ಚರಂಡಿ ದುರಸ್ತಿ ಮಾಡಿದ ಗ್ರಾಪಂ ಸದಸ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಒಳಮೊಗ್ರು ಗ್ರಾಮದ ಎರಡನೇ ವಾರ್ಡಿನ ಉಜಿರೋಡಿ ರಸ್ತೆಯಲ್ಲಿ ಚರಂಡಿ ಇಲ್ಲದೆ ಮಳೆಯ ನೀರು ರಸ್ತೆಯಲ್ಲೇ ತುಂಬಿ ಕೆಸರುಮಯವಾಗಿದ್ದು ಗ್ರಾಪಂ ಸದಸ್ಯರ ಮುತುವರ್ಜಿಯಿಂದ ಚರಂಡಿ ನಿರ್ಮಾಣ ಮಾಡಲಾಗಿದೆ.


ಎರಡನೇ ವಾರ್ಡಿನ ಸದಸ್ಯ ಅಶ್ರಫ್ ಉಜಿರೋಡಿಯವರು ಊರಿನವರ ಸಹಕಾರದಿಂದ ಚರಂಡಿ ನಿರ್ಮಾಣ ಮಾಡುವ ಮೂಲಕ ಕೆಸರುಮಯವಾಗಿ ಜನರ ಓಡಾಟಕ್ಕೆ ಅಡಚಣೆಯಾಗಿದ್ದ ರಸ್ತೆಯನ್ನು ದುರಸ್ತಿ ಮಾಡಿಸಿದ್ದಾರೆ. ಎರಡನೇ ವಾರ್ಡಿನಲ್ಲಿ ಕೆಲವು ರಸ್ತೆಗಳಲ್ಲಿ ಡಾಮರು ಅಥವಾ ಕಾಂಕ್ರೀಟ್ ಆಗದ ಕಾರಣ ಮಳೆ ಬಂದರೆ ಚರಂಡಿ ಮಣ್ಣಿನಿಂದ ಮುಚ್ಚಿರುವ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿಯುವಂತಾಗಿದ್ದು ಮಳೆಗಾಲದಲ್ಲಿ ಇದರಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಗ್ರಾಪಂ ಸದಸ್ಯನ ಕಾರ್ಯಕ್ಕೆ ಗ್ರಾಮಸ್ಥರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.