ಮುಂದುವರಿಕಾ ಶಿಕ್ಷಣದ ನೋಡಲ್ ಪ್ರೇರಕಿ ಕೊಯಿಲದ “ಜಯಕ್ಕ” ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಕೊಯಿಲ ಗ್ರಾಮದ ಕೊನೆಮಜಲು ನಿವಾಸಿ, ಐತ್ತಪ್ಪ ಶೆಟ್ಟಿಯವರ ಪತ್ನಿ ಜಯಶ್ರೀ ಶೆಟ್ಟಿ ಯಾನೆ ಜಯಕ್ಕ (52 ವ.) ಮೇ 15ರಂದು ಹೃದಯಾಘಾತದಿಂದ ನಿಧನ ಹೊಂದಿದರು.



ವಯಸ್ಕರ ಶಿಕ್ಷಣ, ಮುಂದುವರಿಕಾ ಶಿಕ್ಷಣದಲ್ಲಿ 10 ವರ್ಷಕ್ಕೂ ಹೆಚ್ಚು ಕಾಲ ಸ್ವಯಂ ಸೇವಕರಾಗಿ, ನೋಡಲ್ ಪ್ರೇರಕಿಯಾಗಿ ಅದೆಷ್ಟೋ ಮಂದಿ ಅನಕ್ಷರಸ್ಥರಿಗೆ ಅಕ್ಷರ ಅಭ್ಯಾಸ ಕಲಿಸಿದ್ದರು. ವಿಶ್ವ ಬ್ಯಾಂಕ್ ಪರಿಸರ ನೈರ್ಮಲ್ಯ ಯೋಜನೆಯಲ್ಲಿ ಕೊಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಿಲ್ ಕಲೆಕ್ಟರ್ ಆಗಿ, ನವೋದಯ ಯೋಜನೆ ಅಡಿಯಲ್ಲಿ ಕೊಯಿಲ ಗ್ರಾಮದಲ್ಲಿ 20ಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ರಚನೆ ಹಾಗು ಕ್ರಿಯಾಶೀಲ ಕಾರ್ಯಕ್ರಮಗಳಿಂದ ಕೊಯಿಲ ಗ್ರಾಮ ಪಂಚಾಯಿತಿಯಲ್ಲಿ ತರಬೇತಿ ಕಟ್ಟಡ ದೊರಕುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಗ್ರಾಮೀಣ ಮಹಿಳೆಯರಿಗೆ ಹೈನುಗಾರಿಕೆ, ಹೊಲಿಗೆ ತರಬೇತಿ ಮುಂತಾದ ಸ್ವ ಉದ್ಯೋಗ ಪ್ರೇರಣೆ, ತರಬೇತಿ ನೀಡುತ್ತಿದ್ದರು. ಅಸಹಾಯಕರಿಗೆ ಸಹಾಯ ಮಾಡುವ ಮೂಲಕ ಪೂರ್ಣ ಕಾಲಿಕ ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿದ್ದ ಜಯಶ್ರೀಯವರು ಜಯಕ್ಕ ಎಂದೇ ಚಿರಪರಿಚಿತರಾಗಿದ್ದರು.

ಕಠಿಣ ಶ್ರಮ ಜೀವಿ:
ಬಡ ಕುಟುಂಬದವರಾಗಿದ್ದ ಜಯಶ್ರೀಯವರು ಪತಿಯ ಕೃಷಿ ಚಟುವಟಿಕೆಯಲ್ಲಿಯೂ ತೊಡಗಿಸಿಕೊಂಡು ತನ್ನ ಇಬ್ಬರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ದು, ಕೊಲ ಗ್ರಾಮದ ಮಾದರಿ ಮಹಿಳೆಯಾಗಿಯೂ ಗುರುತಿಸಿಕೊಂಡಿದ್ದರು. ಪತಿ ಐತ್ತಪ್ಪ ಶೆಟ್ಟಿ, ಕೆನಡಾದಲ್ಲಿ ಸಾಫ್ಟ್‌ವೇರ್ ಕನ್ಸಲ್ಟೆಂಟ್ ಆಗಿರುವ ಪುತ್ರ ಪ್ರಸಾದ್, ನೆಲ್ಯಾಡಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ಪುತ್ರಿ ಪ್ರವೀಣಾ ಕುಮಾರಿಯನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.