ಕೊಯಿಲ-ಗಂಡಿಬಾಗಿಲು ರಸ್ತೆ ಡಾಂಬರೀಕರಣ ಕಾಮಗಾರಿ ಪೂರ್ಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

೦ ಸಹಾಯಕ ಕಾರ‍್ಯ ನಿರ್ವಾಹಕ ಇಂಜಿನಿಯರ್ ರಾಜಾರಾಮ್ ಪರಿಶೀಲನೆ

ಉಪ್ಪಿನಂಗಡಿ: ಕೊಯಿಲ-ಹಿರೇಬಂಡಾಡಿ-ಉಪ್ಪಿನಂಗಡಿ ರಸ್ತೆಯಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕೊಯಿಲ-ಗಂಡಿಬಾಗಿಲು ತನಕದ ರಸ್ತೆ ಡಾಂಬರೀಕರಣ ಕಾಮಗಾರಿ ಪೂರ್ಣ ಹಂತಕ್ಕೆ ತಲುಪಿದ್ದು, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ‍್ಯ ನಿರ್ವಾಹಕ ಇಂಜಿನಿಯರ್ ರಾಜಾರಾಮ್ ಪರಿಶೀಲನೆ ನಡೆಸಿದರು.


ಉಪ್ಪಿನಂಗಡಿ-ಕಡಬ ರಸ್ತೆಗೆ ಸಂಪರ್ಕ ಕಲ್ಪಿಸುವ ಕೊಯಿಲ-ಹಿರೇಬಂಡಾಡಿ-ಉಪ್ಪಿನಂಗಡಿ ರಸ್ತೆಯಲ್ಲಿ ಕೊಲದಿಂದ ಗಂಡಿಬಾಗಿಲು ತನಕದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ 1 ಕೋಟಿ ರೂಪಾಯಿ ಅನುದಾನ ಮಂಜೂರು ಆಗಿದ್ದು, 2020 ಜೂನ್ 6ರಂದು ಸುಳ್ಯ ಶಾಸಕ, ಇದೀಗ ಸಚಿವರಾಗಿರುವ ಎಸ್. ಅಂಗಾರರವರು ಗುದ್ದಲಿ ಪೂಜೆ ನೆರವೇರಿಸಿದ್ದರು.

ಕಾಮಗಾರಿ ಗುತ್ತಿಗೆಯನ್ನು ಲೋಕೋಪಯೋಗಿ ಇಲಾಖಾ ಪ್ರಥಮ ದರ್ಜೆ ಗುತ್ತಿಗೆದಾರ ಕೆ. ರಾಧಾಕೃಷ್ಣ ನಾಯಕ್ ವಹಿಸಿಕೊಂಡಿದ್ದು, ತದ ನಂತರ ಕಳೆದ ವರ್ಷ ಕೋವಿಡ್-19 ಹಿನ್ನೆಲೆಯಲ್ಲಿ ಕಾಮಗಾರಿ ನಡೆಯದೆ ಬಾಕಿಯಾಗಿತ್ತು. ಆ ಬಳಿಕ ಕಾಮಗಾರಿ ಆರಂಭವಾಗಿ ಇದೀಗ ಪೂರ್ಣಗೊಂಡಿದ್ದು, ಈ ಭಾಗದ ಜನರ ಬಹುಕಾಲದಿಂದ ಕಾಡುತ್ತಿದ್ದ ಸಮಸ್ಯೆಯಿಂದ ಮುಕ್ತಿ ಪಡೆದಂತಾಗಿದೆ.

