ರಾಮಕುಂಜ ಗ್ರಾ.ಪಂ. ಕೋವಿಡ್ ಕಾರ್ಯಪಡೆ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಒಟ್ಟು 37 ಮಂದಿಗೆ ಕೋರೊನಾ 6 ಮಂದಿ ಗುಣಮುಖ 2 ನಿಧನ,29 ಮಂದಿ ಹೋಮ್ ಕೊರೈಂಟೈನ್

ಆಲಂಕಾರು: ರಾಮಕುಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋವಿಡ್ ಕಾರ್ಯಪಡೆಯ ಸಭೆಯು ಗ್ರಾ.ಪಂ ಅದ್ಯಕ್ಷರಾದ ಮಾಲತಿಯವರ ಅದ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಕೋವಿಡ್ ನಿಯಮವಾಳಿಯನ್ನು ಸಭೆಗೆ ತಿಳಿಸಿ ರಾಮಕುಂಜ ಗ್ರಾ.ಪಂ ವ್ಯಾಪ್ತಿಯ ರಾಮಕುಂಜ ,ಹಳೇನೆರೆಂಕಿ ಗ್ರಾಮದಲ್ಲಿ ಇದುವರೆಗೆ ಒಟ್ಟು 37 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದ್ದು ಅದರಲಿ 6 ಮಂದಿ ಗುಣಮುಖರಾಗಿದ್ದಾರೆ. ರಾಮಕುಂಜ ಗ್ರಾಮದ ಪೆರ್ಜಿ ಹಾಗು ನಿರಾಜೆಯಲ್ಲಿ 42ವರ್ಷದ ಪುರುಷ ಹಾಗು 60ವರ್ಷದ ಮಹಿಳೆ ಒಟ್ಟು 2ಮಂದಿ ಕೋವಿಡ್ ನಿಂದ ಮೃತರಾಗಿದ್ದಾರೆ, 29 ಮಂದಿ ಹೋಮ್ ಕೊರೈಂಟೈನ್ ನಲ್ಲಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಕೋವಿಡ್ ಕಾರ್ಯಪಡೆಯ ಸದಸ್ಯರಾದ ಗ್ರಾ.ಪಂಸದಸ್ಯರು,ಅರೋಗ್ಯ ,ಅಂಗನವಾಡಿ,ಅಶಾ ಕಾರ್ಯಕರ್ತರು ಹಾಗು ವಿವಿದ ಮಂದಿ ವಿವಿದ ಸಲಹೆ ಸೂಚನೆ ನೀಡಿದರು. ಸಭೆಯಲ್ಲಿ ಕೋವಿಡ್ ಸಂಧರ್ಭದಲ್ಲಿ ಕೋವಿಡ್ ಕಾರ್ಯಪಡೆಯ ಸದಸ್ಯರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ಸಮಸ್ಯೆ ಹಾಗು ಮಾಹಿತಿಯನ್ನು ಸಂಗ್ರಹ ಮಾಡುವುದಾಗಿ ಸಭೆ ತೀರ್ಮಾನಿಸಲಾಯಿತು,ಮನೆ ಮನೆ ಭೇಟಿಯ ಸಂಧರ್ಭದಲ್ಲಿ ಮಾಸ್ಕ್ ಹಾಗು ಸ್ಯಾನಿಟರೈಸ್ ನ್ನು ಪಂಚಾಯತ್ ವತಿಯಿಂದ ನೀಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಜೆರಾಲ್ಡ್ ಮಸ್ಕರೇನಸ್ ಸ್ವಾಗತಿಸಿ,ಕಾರ್ಯದರ್ಶಿ ಲಲಿತಾ ಜಿ.ಡಿ ಧನ್ಯವಾದ ಸಮರ್ಪಿಸಿದರು.ಪಂಚಾಯತ್ ಉಪಾದ್ಯಕ್ಷ ಪ್ರಶಾಂತ ಆರ್.ಕೆ ಸೇರಿದಂತೆ ಗ್ರಾ.ಪಂ ಸದಸ್ಯರು,ಅರೋಗ್ಯ,ಅಂಗನ,ಆಶಾ ಕಾರ್ಯಕರ್ತೆಯರು ಹಾಗು ಕೋರೊನ ಕಾರ್ಯಪಡೆಯ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.