ಜನವಸತಿ ಪ್ರದೇಶದಲ್ಲಿ ಕುದುರೆಗಳ ಅಲೆದಾಟ – ಇಲಾಖಾತ್ಮಕ ಕ್ರಮಕ್ಕೆ ನಾಗರಿಕರ ಆಗ್ರಹ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಆಕ್ರಮಣಕಾರಿಯಾಗಿ ವರ್ತಿಸುವ ಕುದುರೆಗಳಿಂದಾಗಿ ಉಪ್ಪಿನಂಗಡಿಯಲ್ಲಿ ಈಗಾಗಲೇ ಬೈಕ್ ಸವಾರರು, ಪರಿಸರದ ನಿವಾಸಿಗರು ಗಾಯಗೊಂಡಿರುವ ಘಟನಾವಳಿಗಳು ನಡೆದಿದ್ದರೂ ಕುದುರೆ ಮಾಲಕರು ತಮ್ಮ ತಮ್ಮ ಕುದುರೆಗಳನ್ನು ನಿಯಂತ್ರಿಸುವ ಕಾರ್ಯಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಮತ್ತೆ ಕುದುರೆಗಳು ಇಲ್ಲಿನ ಪೇಟೆಯ ಜನವಸತಿ ಪ್ರದೇಶಗಳಲ್ಲಿ ಅಲೆದಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ವ್ಯಕ್ತವಾಗಿದೆ.


ರಂಜಾನ್ ಹಬ್ಬದ ದಿನ ಬೈಕ್ ಸವಾರರಿಬ್ಬರು ಈ ಕುದುರೆಗಳಿಂದಾಗಿ ಗಾಯಗೊಂಡಿದ್ದರೆ, ಅದರ ಮುನ್ನ ದಿನ ಪರಿಸರದ ನಿವಾಸಿಯೊಬ್ಬರಿಗೆ ಕುದುರೆ ಒದ್ದ ಪರಿಣಾಮ ಕೈಗೆ ಗಂಭೀರವಾದ ಗಾಯವಾಗಿತ್ತು. ಈ ಬಳಿಕ ಶನಿವಾರ ರಾಮಕುಂಜ ಪರಿಸರದ ನಿವಾಸಿಗರಿಬ್ಬರು ಬೈಕಿನಲ್ಲಿ ಸಂಚರಿಸುತ್ತಿದ್ದ ವೇಳೆ ಕುದುರೆ ದಾಳಿಗೆ ತುತ್ತಾಗಿ ಗಾಯಗೊಂಡ ಘಟನೆ ನಡೆದಿತ್ತು.

ಒಟ್ಟು ಮೂರು ಕುದುರೆಗಳು ಈ ಪರಿಸರದಲ್ಲಿದ್ದು, ಈ ಪೈಕಿ ಒಂದನ್ನು ಅದರ ಮಾಲಕ ನಿಯಂತ್ರಿಸಿದ್ದಾರೆ, ಉಳಿದ ಎರಡು ಮನಸೋ ಇಚ್ಚೆ ಅಲೆದಾಡುತ್ತಿದೆ. ಈ ಪೈಕಿ ಗಂಡು ಕುದುರೆ ಮದವೇರಿದಂತಿದ್ದು ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ. ಇದರಿಂದಾಗಿ ಯಾವ ಸಂದರ್ಭದಲ್ಲೂ ಇದರಿಂದ ಅಪಾಯ ಸಂಭವಿಸುವ ಭೀತಿ ಸ್ಥಳೀಯ ನಿವಾಸಿಗರನ್ನು ಕಾಡುತ್ತಿದೆ. ಕುದುರೆ ಮಾಲಕರು ಕುದುರೆಯನ್ನು ಸುರಕ್ಷಿತವಾಗಿ ಸಾಕಿ ಸಲಹುವಂತೆ ಮಾಡಲು ಪೊಲೀಸ್ ಇಲಾಖೆ ಅಥವಾ ಪಂಚಾಯತ್ ಆಡಳಿತ ಇಲಾಖಾತ್ಮಕ ಕ್ರಮಗಳತ್ತ ಗಮನ ಹರಿಸಬೇಕಾಗಿದೆ ಎಂದು ಆಗ್ರಹ ವ್ಯಕ್ತವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.