ಕೋವಿಡ್ ವಾರಿಯರ್‍ಸ್, ಸರಕಾರಿ ನೌಕರರಿಗೆ ಲಸಿಕೆ ನೀಡುವಂತೆ ಶಾಸಕರು, ತಾ|ಸರಕಾರಿ ನೌಕರರ ಸಂಘದಿಂದ ಎಸಿ, ತಹಶೀಲ್ದಾರ್‌ಗೆ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾರಣಾಂತಿಕ ಕೋವಿಡ್ ಎರಡನೇ ಅಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೋವಿಡ್ ವಾರಿಯರ್‍ಸ್ ಹಾಗೂ ತಾಲೂಕಿನ ಎಲ್ಲಾ ಸರಕಾರಿ ನೌಕರರಿಗೆ ಲಸಿಕೆ ನೀಡುವ ಬಗ್ಗೆ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯ ವತಿಯಿಂದ ಪುತ್ತೂರು ಶಾಸಕ ಸಂಜೀವ ಮಠಂದೂರು, ಸಹಾಯಕ ಆಯುಕ್ತ ಡಾ|ಯತೀಶ್ ಉಳ್ಳಾಲ್ ಹಾಗೂ ತಹಶೀಲ್ದಾರ್ ರಮೇಶ್‌ಬಾಬುರವರಿಗೆ ಮೇ 15 ರಂದು ಮನವಿ ಹಸ್ತಾಂತರಿಸಿ ಮನವಿ ಮಾಡಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗ ಸರ್ವವ್ಯಾಪಿಯಾಗಿ ಹರಡಿದ್ದು, ಇದರ ನಿಯಂತ್ರಣಕ್ಕೆ ಸರಕಾರಿ ನೌಕರರು ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಸಾಂಕ್ರಾಮಿಕ ರೋಗಕ್ಕೆ ನೌಕರರೂ ತುತ್ತಾಗುತ್ತಿದ್ದು ಸಾರ್ವಜನಿಕರು ಜೀವ ಉಳಿಸಲು ಹೋರಾಡುವ ಸದ್ರಿ ನೌಕರರಿಗೆ ಕೋವಿಡ್ ಲಸಿಕೆ ಬಹಳ ಅಗತ್ಯವಾಗಿ ಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಕೋವಿಡ್ ವಾರಿಯರ್ಸ್‌ಗಳಿಗೆ, ಕೊರೋನಾ ನೋಡಲ್ ಆಫೀಸರ್‍ಸ್, ಕೊರೋನಾ ಫ್ಲೈಯಿಂಗ್ ಸ್ಕ್ವಾಡ್, ರೈಲ್ವೇ ಸ್ಟೇಷನ್ನಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಹಾಗೂ ವಯಸ್ಸು ೧೮ ರಿಂದ ಹಿಡಿದು ನಿವೃತ್ತಿ ಅಂಚಿನಲ್ಲಿರುವ ಎಲ್ಲಾ ಸರಕಾರಿ ನೌಕರರಿಗೆ ಪ್ರಥಮ ಆದ್ಯತೆಯಲ್ಲಿ ಕೋವಿಡ್ ಲಸಿಕೆ ನೀಡಲು ಸಹಾಯಕ ಆಯುಕ್ತರು ಸೂಕ್ತ ವ್ಯವಸ್ಥೆ ಮಾಡಬೇಕೆಂದು ಮನವಿಯಲ್ಲಿ ವಿನಂತಿಸಿರುತ್ತಾರೆ.

ಪುತ್ತೂರು ಶಾಸಕ ಸಂಜೀವ ಮಠಂದೂರು, ಸಹಾಯಕ ಆಯುಕ್ತ ಡಾ|ಯತೀಶ್ ಉಳ್ಳಾಲ್ ಹಾಗೂ ತಹಶೀಲ್ದಾರ್ ರಮೇಶ್‌ಬಾಬುರವರಿಗೆ ಮನವಿಯನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ, ಕಾರ್ಯದರ್ಶಿ ಅಬ್ರಹಾಂ ಎಸ್.ಎ, ಕೋಶಾಧಿಕಾರಿ ನಾಗೇಶ್, ಸರಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ಸೀತಾರಾಮ್‌ರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.