ಬೆಟ್ಟಂಪಾಡಿ: ರಸ್ತೆ ಮೇಲೆ ನೀರು ಹರಿದು ಮೋರಿಗೆ ಹಾನಿ – ದುರಸ್ತಿಗೆ ಕಾಂಗ್ರೆಸ್ ವತಿಯಿಂದ ಅಧಿಕಾರಿಗಳಿಗೆ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ: ಇರ್ದೆ ಬೆಟ್ಟಂಪಾಡಿ ಪಂಚಾಯತ್  ಒಳಪಟ್ಟ ಕೊರಿಂಗಿಲ ಎಂಬಲ್ಲಿ ನೀರು ಹರಿಯಲು ಚರಂಡಿ ಇಲ್ಲದೆ ರಸ್ತೆ ಮೇಲೆ ನೀರು ಹರಿದು ರಸ್ತೆ ಕೆಟ್ಟದ್ದಲ್ಲದೆ ಹೊಸತಾಗಿ ರಚಿಸಿದ ಮೋರಿಗೆ ಹಾನಿಯಾಗಿದೆ.
ಕೊರಿಂಗಿಲ ಕಕ್ಕೂರು ನುಳಿಯಾಲು ತಂಬುತ್ತಡ್ಕ ರಸ್ತೆ ಅಭಿವೃದ್ಧಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದ್ದು ರಸ್ತೆಯ ಕೆಲವೆಡೆ ಅಸಮರ್ಪಕ ಕಾಮಗಾರಿಯಿಂದ ನೀರು ಹರಿಯಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆ ಮೇಲೆ ಹರಿಯುತ್ತಿದೆ.ಇತ್ತೀಚೆಗೆ ಸುರಿದ ಮಳೆಯ ಪ್ರಭಾವದಿಂದ ರಸ್ತೆ  ಕೆಟ್ಟು  ವಾಹನ ಸಂಚಾರ ಮತ್ತು ಜನ ಸಂಚಾರಕ್ಕೆ ತೊಂದರೆಯಾಗಿದೆ.ನೀರಿನೊಂದಿಗೆ ಕೆಸರು  ಮಣ್ಣು ಬಂದು ರಸ್ತೆ ಮೇಲೆ ನಿಂತು ಜನರಿಗೆ ಸಮಸ್ಯೆಯಾಗಿದೆ.ಹೊಸದಾಗಿ ನಿರ್ಮಿಸಿದ ಮೋರಿ ಬದಿ ರಸ್ತೆ ಕುಸಿದಿದ್ದು ಅಪಾಯಕಾರಿಯಾಗಿದೆ.
ಈ ಬಗ್ಗೆ ಸ್ಥಳಕ್ಕೆ ಆಗಮಿಸಿ ವೀಕ್ಷಿಸಿದ ಇರ್ದೆ ಕಾಂಗ್ರೆಸ್ ಪಕ್ಷದ ಮುಖಂಡರು ಇದನ್ನು ದುರಸ್ತಿ ಗೊಳಿಸುವಂತೆ ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ಪ್ರಮೋದ್ ರವರಿಗೆ  ಮನವಿ ಸಲ್ಲಿಸಿದರು. ಕಾಂಗ್ರೆಸ್ ಮುಖಂಡರು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ  ಮೊಯಿದು ಕುಂಞ , ನವೀನ್ ರೈ,  ಮಹಾಲಿಂಗ ನಾಯ್ಕ್ಕ,ಕಾಂಗ್ರೆಸ್ ಮುಖಂಡರಾದ  ಅಬೂಬಕ್ಕರ್ ಮಿತ್ತಡ್ಕ , ಯುವ ಕಾಂಗ್ರೆಸ್ ನಾಯಕರಾದ ಖಲಂದರ್ ಅಲಿ ಮಣ್ಣಾಪು, ಸೈಯದ್ ವೈ.ಎಂ.ಕೆ, ಅಶ್ರಫ್ ಕುಕ್ಕವಳ್ಳಿ, ಪರಮೇಶ್ವರ, ಆರೀಪ್ ಕೋನಡ್ಕ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.