮಾಡಬಹುದಾದ ವಸ್ತುಗಳ ರಚನೆಯ ಕೆಲವು ವೀಡಿಯೋಗಳನ್ನೂ ಸಂಸ್ಥೆಯ ವತಿಯಿಂದ ಕಳುಹಿಸಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಾಗುತ್ತದೆ.ಇನ್ನು ದೀರ್ಘಕಾಲಿಕವಾಗಿ ಹಾಳಾಗದೆ ಉಳಿದುಕೊಳ್ಳುವ ಆಹಾರ ಪದಾರ್ಥಗಳನ್ನೂ ವಿದ್ಯಾರ್ಥಿಗಳು ತಯಾರಿಸಬಹುದು.ಹಪ್ಪಳ, ಸೆಂಡಿಗೆಯಂತಹ ಹಲವು ಬಗೆಯ ಖಾದ್ಯಗಳನ್ನು ವಿದ್ಯಾರ್ಥಿಗಳು ರೂಪಿಸಬಹುದು.

ಹೀಗೆ ವಿದ್ಯಾರ್ಥಿಗಳು ತಯಾರುಗೊಳಿಸಿದ ವಸ್ತುಗಳನ್ನು ಲಾಕ್‌ಡೌನ್ ಮುಗಿದ ನಂತರ ಶಾಲಾ ಕಾಲೇಜುಗಳ ಆರಂಭದ ಸಂದರ್ಭದಲ್ಲಿ ಒಂದು ದಿನ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನೂ ಅಂಬಿಕಾ ಸಂಸ್ಥೆಯಲ್ಲಿ ನಡೆಸಿಕೊಡಲಾಗುತ್ತದೆ.ಇದರಿಂದ ಬರುವ ಆದಾಯವನ್ನುಆಯಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.ಇದರಿಂದ ಮರೆತು ಹೋಗುವುದರಲ್ಲಿರುವ ಅನೇಕ ಕರಕುಶಲ ಸಂಗತಿಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಕೆಲಸವೂ ಆಗುತ್ತದೆ.ಇಂದಿನ ದಿನಗಳಲ್ಲಿ ನಮ್ಮ ಹಿರಿಯರ ಅನುಭವವನ್ನು ಕೇಳಿ ಅದನ್ನು ಪ್ರಾಯೋಗಿಕವಾಗಿ ಅಳವಡಿಸುವ ಪದ್ಧತಿ ಕಡಿಮೆಯಾಗುತ್ತಿದೆ. ಈ ಲಾಕ್‌ಡೌನ್‌ ಅನ್ನು ಅಂತಹ ಪಾರಂಪರಿಕ ಶಿಕ್ಷಣವನ್ನು ಕಲಿಯುವುದಕ್ಕಾಗಿ ಮಕ್ಕಳು ಬಳಸಿಕೊಳ್ಳಬೇಕು. ಇದರಿಂದ ನಮ್ಮ ದೇಸೀಯವಾದ ಅವೆಷ್ಟೋ ಕಲೆಗಳು ಮುಂದಿನ ತಲೆಮಾರಿಗೆ ದೊರಕುವುದಕ್ಕೆ ಸಾಧ್ಯವಾಗುತ್ತದೆ’. ಎಂಬುದು ಸಂಸ್ಥೆಯ ಕೋಶಾಧಿಕಾರಿಯಾಗಿರುವ ರಾಜಶ್ರೀ ನಟ್ಟೋಜ ಅವರ ಅಭಿಪ್ರಾಯ.

‘ನಮ್ಮ ಈ ಯೋಜನೆಗೆ ಹೆತ್ತವರಿಂದಲೂ ಅತ್ಯುತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.ಮಕ್ಕಳು ಕೇವಲ ಪಠ್ಯಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ ನಮ್ಮ ಸಂಸ್ಕೃತಿ, ಸಂಸ್ಕಾರ, ಆಚರಣೆಯೇ ಮೊದಲಾದ ನಾನಾ ಸಂಗತಿಗಳಲ್ಲಿ ತೊಡಗಿಕೊಳ್ಳಬೇಕೆಂಬುದು ನಮ್ಮ ಆಶಯ. ಹಾಗಾಗಿ ಲಾಕ್‌ಡೌನ್ ಸಂದರ್ಭವನ್ನು ಶಾಪ ಅಂದುಕೊಳ್ಳದೆ ವರವನ್ನಾಗಿಸುವ ಪ್ರಯತ್ನಕ್ಕೆ ಅಂಬಿಕಾ ಸಂಸ್ಥೆ ಅಡಿಯಿಟ್ಟಿದೆ’ – ಸುಬ್ರಹಣ್ಯ ನಟ್ಟೋಜ, ಕಾರ್ಯದರ್ಶಿಗಳು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.