ನಿಡ್ಪಳ್ಳಿಯ ಕುಕ್ಕುಪುಣಿಯಿಂದ ಪಡುಮಲೆ, ಈಶ್ವರಮಂಗಲ ರಸ್ತೆ ಅಭಿವೃದ್ಧಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅನುದಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 ರೂ.7 ಕೋ 53 ಲಕ್ಷದಲ್ಲಿ ಸುಮಾರು 8.85 ಕಿ .ಮೀ. ರಸ್ತೆ ಅಗಲಗೊಳಿಸಿ ಡಾಮರೀಕರಣ

ನಿಡ್ಪಳ್ಳಿ: ಇಲ್ಲಿಯ ಕುಕ್ಕುಪುಣಿಯಿಂದ ಪಡುಮಲೆ, ಈಶ್ವರಮಂಗಲ ಹೋಗುವ ರಸ್ತೆ ಅಭಿವೃದ್ಧಿಗೆ ಮೆ.13 ರಂದು ಈಶ್ವರಮಂಗಲದಲ್ಲಿ ಅಧಿಕೃತ ಚಾಲನೆ ನೀಡಲಾಯಿತು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ನಿಧಿಯಿಂದ ರೂ. 753 ಲಕ್ಷ ವೆಚ್ಚದಲ್ಲಿ ಸುಮಾರು 8.85 ಕಿ.ಮೀ ರಸ್ತೆಯು 3.75 ಮೀಟರ್ ಅಗಲ ಗೊಳಿಸಿ ಡಾಮರು ರಸ್ತೆಯಾಗಿ ಅಭಿವೃದ್ಧಿ ಗೊಳ್ಳಲಿದೆ.
ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕ ರಸ್ತೆಯಾಗಲಿದೆ.
ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಪುತ್ತೂರು ಶಾಸಕ ಸಂಜೀವ ಮಠಂದೂರು ಇವರ  ಪ್ರಯತ್ನದ ಫಲವಾಗಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಇದು ಸಂಪರ್ಕ ಸೇತು ರಸ್ತೆಯಾಗಲಿದೆ. ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಬಳಿಯಿಂದ ಸಾಗಿ ಮುಂದೆ ಹೋಗಿ ವೀರ ಪುರುಷರಾದ ಕೋಟಿ- ಚೆನ್ನಯರ ಹುಟ್ಟೂರು ಪಡುಮಲೆಯನ್ನು ಸಂಪರ್ಕಿಸಿ ಈಶ್ವರಮಂಗಲದ ಪ್ರಸಿದ್ಧ ಕ್ಷೇತ್ರ ಹನುಮಗಿರಿಯನ್ನು ಸಂಪರ್ಕಿಸಲಿದ್ದು ಸಾರ್ವಜನಿಕರಿಗೆ ಈ ರಸ್ತೆ ಬಹಳ ಸಮೀಪವಿರುವ ರಸ್ತೆಯಾಗಲಿದೆ.
ಬಡಗನ್ನೂರು ಗ್ರಾ.ಪಂ ಉಪಾಧ್ಯಕ್ಷ ಸಂತೋಷ ಆಳ್ವರವರ ಒತ್ತಡದ ಪ್ರಭಾವದಿಂದ ಈ ರಸ್ತೆ ಮತ್ತು ಹಲವು ವರ್ಷಗಳಿಂದ ಅಭಿವೃದ್ಧಿಯಾಗದೆ ನೆನೆಗುದಿಗೆ ಬಿದ್ದಿದ್ದ ಸುಳ್ಯಪದವು ಈಶ್ವರಮಂಗಲ ರಸ್ತೆಗೂ ಡಾಮರೀಕರಣದ ಭಾಗ್ಯ ಒದಗಿ ಬಂದಿದೆ. ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯ ಕುಮಾರ್, ಕೇಶವ ಸಾರಕೂಟೇಲು, ಹರ್ಷಿತಾ ಈಶ್ವರಮಂಗಲ, ರಘುನಾಥ ರೈ, ಜೀವನ್ ಸಾರಕೂಟೇಲು ಮತ್ತಿತರರು ಕಾಮಗಾರಿ ಆರಂಭದ ಸಂದರ್ಭದಲ್ಲಿ ಉಪಸ್ಥಿತರಿದ್ದರು.
   
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಈಗಾಗಲೇ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮಳೆಯ ಪ್ರಮಾಣ ಅವಲಂಬಿಸಿ ಕಾಮಗಾರಿ ಮುಂದುವರಿದು ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ.    
         – ಜನಾರ್ಧನ, ಪಿ.ಎಂ.ಜಿ.ಎಸ್. ವೈ ಇಂಜಿನಿಯರ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.