34 ನೆಕ್ಕಿಲಾಡಿ: ಮಾನಸಿಕ ಆಸ್ವಸ್ಥೆಯ ಮೇಲೆ ಅತ್ಯಾಚಾರ ಆರೋಪ-ಪೊಲೀಸರಿಗೆ ದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ವಿವಾಹಿತ ಮಾನಸಿಕ ಅಸ್ವಸ್ಥೆಯೋರ್ವರ ಮೇಲೆ ಅತ್ಯಾಚಾರ ನಡೆಸಿ, ಅವರನ್ನು ಗರ್ಭಿಣಿಯಾಗಿಸಿರುವ ಪ್ರಕರಣವೊಂದು 34 ನೆಕ್ಕಿಲಾಡಿಯಲ್ಲಿ ನಡೆದಿದ್ದು, ಈ ಬಗ್ಗೆ ಆಕೆಯ ತಾಯಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

34 ನೆಕ್ಕಿಲಾಡಿಯ ಭೀತಲಪ್ಪು ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಪುತ್ತೂರು ತಾಲೂಕು ನರಿಮೊಗರು ಮೂಲದವರಾಗಿರುವ ತಾಯಿ ಮತ್ತು ಮಗಳು ಕಳೆದ ಒಂದು ವರ್ಷದಿಂದ ವಾಸ್ತವ್ಯವಿದ್ದರು. ಇವರ 44ರ ಹರೆಯದ ಮಗಳು ಮಾನಸಿಕ ಅಸ್ವಸ್ಥೆಯಾಗಿದ್ದು, ಇವರ ಪತಿ ಗುಜರಾತ್‌ನಲ್ಲಿದ್ದಾರೆ. ಕಳೆದ 10 ತಿಂಗಳ ಹಿಂದೆ ಪತಿ ಗುಜರಾತ್‌ಗೆ ತೆರಳಿದ್ದು, ಆ ಬಳಿಕ ಇಲ್ಲಿಗೆ ಬಂದಿರಲಿಲ್ಲ. ಈ ನಡುವೆ ಕಳೆದ ಮೇ 12ರಂದು ಇವರ ಮನೆಗೆ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಭೇಟಿ ನೀಡಿದ್ದು, ಈ ಸಂದರ್ಭ ಸಂಶಯ ಬಂದು ಅವರನ್ನು ಸ್ಕ್ಯಾನಿಂಗ್ ಮಾಡಿಸಲು ತಿಳಿಸಿದಾಗ ಈಕೆ ಏಳು ತಿಂಗಳ ಗರ್ಭಿಣಿಯೆಂದು ತಿಳಿದು ಬಂದಿದೆ. ಬಳಿಕ ಈಕೆಯ ತಾಯಿ ಈ ಬಗ್ಗೆ ಮೇ 15ರಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ತನ್ನ ಮಗಳ ಮೇಲೆ ದರ್ಬೆಯ ಸುರೇಶ್ ಪ್ರಭು ಎಂಬಾತ ಅತ್ಯಾಚಾರ ನಡೆಸಿ, ಆಕೆಯನ್ನು ಗರ್ಭಿಣಿಯನ್ನಾಗಿಸಿರುವುದಾಗಿ ಆರೋಪಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.