ಜೂ.2ರಿಂದ ಸಮಸ್ತ ಮದರಸ ಶೈಕ್ಷಣಿಕ ವರ್ಷ ಪ್ರಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಮದರಸ ಶೈಕ್ಷಣಿಕ ವರ್ಷ ಜೂ.೨ರಿಂದ(ಶವ್ವಾಲ್೨೧) ಪ್ರಾರಂಭಿಸಲು ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಿರ್ವಾಹಕ ಸಮಿತಿಯ ಆನ್ಲೈನ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಾಮಾನ್ಯ ಶವ್ವಾಲ್ ೯ಕ್ಕೆ ಆರಂಭವಾಗಬೇಕಿದ್ದ ಮದರಸಾ ಶೈಕ್ಷಣಿಕ ವರ್ಷ ಕೋವಿಡ್-೧೯ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಜಾರಿಯಾದ ಲಾಕ್ಡೌನ್ ಕಾರಣವಾಗಿ ಈ ವರ್ಷ ಶವ್ವಾಲ್೨೧ಗೆ ಬದಲಾಯಿಸಲಾಗಿದೆ. ಮದರಸಗಳು ಆಫ್ಲೈನ್ ಆಗಿ ಕಾರ್ಯಾಚರಿಸುವ ತನಕ ಆನ್‌ಲೈನ್ ತರಗತಿ ಮುಂದುವರಿಸಲಾಗುವುದು. ಆನ್ಲೈನ್ ತರಗತಿಯಲ್ಲಿ ಮುಅಲ್ಲಿಮರ ಸಂಪೂರ್ಣ ಸಹಭಾಗಿತ್ವವನ್ನು ಖಚಿತಪಡಿಸಲಾಗುವುದು. ವಿದ್ಯಾಭ್ಯಾಸ ಬೋರ್ಡಿನ ಆನ್ಲೈನ್ ಚಾನೆಲ್ ಲಿಂಕ್ ಮುಫತ್ತಿಷುಗಳ ಮುಖಾಂತರ ರೇಂಜ್ ಕಾರ್ಯದರ್ಶಿಗಳ ಮೂಲಕ ಮದರಸ ಮುಅಲ್ಲಿಮರಿಗೆ ಹಸ್ತಾಂತರಿಸಲಾಗುವುದು. ತರಗತಿ ಅಧ್ಯಾಪಕರು ಪ್ರತ್ಯೇಕ ವಾಟ್ಸಪ್ ಗ್ರೂಪ್‌ಗಳು ರಚಿಸಿ ಕಲಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲಿದ್ದಾರೆ. ತರಗತಿಗಳು ಪ್ರಾರಂಭವಾಗುವ ಮುಂಚಿತವಾಗಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು ಲಭ್ಯಗೊಳಿಸಲು ಕ್ರಮಕೈಗೊಳ್ಳಲಾಗುವುದು. ಬುಕ್ ಡಿಪೋದಲ್ಲಿ ಇದಕ್ಕೆ ಅಗತ್ಯವಾದ ವ್ಯವಸ್ಥೆಗಳನ್ನು ಸಜ್ಜುಗೊಳಿಸಲಾಗುತ್ತದೆ. ಖಾತೆ ಮೂಲಕ ಮುಂಗಡ ಪಾವತಿ ಮಾಡಿ ಬುಕಿಂಗ್ ಮಾಡಿದವರಿಗೆ ವಲಯ ಕೇಂದ್ರಗಳಿಗೆ ಪಠ್ಯಪುಸ್ತಕಗಳು ತಲುಪಿಸಲು ವ್ಯವಸ್ಥೆ ಮಾಡಲಾಗುವುದು. ಮೇ.೨೯, ೩೦ರಂದು ನಡೆಸಲು ತೀರ್ಮಾನಿಸಿದ ಸೇ ಪರೀಕ್ಷೆ ಮತ್ತು ಸ್ಪೆಷಲ್ ಪರೀಕ್ಷೆ ಕೋವಿಡ್ -೧೯ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ನವೀಕರಣ ದಿನಾಂಕವನ್ನು ಮತ್ತೆ ಪ್ರಕಟಿಸಲಾಗುವುದು. ಮರುಮೌಲ್ಯಮಾಪನ, ಸೇ ಪರೀಕ್ಷೆ, ಸ್ಪೆಷಲ್ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ ಮೇ.೩೦ ತನಕ ವಿಸ್ತರಿಸಲು ನಿರ್ಧರಿಸಲಾಯಿತು. ನೂತನ ಅಧ್ಯಯನ ವರ್ಷಕ್ಕೆ ಅಗತ್ಯವಾದ ಪೂರ್ವಸಿದ್ಧತೆಗಳು ಮಾಡಿಕೊಳ್ಳಲು ಮದರಸಾ ಸಮಿತಿ ಪದಾಧಿಕಾರಿಗಳಲ್ಲಿ ಮತ್ತು ಅಧ್ಯಾಪಕರಿಗೆ ಸಭೆಯಲ್ಲಿ ವಿನಂತಿಸಲಾಗಿದೆ ಎಂದು ಹೇಳಿದರು. ಪ್ಯಾಲೆಸ್ತೀನ್ ಜನತೆಯ ವಿರುದ್ಧ ಇಸ್ರೇಲ್ ಆಡಳಿತ ವಿಭಾಗ ನಡೆಸುತ್ತಿರುವ ಪೈಶಾಚಿಕವಾದ ಕ್ರೂರ ಅಕ್ರಮವನ್ನು ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು ಎಂದು ಸಮಸ್ತ ವಿದ್ಯಾಭ್ಯಾಸ ಬೋರ್ಡ್‌ನ ಸದಸ್ಯ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ ತಿಳಿಸಿದ್ದಾರೆ.

ಸಭೆಯಲ್ಲಿ ವಿದ್ಯಾಭ್ಯಾಸ ಬೋರ್ಡ್ ಅಧ್ಯಕ್ಷರಾದ ಪಿ.ಕೆ.ಪಿ ಅಬ್ದುಸ್ಸಲಾಂ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದರು. ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯ ತಂಗಳ್ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಎಂ.ಟಿ ಅಬ್ದುಲ್ಲ ಮುಸ್ಲಿಯಾರ್ ಸ್ವಾಗತಿಸಿ ಮ್ಯಾನೇಜರ್ ಮೋಯಿನ್ ಕುಟ್ಟಿ ಮಾಸ್ಟರ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.