ಪುತ್ತೂರು ಅಬಕಾರಿ ಉಪ ಅಧೀಕ್ಷಕರ ದಾಳಿ:ಎಡಮಂಗಲದಲ್ಲಿ ಕಳ್ಳಭಟ್ಟಿ ಸರಾಯಿ ಪತ್ತೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಪುತ್ತೂರು ಉಪವಿಭಾಗದ ಅಬಕಾರಿ ಉಪಧೀಕ್ಷಕರು ಕಡಬ ತಾಲೂಕಿನ ಎಡಮಂಗಲದಲ್ಲಿ ಗ್ರಾಮದ ಪುಲಿಕುಕ್ಕುವಿನಲ್ಲಿ ನಡೆಸಿದ ದಾಳಿಯಲ್ಲಿ ಮನೆಯೊಂದರಲ್ಲಿ ತಯಾರಿಸುತ್ತಿದ್ದ ಕಳ್ಳಭಟ್ಟಿ ಸಾರಾಯಿ ಪತ್ತೆಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕಡಬ ತಾಲೂಕಿನ ಸುಳ್ಯವಲಯದಲ್ಲಿರುವ ಎಡಮಂಗಲ ಗ್ರಾಮದ ಪುಲಿಕುಕ್ಕು ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಕಳ್ಳಭಟ್ಟಿ ತಯಾರಿಸುತ್ತಿರುವುದು ಬೆಳಕಿಗೆ ಬಂದಿದ್ದು, 1 ಲೀಟರ್ ಕಳ್ಳಭಟ್ಟಿ ಸಾರಾಯಿ ಮತ್ತು 110 ಲೀಟರ್ ಗೇರು ಹಣ್ಣಿನ ಕೊಳೆರಸ ಹಾಗು ಪರಿಕರಗಳನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. ದಾಳಿ ವೇಳೆ ಆರೋಪಿ ಪದ್ಮನಾಭ ಅವರು ಪರಾರಿಯಾಗಿದ್ದಾರೆ. ಅಬಕಾರಿ ಉಪಅಧೀಕ್ಷಕ ಶಿವಪ್ರಸಾದ್ ಅವರ ನೇತೃತ್ವದ ದಾಳಿಯಲ್ಲಿ ಅಬಕಾರಿ ಉಪ ನಿರೀಕ್ಷಕ ಅಂಗಾರ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಪ್ರಮೋದ, ಅಮರೇಶ, ಶರಣಪ್ಪ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.