HomePage_Banner
HomePage_Banner

ನಿಡ್ಪಳ್ಳಿ: ಮನೆಗಳಿಗೆ ಕೋಳಿ ಸಾಕಾಣಿಕೆ ಕೇಂದ್ರದಿಂದ ಸೊಳ್ಳೆ ಕಾಟ -ಪಂಚಾಯತಿಗೆ ಊರವರ ದೂರು.

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ; ಇಲ್ಲಿಯ ಉಳಯ ಎಂಬಲ್ಲಿ ಇರುವ ಕೋಳಿ ಸಾಕಾಣಿಕೆ ಕೇಂದ್ರದಿಂದ  ಸೊಳ್ಳೆಗಳು ಸುತ್ತು ಮುತ್ತಲಿನ ಮನೆಗಳಿಗೆ  ಸೇರಿ ಬಹಳ ತೊಂದರೆಯಾಗಿದೆ ಎಂದು ಸ್ಥಳೀಯ ಸಾರ್ವಜನಿಕರು ಆರೋಪಿಸಿದ್ದು  ನಿಡ್ಪಳ್ಳಿ ಗ್ರಾಮ ಪಂಚಾಯತ್ ಗೆ ಬಂದು ದೂರು ನೀಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮೆ.20 ರಂದು ನಡೆದಿದೆ.

ವ್ಯಕ್ತಿಯೊಬ್ಬರ ಮಾಲಕತ್ವದ ಕೋಳಿ ಸಾಕಾಣಿಕೆ ಇದಾಗಿದ್ದು ಇಲ್ಲಿಂದ ಉತ್ಪತ್ತಿಯಾದ ಸೊಳ್ಳೆಗಳು ರಾಶಿ ರಾಶಿಯಾಗಿ ಬಂದು ಮನೆಯ ಒಳಗೆ ಸೇರಿ ಅಡುಗೆ ಮಾಡಿ ಇಟ್ಟ ಆಹಾರ ಪದಾರ್ಥಗಳ ಮೇಲೆ ದಾಳಿ ಮಾಡುತ್ತಿವೆ.‌ಇದನ್ನು ಸೇವಿಸಿದರೆ ಅನಾರೋಗ್ಯ ಪೀಡಿತರಾಗುವುದರಲ್ಲಿ ಸಂದೇಹವಿಲ್ಲ.ನಮ್ಮನ್ನು ಊಟ ಮಾಡಲೂ ಬಿಡುತ್ತಿಲ್ಲ. ಚಿಕ್ಕ ಮಕ್ಕಳಿಗೂ ಇದರಿಂದ ಬಹಳ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಬಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದ ನಿರ್ವಹಣೆ ಸಮರ್ಪಕವಾಗಿ ಮಾಡದಿರುವುದರಿಂದ ನೊಣಗಳು ತುಂಬಿರ ಬಹುದು. ಇದಕ್ಕೆ ತಕ್ಷಣ ಪಂಚಾಯತ್ ಸ್ಪಂದಿಸಿ ನಮ್ಮ ಸಮಸ್ಯೆ ಪರಿಹರಿಸ ಬೇಕೆಂದು ಸಾರ್ವಜನಿಕರು ಹೇಳಿದರು.

