ಪ್ರಶಾಂತಿ ಸದ್ಭಾವನಾ ಟ್ರಸ್ಟ್‌ನಿಂದ ಕೊರೋನಾ ಸೋಂಕಿತರಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರಶಾಂತಿ ಸದ್ಭಾವನಾ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಪುತ್ತೂರು ಬಲ್ನಾಡಿನ ಕೋವಿಡ್ ಕೇರ್‌ಸೆಂಟರ್‌ನಲ್ಲಿರುವ ಕೊರೋನಾ ಪೀಡಿತ ರೋಗಿಗಳಿಗೆ ಪೌಷ್ಟಿಕ ಆಹಾರ ಕಿಟ್‌ಗಳನ್ನು ನೀಡಲಾಯಿತು. ಪ್ರತಿಯೊಬ್ಬ ರೋಗಿಗೂ ಖರ್ಜೂರ, ಬಾದಾಮ್, ಗೇರುಬೀಜ, ಒಣದ್ರಾಕ್ಷಿ, ನೆಲ್ಲಿ ಇತ್ಯಾದಿಗಳನ್ನೊಳಗೊಂಡ 250 ಗ್ರಾಂ ಡ್ರೈಫ್ರೂಟ್ಸ್‌ಗಳನ್ನು ಹಾಗೂ ಕಿತ್ತಲೆ, ಬಿಸ್ಕೆಟ್ಸ್, ಓಆರ್‌ಎಸ್ ಪ್ಯಾಕೆಟ್‌ಗಳನ್ನು ನೀಡಲಾಯಿತು.

ವಾರದ ಸೋಮವಾರ ಹಾಗೂ ಗುರುವಾರಗಳಲ್ಲಿ ನಿರಂತರವಾಗಿ ಇದನ್ನು ನೀಡುವ ವ್ಯವಸ್ಥೆ ಮಾಡಲಾಗಿದ್ದು ಮೇ.೧೭ರಂದು ಜರುಗಿದ ಸರಳ ಕಾರ್ಯಕ್ರಮದಲ್ಲಿ ಪ್ರಶಾಂತಿ ಸದ್ಭಾವನಾ ಟ್ರಸ್ಟ್‌ನ ಯಂ. ಮಧುಸೂದನ್ ನಾಯಕ್ ಹಾಗೂ ಕೆ.ಎಸ್ ದಯಾನಂದರವರು ಕಿಟ್‌ಗಳನ್ನು ವೈದ್ಯಾಧಿಕಾರಿಗಳ ಮೂಲಕ ಹಸ್ತಾಂತರಿಸಿದರು. ಕೇಂದ್ರದ ನೋಡಲ್ ಅಧಿಕಾರಿ ಡಾ| ದೀಪಕ್ ರೈ, ತಾಲೂಕು ವೈದ್ಯಾಧಿಕಾರಿ ಡಾ| ಅಶೋಕ್ ರೈ, ಡಾ| ಶಶಿಕಲಾ, ಡಾ| ವಿದ್ಯಾ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕೋವಿಡ್ ನಿಯಮದಂತೆ ಮಾಸ್ಕ್, ಫೇಸ್ ಶೀಲ್ಡ್, ಗ್ಲೌಸ್‌ಗಳನ್ನು ಧರಿಸಿಕೊಂಡು ಸ್ಯಾನಿಟೈಸರ್ ಬಳಸಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.