ಧಾರಾಕಾರ ಮಳೆಗೆ ಕೂರ್ನಡ್ಕದಲ್ಲಿ ಕಾಂಪೌಂಡ್ ಕುಸಿತ | ಮನೆಗೆ ನುಗ್ಗಿದ ಮಳೆಯ ನೀರು, ಎಸ್‌ಡಿಪಿಐ ಕಾರ್ಯಕರ್ತರಿಂದ ತೆರವು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕಳೆದೆರಡು ದಿನಗಳಿಂದ ಪುತ್ತೂರಿನಲ್ಲಿ ಸುರಿದ ಭಾರಿ ಮಳೆಗೆ ಕೆಮ್ಮಿಂಜೆ ಗ್ರಾಮದ ಕೂರ್ನಡ್ಕದಲ್ಲಿ ಕಾಂಪೌಂಡ್ ಕುಸಿತ ಹಾಗೂ ಸಂಜಯನಗರದಲ್ಲಿ ಎರಡು ಮನೆಗಳಿಗೆ ಮಳೆನೀರು ನುಗ್ಗಿದ ಘಟನೆ ನಡೆದಿದೆ. ಎಸ್‌ಡಿಪಿಐ ಕಾರ್ಯಕರ್ತರು ತಕ್ಷಣ ಕಾರ್ಯಪ್ರವೃತ್ತರಾಗಿ ತೆರವುಗೊಳಿಸಿದ್ದಾರೆ.

ಕೆಮ್ಮಿಂಜೆ ದೇವಸ್ಥಾನದ ಸಮೀಪದ ನಿವಾಸಿ ಆದಂ ಎಂಬವರ ಮನೆಯ ಕಾಂಪೌಂಡ್ ಹಾಲ್ ಕುಸಿದು ಬಿದ್ದು ಅಪಾಯವುಂಟಾಗಿತ್ತು. ಅಲ್ಲದೆ ಸಂಜಯನಗರದಲ್ಲಿ ಅಬ್ದುಲ್ಲ ಕುಂಞಿ ಮತ್ತು ರಿಯಾಜ್ ಎಂಬವರ ಮನೆಗೆ ಮಳೆಯ ನೀರು ನುಗ್ಗಿತ್ತು. ಈ ಬಗ್ಗೆ ಕೂರ್ನಡ್ಕ ಮಸೀದಿ ಅಧ್ಯಕ್ಷ ಕೆ.ಎಚ್.ಖಾಸಿಂ ಹಾಜಿರವರು ಎಸ್‌ಡಿಪಿಐ ಅಧ್ಯಕ್ಷ ಸಿದ್ದೀಕ್ ರವರಿಗೆ ಮನವಿ ಮಾಡಿದ್ದು ತಕ್ಷಣ ಸ್ಪಂದಿಸಿದ ಎಸ್‌ಡಿಪಿಐ ಅಧ್ಯಕ್ಷ ಸಿದ್ದೀಕ್, ನಗರ ಅಧ್ಯಕ್ಷ ಯಹ್ಯಾ ಕೂರ್ನಡ್ಕ, ಕಾರ್ಯಕರ್ತರಾದ ಬಾವು ಪಡೀಲ್, ಸಮೀರ್ ನಾಜೂಕ್, ಉಮ್ಮರ್ ಕೂರ್ನಡ್ಕ, ಇಮ್ತಿಯಾಜ್, ಆಸೀಫ್, ಯೂಸುಫ್, ಅಬ್ದುಲ್ಲಾ ಕುಂಞಿ, ಝೀಯಾದ್, ಲತೀಫ್ ಸಹಿತ ಸುಮಾರು ೨೦ ಮಂದಿ ಕಾರ್ಯಕರ್ತರು ತೆರವುಗೊಳಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.