ಸೂಕ್ತ ಕ್ರಮಕ್ಕೆ ಸೂಚನೆ -ಕೋವಿಡ್ ಕಾರ್ಯಪಡೆಯ ಸಭೆಗೆ ಬಂದಿದ್ದ ನೊಡೆಲ್ ಅಧಿಕಾರಿ ಪ್ರಮೋದ್ ರವರು ಮಾತನಾಡಿ ಸೊಳ್ಳೆಗಳ ನಿರ್ಮೂಲನೆಗೆ ಪ್ರತಿ ಮನೆಗೆ ಔಷಧ ಸಿಂಪಡಿಸಿ ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು  ಸಾಕಾಣಿಕೆ ಕೇಂದ್ರದವರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.  ಇವತ್ತಿನ ಮಟ್ಟಿಗೆ ಸುಮನಿದ್ದು ಕಾದು ನೋಡಿ ಎಂದು ಹೇಳಿದ  ಅವರು ಕ್ರಮ ಕೈಗೊಳ್ಳದಿದ್ದರೆ ಪರಿಶೀಲಿಸಿ ಕೇಂದ್ರದ ವಿರುದ್ಧ ಸೂಕ್ತ ರೀತಿಯ ಕಾನೂನು ಕೈಗೊಳ್ಳುವಂತೆ  ಪಿಡಿಒರವರಿಗೆ ಸೂಚಿಸಿದರು.
ಆತಂಕ ಗೊಂಡಿದ್ದೇವೆ– ಕೋಳಿ ಸಾಕಾಣಿಕೆ ಕೇಂದ್ರದಿಂದ ನೊಣಗಳು ನಮ್ಮ ಮನೆಗಳಿಗೆ ದಾಳಿ ಮಾಡಿ ಬಹಳ ತೊಂದರೆಯಾಗಿದೆ. ಈಗಾಗಲೇ ಕೊರೋನಾ ರೋಗ ಎಲ್ಲರನ್ನೂ ಭಯಪಡಿಸಿದೆ. ಈಗ ಇದರಿಂದ ನಾವು ಆತಂಕ ಗೊಂಡಿದ್ದು ಸಮಸ್ಯೆ ಎದುರಾಗಿದೆ.ಇನ್ನೊಂದು ರೋಗ ಹರಡುವ ಭೀತಿ ಎದುರಾಗಿದೆ. ತಕ್ಷಣ ಈ ಸಮಸ್ಯೆಯನ್ನು ಸಂಬಂಧ ಪಟ್ಟವರು ನಿವಾರಿಸಲಿ-ಲೀಲಾವತಿ ಸ್ಥಳೀಯರು
ಪ್ರತಿ ಮನೆಗೆ ಬ್ಲಿಚಿಂಗ್ ಸಿಂಪಡಣೆ- ಈಗ  ಕೋಳಿಗಳನ್ನು ಸಂಪೂರ್ಣ ಖಾಲಿ ಮಾಡಲಾಗಿದೆ. ನಂತರ ಅದರ ಗೊಬ್ಬರವನ್ನು ತೆಗೆಯದೆ ಇದ್ದು ಇದರಿಂದ ಸಮಸ್ಯೆಯಾಗಿರಬಹುದು. ತಕ್ಷಣ ಗೊಬ್ಬರ ಖಾಲಿ ಮಾಡಲಾಗುವುದು. ಈಗಾಗಲೇ ಸುತ್ತಮುತ್ತಲಿನ 9 ಮನೆಗಳಿಗೆ ಬ್ಲಿಚಿಂಗ್ ಪೌಡರ್ ನೀರು ಮಾಡಿ ಸಿಂಪಡಣೆ ಮಾಡಲಾಗಿದೆ.ಕಡಿಮೆಯಾಗದಿದ್ದರೆ ಇನ್ನೊಮ್ಮೆ ಸಿಂಪಡಣೆ ಮಾಡಲಾಗುವುದು– ಹರೀಶ್ ಕುಮಾರ್
 ಕೇಂದ್ರ ನಿರ್ವಾಹಕರು.
ಕೇಂದ್ರದ ಮಾಲಕರು ಹೊಣೆ- ಈಗಾಗಲೇ ನಾವು ಪಂಚಾಯತ್ ನಿಂದ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ವ್ಯವಸ್ಥೆ ಮಾಡಲು ತಿಳಿಸಲಾಗಿದೆ. ಎಲ್ಲಾ ಮನೆಗಳಿಗೆ ಔಷಧ ಸಿಂಪಡಿಸಲು ಒಪ್ಪಿ ಕೊಂಡಿದ್ದಾರೆ.  ಕೇಂದ್ರದ ಶುಚಿತ್ವದ ಕೊರತೆಯೂ ಎದ್ದು ಕಾಣುತ್ತದೆ. ಜನರಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಕೇಂದ್ರದ ನಿರ್ವಹಣೆ ಅದರ ಮಾಲಕರ ಜವಾಬ್ದಾರಿಯಾಗಿದೆ ಅವರೆ ಅದಕ್ಕೆ ಹೊಣೆಗಾರರು-ಗೀತಾ.ಬಿ, ನಿಡ್ಪಳ್ಳಿ ಗ್ರಾ.ಪಂ ಅಧ್ಯಕ್ಷರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.