ನರಿಮೊಗರು: ಮಳೆಗೆ ಕಾಂಪೌಂಡ್ ಕುಸಿತ- ಅಪಾಯಕಾರಿ ಸ್ಥಿತಿಯಲ್ಲಿ ಮನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಲ್ಲು ತೆರವುಗೊಳಿಸಿ ಮಾನವೀಯತೆ ಮೆರೆದ ಹಿಂದೂ ಬಾಂಧವರು

ಪುತ್ತೂರು: ಭಾರೀ ಮಳೆಗೆ ಮುಂಡೂರು ಗ್ರಾಮದ ಕಾಳಿಂಗಹಿತ್ತಲು ಎಂಬಲ್ಲಿ ರಹಿಮಾನ್ ಎಂಬವರ ಮನೆಯ ಆವರಣ ಗೋಡೆ ಕುಸಿದು ಮಣ್ಣು ಪಾಲಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಮನೆಯ ಜಗಲಿ ಬಿರುಕು ಬಿಟ್ಟು ಮನೆ ಕುಸಿಯುವ ಭೀತಿಯಲ್ಲಿದೆ.

ವಿಷಯ ತಿಳಿದ ಸ್ಥಳೀಯ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಮುಂಡೂರು ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಕುಮಾರ್ ಪುತ್ತಿಲ, ಬಾಲಕೃಷ್ಣ ಪೂಜಾರಿ, ಅರುಣಾ ಕಣ್ಣರ್ನೂಜಿ ಹಾಗೂ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್, ಜನಾರ್ದನ ಪೂಜಾರಿ ಸೇರಿದಂತೆ ಗೆಳೆಯರ ಬಳಗದ ಸದಸ್ಯರು ಹಾಗೂ ಸ್ಥಳೀಯರು ಕಲ್ಲು ತೆರವುಗೊಳಿಸಿ ತಕ್ಷಣಕ್ಕೆ ಮನೆಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಎನ್ ಅವರು ಸ್ಥಳಕ್ಕೆ ಭೇಟಿ ನೀಡಿ ಮೇಲಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ಮುಂದಿನ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಸ್ಥಳೀಯರ ಸಕಾಲಿಕ ಸ್ಪಂದನೆ ಪ್ರಶಂಸೆಗೆ ಪಾತ್ರವಾಗಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.