2 ವಿಧಾನ ಸಭಾ ಕ್ಷೇತ್ರದಲ್ಲಿರುವ ರಸ್ತೆ:
ಕೊಯಿಲ-ಗಂಡಿಬಾಗಿಲು-ಹಿರೇಬಂಡಾಡಿ-ಉಪ್ಪಿನಂಗಡಿ ಸಂಪರ್ಕದ 9 ಕಿ.ಮೀ. ಉದ್ದದ ಈ ರಸ್ತೆ ಕೊಯಿಲದಿಂದ ಶಾಖೆಪುರ ತನಕ ಕಡಬ ತಾಲ್ಲೂಕು, ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತು ಶಾಖೆಪುರದಿಂದ ಉಪ್ಪಿನಂಗಡಿ ತನಕ ಪುತ್ತೂರು ತಾಲ್ಲೂಕು ಮತ್ತು ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು, ಕೊಯಿಲ, ಹಿರೇಬಂಡಾಡಿ, ಉಪ್ಪಿನಂಗಡಿ ಗ್ರಾಮಗಳ ಜನತೆಯ ಮುಖ್ಯ ಸಂಪರ್ಕ ರಸ್ತೆಯಾಗಿದ್ದು, ರಸ್ತೆಯನ್ನು ಅವಲಂಭಿಸಿರುವ ಸಾವಿರಾರು ಮಂದಿ ಗ್ರಾಮಸ್ಥರು ಮತ್ತು ನೂರಾರು ವಾಹನಗಳವರು ದಿನನಿತ್ಯ ಸಮಸ್ಯೆಯನ್ನು ಎದುರಿಸುವಂತಾಗಿದೆ ಎಂಬ ದೂರುಗಳು ವ್ಯಕ್ತವಾಗಿತ್ತು.

25 ವರ್ಷಗಳ ಹಿಂದೆ ಡಾಂಬರೀಕರಣ ನಡೆದಿದ್ದು:
ಕೊಯಿಲದಿಂದ ಶಾಖೆಪುರ ತನಕದ ರಸ್ತೆ ಸುಮಾರು 25 ವರ್ಷಗಳ ಹಿಂದೆ ಸಂಪೂರ್ಣ ಡಾಂಬರೀಕರಣ ಆಗಿರುವುದು ಬಿಟ್ಟರೆ ಕೆಲವೊಮ್ಮೆ ತೇಪೆ ಕಾಮಗಾರಿ ನಡೆದಿದ್ದು, ಅದು ಒಂದೇ ಮಳೆಗೆ ಕೊಚ್ಚಿ ಹೋಗಿ ಮತ್ತೆ ಹೊಂಡ ಎದ್ದು ಕಾಣುವಂತಿತ್ತು. ಈ ನಿಟ್ಟಿನಲ್ಲಿ ರಸ್ತೆ ಮರುಡಾಮರೀಕರಣ ಮಾಡುವ ಬಗ್ಗೆ ಗ್ರಾಮ ಸಭೆ, ಜನ ಸಂಪರ್ಕ ಸಭೆಗಳಲ್ಲಿ ಬೇಡಿಕೆ ವ್ಯಕ್ತವಾಗುತ್ತಲೇ ಇತ್ತು. ಇದೀಗ ರಸ್ತೆ ಅಗಲ ಆಗುವುದರೊಂದಿಗೆ ಸಂಪೂರ್ಣ ಡಾಂಬರೀಕರಣ ಆಗುವ ಮೂಲಕ ಈ ಭಾಗದ ಜನರ ಬೇಡಿಕೆಯೊಂದು ಕೊನೆಗೂ ಈಡೇರಿದಂತಾಗಿದೆ.

ರಸ್ತೆ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದೆ-ರಾಜಾರಾಮ್
ಕೊಯಿಲ-ಗಂಡಿಬಾಗಿಲು-ಹಿರೇಬಂಡಾಡಿ-ಉಪ್ಪಿನಂಗಡಿ ರಸ್ತೆ ಈ ಹಿಂದೆ ಜಿಲ್ಲಾ ಪಂಚಾಯಿತಿ ರಸ್ತೆಯಾಗಿತ್ತು. ಇದೀಗ ಲೋಕೋಪಯೋಗಿ ಇಲಾಖಾ ಅಡಿಯಲ್ಲಿ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿದ್ದು, 3.5 ಮೀಟರ್ ಇದ್ದುದು ಇದೀಗ 5.5 ಮೀಟರ್ ಆಗಲ ಆಗಿ ಅಭಿವೃದ್ಧಿ ಹೊಂದಿದೆ. ಈ ರಸ್ತೆಯಲ್ಲಿ ಗಂಡಿಬಾಗಿಲುನಿಂದ ಶಾಖೆಪುರ ತನಕ ಡಾಂಬರೀಕರಣಕ್ಕೆ ಬಾಕಿ ಇದ್ದು, ಮುಂದೆ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ‍್ಯ ನಿರ್ವಾಹಕ ಇಂಜಿನಿಯರ್ ರಾಜಾರಾಮ್
“ಸುದ್ದಿ”ಯೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.