ಕೊರೋನಾಘಾತ: ತರಕಾರಿ ಗ್ರಾಮ ಚಾರ್ವಾಕದ ತರಕಾರಿಗೆ ಬೇಡಿಕೆಯಿಲ್ಲ – ಕಂಗೆಟ್ಟ ತರಕಾರಿ ಕೃಷಿಕ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸುಧಾಕರ ಆಚಾರ್ಯ ಕಾಣಿಯೂರು

ಕಾಣಿಯೂರು : ಕಡಬ ತಾಲೂಕಿನ ಚಾರ್ವಾಕ ಗ್ರಾಮ ಪರಿಚಯವಾಗುವುದು ತರಕಾರಿ ಕೃಷಿಯಿಂದ .ಜಿಲ್ಲೆಗೆ ಅತೀ ಹೆಚ್ಚು ತರಕಾರಿ ಪೂರೈಕೆಯಾಗುವುದು ಈ ಗ್ರಾಮದಿಂದಲೇ. ಇಲ್ಲಿನ ಹೆಚ್ಚಿನ ಕುಟುಂಬಗಳು ತರಕಾರಿ ಬೆಳೆಯನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದೆ. ಆದರೆ ವಿಶ್ವಕ್ಕೆ ವಕ್ಕರಿಸಿದ ಕೊರೊನಾಘತ ತರಕಾರಿ ಕೃಷಿಗೂ ಬಾಧಿಸಿದೆ. ಫಸಲಿಗೆ ಬೇಡಿಕೆಯೆ ಇಲ್ಲವಾಗಿದೆ.

ಲಾಕ್‌ಡೌನಿಂದಾಗಿ ಫಸಲನ್ನು ದೂರದ ಮಂಗಳೂರಿನ ವ್ಯಾಪಸ್ಥರ ಬಳಿ ಸಾಗಾಟ ಮಾಡುವುದೆ ಸಮಸ್ಯೆಯಾಗಿದೆ. ಅತ್ತ ವ್ಯಾಪರಸ್ಥರು ಗ್ರಾಹಕರಿಲ್ಲದೆ ವ್ಯಾಪರವಿಲ್ಲ ತರಕಾರಿ ಇತ್ತ ತರಬೇಡಿ ಎನ್ನುತ್ತಾರೆ. ಕಳೆದ ಭಾರಿಯೂ ಲಾಕ್‌ಡೌನಿಂದಾಗಿ ತೊಂದರೆಯಾಗಿದೆ. ಈ ಭಾರಿಯೂ ಮತ್ತೆ ಸಂಕಷ್ಟಕ್ಕಿಡಾಗಿದ್ದೇವೆ. ನೀರಾವರಿಗಾಗಿ ಪೈಪು, ಚಪ್ಪರ ಹೀಗೆ ಸಾವಿರರಾರುಗಟ್ಟಲೆ ಬಂಡವಾಳ ಹಾಕಿ ರೈತ ಬೆಳೆದ ತರಕಾರಿ ಈಗ ಚಪ್ಪರದ ಬಳ್ಳಿಯಲ್ಲಿ ಬಾಕಿಯಾಗಿದೆ. ಕೃಷಿಗೆ ಹಾಕಿದ ಬಂಡವಾಲದಲ್ಲಿ ಲಾಭವಿಲ್ಲದೆ ರೈತ ಕೈ ಸುಟ್ಟುಕೊಂಡಿದ್ದಾನೆ ಇದು ರೈತನ ಆತ್ಮಬಲವನ್ನು ಕುಗ್ಗಿಸಿದೆ.

ಗ್ರಾಮದಲ್ಲಿ ತರಕಾರಿ ಬೆಳೆಯುವುದರಲ್ಲಿ ವಿದ್ಯಾವಂತ ಯುವ ಸಮೂದಾಯದ ಪಾಲು ಹೆಚ್ಚಾಗಿದೆ. ವೈಟ್ ಕಾಲರ್ ಜಾಬ್‌ಗೆ ಮಾರು ಹೋಗದೆ ತಮ್ಮದೆ ನೆಲದಲ್ಲಿ ಸಾಂಪ್ರದಾಯಿಕ ಕೃಷಿಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಕುಂಬಳಕಾಯಿ, ಪಡವಲಕಾಯಿ, ಹಲಸಂಡೆ, ಸೌತೆಕಾಯಿ ಮೊದಲಾದ ತರಕಾರಿಗಳನ್ನು ಬೆಳೆದು ಸಾವಿರಗಟ್ಟಲೇ ಲಾಭಗಳಿಸುತ್ತಿದ್ದಾರೆ. ಇದೀಗ ಬೇಸಿಗೆಯ ಒಂದು ಹಂತದ ತರಕಾರಿ ಬೆಳೆ ಅಂತಿಮವಾಗುತ್ತ ಬರುತ್ತಿದೆ. ಮುಂದಿನ ಮುಂಗಾರಿನಲ್ಲಿ ಬೆಳೆಯುವ ತರಕಾರಿಗೆ ತಯಾರಾಗುವ ಈ ಸಂದರ್ಭ ಕೊರೊಣಾ ಎಪೇಕ್ಟ್ ಜೋರಾಗಿದೆ. ಹಾಗಾಗಿ ತರಕಾರಿ ಕೃಷಿಯತ್ತ ಮುಖ ಮಾಡುವುದು ಬೇಡ ಎಂಬ ಸ್ಥಿತಿಗೆ ಬಂದು ನಿಂತಿದೆ ಎನ್ನುತ್ತಾರೆ ಈ ಭಾಗದ ಕೃಷಿಕರು.

ಬೇಸಿಗೆಯಲ್ಲಿ ನಡೆಯುವ ಶುಭಕಾರ್ಯಗಳ ಪರ್ವ ಕಾಲದಲ್ಲಿ ತರಕಾರಿಗೆ ಬಹು ಬೇಡಿಕೆಯಿರುತ್ತದೆ. ಆದರೆ ಇದೇ ಸಂದರ್ಭದಲ್ಲಿ ಕಳೆದ ವರ್ಷ ಲಾಕ್‌ಡೌನ ಆಗಿತ್ತು. ಈ ಭಾರಿಯೂ ಮತ್ತೆ ಲಾಕ್‌ಡೌನ್ ಆಗಿದೆ. ಈ ಭಾಗದ ರೈತರು ತರಕಾರಿಗಳನ್ನು ಹೆಚ್ಚಾಗಿ ಮಂಗಳೂರಿಗೆ ಸಾಗಿಸುತ್ತಾರೆ. ಕಳೆದ ವಾರದಿಂದ ಮಂಗಳೂರಿನ ವ್ಯಾಪರಸ್ಥರು ಇತ್ತ ತರಕಾರಿ ತರಬೇಡಿ ಎಂದಿದ್ದಾರೆ. ಸ್ಥಳಿಯವಾಗಿಯೂ ಬೇಡಕೆಯಿಲ್ಲ. ಒಟ್ಟಿನಲ್ಲಿ ಈ ಭಾರಿಯೂ ತರಕಾರಿ ಬೆಳೆದ ರೈತ ಸಂಕಷ್ಟಕ್ಕಿಡಾಗಿದ್ದಾನೆ – ಮೋಹನ್ ಚಂದ್ರ ಖಂಡಿಗ ತರಕಾರಿ ಕೃಷಿಕ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.