ಐತ್ತೂರು:ಮುಜೂರು ಕತ್ತಿಯಿಂದ ಸಹೋದರನಿಗೆ ಹಲ್ಲೆ ಪ್ರಕರಣ: ಆರೋಪಿ ಪ್ರೀತಮ್ ವಿರುದ್ದ ಪ್ರಕರಣ ದಾಖಲು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಕಡಬ: ಐತ್ತೂರು ಗ್ರಾಮದ ಮುಜೂರುನಲ್ಲಿ ಸಹೋದರನಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಆರೋಪಿ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐತ್ತೂರು ಗ್ರಾಮದ ಮುಂಡಡ್ಕ ನಿವಾಸಿ ಬಾಳಪ್ಪ ಗೌಡ ಎಂಬವರ ಎರಡನೆಯ ಪತ್ನಿಯ ಪುತ್ರ ಪ್ರೀತಮ್ ಎಂಬವರು ಬಾಳಪ್ಪ ಗೌಡರ ಮೊದಲನೆ ಪತ್ನಿಯ ಪುತ್ರ ಧ್ರುವಕುಮಾರ್ ಎಂಬವರಿಗೆ ಮೇ.14ರಂದು ರಾತ್ರಿ ಮನೆಯ ಅಂಗಲಕ್ಕೆ ಅಕ್ರಮ ಪ್ರವೇಶ ಮಾಡಿ ,ಅವಾಚ್ಯ ಶಬ್ದಗಳಿಂದ ನಿಂದಿಸಿ ಲಾಂಗ್ ನಿಂದ ಕಡಿದಿದ್ದು, ಬಳಿಕ ಧ್ರುವ ಕುಮಾರ್ ಅವರನ್ನು ಕಡಬ ಸಮುದಾಯ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಪುತ್ತೂರು ಆಸ್ಪತ್ರೆ ಗೆ ದಾಖಲಿಸಲಾಗಿತ್ತು.ಈ ಮದ್ಯೆ ಆರೋಪಿ ಪ್ರೀತಮ್ ತಲೆ ಮರೆಸಿಕೊಂಡಿದ್ದು ಇವರ ವಿರುದ್ದ ಕಡಬ ಠಾಣೆಯಲ್ಲಿ ಕಲಂ : 447.504.326.506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮಧ್ಯಪಾನ ಮಾಡಿರುವುದರ ಬಗ್ಗೆ ಅಪಪ್ರಚಾರ- ಹಲ್ಲೆಗೆ ಕಾರಣ?

ಈ ಬಗ್ಗೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಧ್ರುವ ಕುಮಾರ್ ಹೇಳಿಕೆ ನೀಡಿ,

ನಾನು ಮನೆಯಲ್ಲಿ ಇರುವ ಸಮಯ ನನ್ನ ಮನೆಯ ಹತ್ತಿರದಲ್ಲಿ ಪ್ರತ್ಯೇಕ ಮನೆ ಮಾಡಿಕೊಂಡಿರುವ ನನ್ನ ತಂದೆಯ ಎರಡನೆಯ ಪತ್ನಿಯ ಮಗ ಪ್ರೀತಮ್ ಸಂಜೆ 7.15 ಗಂಟೆ ಸಮಯಕ್ಕೆ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ‘ನಾನು ಬಾರ್ ನಲ್ಲಿ ಕುಡಿದು ಗಲಾಟೆ ಮಾಡಿದ್ದಾಗಿ ಊರಿನಲ್ಲಿ ಅಪಪ್ರಚಾರ ಮಾಡಿ ನನ್ನ ಮಾನ ತೆಗೆದಿಯಲ್ಲ ಎಂದು ಅವ್ಯಾಚ್ಯ ಶಬ್ದಗಳಿಂದ ಬೈಯುತ್ತ ಆತನ ಕೈಯಲ್ಲಿದ್ದ ಲಾಂಗ್ ನಿಂದ ನನ್ನ ಬಲಬದಿ ಎದೆಗೆ ಬಲವಾಗಿ ಕಡಿದಿದ್ದು ಅಷ್ಟರಲ್ಲಿ ಹೆಂಡತಿ ನಿಖಿತಾ. ಜೊತೆಯಲ್ಲಿ ಕೆಲಸ ಮಾಡುವ ಪ್ರಶಾಂತ್. ಹಾಗೂ ನೆರೆಮನೆಯ ಸಂದೀಪ್. ರವರು ಬಂದು ಆರೋಪಿ ಪ್ರೀತಮ್ ಪಿರ್ಯಾದಿಯ ಮೇಲೆ ಲಾಂಗ್ ನಿಂದ ಹಲ್ಲೇ ಮಾಡುವುದನ್ನು ತಡೆದಾಗ ಆತನ ಕೈಯಲ್ಲಿದ್ದ ಲಾಂಗ್ ಅನ್ನು ಅಲ್ಲೇ ಬಿಸಾಡಿ ಇಂದು ಮುಂದಕ್ಕೆ ನೀನು ನಾನು ಮದ್ಯ ಸೇವಿಸಿ ಗಲಾಟೆ ಮಾಡುತ್ತಿರುವುದಾಗಿ ಅಪಪ್ರಚಾರ ಮಾಡಿದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ವಾಗಿ ಬೆದರಿಕೆ ಹಾಕಿ ಹೋಗಿರುತ್ತಾನೆ ಈ ಘಟನೆಗೆ ಆರೋಪಿ ಪ್ರೀತಮ್ ಅಮಲು ಪದಾರ್ಥ ಸೇವಿಸಿ ಗಲಾಟೆ ಮಾಡುತ್ತಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದೆ ಕಾರಣವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.