ಮುಂಡೂರು: ನೊಂದ ಕುಟುಂಬಕ್ಕೆ ಆಸರೆಯಾದ ಶ್ರೀರಾಮ ಗೆಳೆಯರ ಬಳಗ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ: ಯೂಸುಫ್ ರೆಂಜಲಾಡಿ

  • ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ನೂತನವಾಗಿ ನಿರ್ಮಿಸಿದ ಮನೆ ಹಸ್ತಾಂತರ

ಪುತ್ತೂರು: ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಇದರ ವತಿಯಿಂದ ಸಂಕಷ್ಟದಲ್ಲಿದ್ದ ಕುಟುಂಬವೊಂದಕ್ಕೆ ಮನೆ ನಿರ್ಮಿಸಲಾಗಿದ್ದು ಅದರ ಹಸ್ತಾಂತರ ಕಾರ್ಯಕ್ರಮ ಮೇ.17ರಂದು ಮುಂಡೂರು ಗ್ರಾಮದ ಕಣ್ಣರ್ ನೂಜಿ ಎಂಬಲ್ಲಿ ನಡೆಯಿತು.

ಕಣ್ಣರ್ ನೂಜಿಯಲ್ಲಿ ಜೋಪಡಿ ಮನೆಯಲ್ಲಿ ವಾಸವಾಗಿದ್ದ ಸವಿತಾ ಮತ್ತು ಮೂವರು ಮಕ್ಕಳ ಶೋಚನೀಯ ಪರಿಸ್ಥಿತಿಯನ್ನು ಕಂಡ ಶ್ರೀರಾಮ ಗೆಳೆಯರ ಬಳಗದ ಸದಸ್ಯರು ಅವರಿಗೊಂದು ಮನೆ ನಿರ್ಮಿಸಿಕೊಡುವ ಬಗ್ಗೆ ತೀರ್ಮಾನ ತೆಗೆದುಕೊಂಡು ಅದರ ಕಾರ್ಯಾಚರಣೆಗಿಳಿದಿದ್ದು ಇದೀಗ ಸುಸಜ್ಜಿತವಾಗಿ ಮನೆಯೊಂದನ್ನು ನಿರ್ಮಿಸಿ ಬಡ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಪುತ್ತೂರಿನ ವೈಧ್ಯ ಡಾ.ಸುರೇಶ್ ಪುತ್ತೂರಾಯರವರು ನೂತನ ಮನೆಯನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.

ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮುಂಡೂರು ಗ್ರಾ.ಪಂ ಸದಸ್ಯ ಅಶೋಕ್ ಕುಮಾರ್ ಪುತ್ತಿಲ ಸಹಿತ ಹಲವರು ಈ ಮನೆ ನಿರ್ಮಾಣ ಕಾರ್ಯದಲ್ಲಿ ಪ್ರಮುಖವಾಗಿ ಕೈ ಜೋಡಿಸಿದ್ದರು.

ಎರಡೂವರೆ ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ:
ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಬಡ ಕುಟುಂಬದ ಸಂಕಷ್ಟ ಅರಿತ ಶ್ರೀರಾಮ ಗೆಳೆಯರ ಬಳಗದ ಸದಸ್ಯರ ನೇತೃತ್ವದಲ್ಲಿ ಉತ್ತಮವಾದ ಮನೆಯೊಂದನ್ನು ನಿರ್ಮಿಸಿಕೊಡಲು ಸಾಧ್ಯವಾಗಿದೆ. ಪ್ರಾಕೃತಿಕ ವಿಕೋಪದಡಿ ರೂ. 48 ಸಾವಿರ ಸರಕಾರದಿಂದ ಈ ಕುಟುಂಬಕ್ಕೆ ದೊರಕಿದ್ದು ಉಳಿದ ರೂ.2 ಲಕ್ಷ ಹಣವನ್ನು ನಾವೆಲ್ಲಾ ಸೇರಿ ಒಟ್ಟುಗೂಡಿಸಿ ಮನೆ ನಿರ್ಮಿಸಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕುಟುಂಬಕ್ಕೆ ಗ್ಯಾಸ್ ಹಾಗೂ ರೇಷನ್ ನೀಡಲಾಯಿತು.

ಉದ್ಯಮಿ ಸುಧೀರ್ ಶೆಟ್ಟಿ ನೇಸರಕಂಪ ಹಾಗೂ ಮುಂಡೂರು ಗ್ರಾ.ಪಂ ಸದಸ್ಯೆ ಅರುಣಾ ಹಸ್ತಾಂತರಿಸಿದರು.
ವೇದಿಕೆಯಲ್ಲಿ ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್, ಮುಂಡೂರು ಗ್ರಾ.ಪಂ ಸದಸ್ಯ ಬಾಲಕೃಷ್ಣ ಪೂಜಾರಿ, ಮುಂಡೂರು ಹಾಲು ಉ.ಸ.ಸಂಘದ ಅಧ್ಯಕ್ಷ ಶ್ರೀಕಾಂತ್ ಆಚಾರ್ ಹಿಂದಾರು, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್, ಸ್ಥಳೀಯ ಮುಖಂಡ ಅನಿಲ್ ಕಣ್ಣರ್ ನೂಜಿ ಉಪಸ್ಥಿತರಿದ್ದರು. ಮುಂಡೂರು ಗ್ರಾ.ಪಂ ಸದಸ್ಯ ಅಶೋಕ್ ಕುಮಾರ್ ಪುತ್ತಿಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.