ಲಾಕ್‌ಡೌನ್ ಸಮಯದಲ್ಲಿ ಕರ್ತವ್ಯ ನಿರತ ಪೊಲೀಸರ ದಾಹ ತಣಿಸುತ್ತಿರುವ ನೃತ್ಯ ಪಟು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜನತಾ ಕರ್ಫ್ಯೂ ಸಂದರ್ಭ ನಗರಸಭೆ ವ್ಯಾಪ್ತಿಯ ವಿವಿಧ ಕಡೆ ಚೆಕ್‌ಪಾಯಿಂಟ್ ಕರ್ತವ್ಯ ನಿರತರಾಗಿರುವ ಪೊಲೀಸರ ದಾಹ ತಣಿಸುವ ಕಾರ್ಯದಲ್ಲಿ ಪುತ್ತೂರಿನ ನೃತ್ಯಪಟುವೊಬ್ಬರು ನಿರಂತರ ತೆರೆಮರೆಯಲ್ಲಿ ತನ್ನ ಸೇವಾ ಕಾರ್ಯ ಮಾಡುತ್ತಿದ್ದಾರೆ.

 


ಕೋವಿಡ್-19 ವಿರುದ್ಧದ ಹೋರಾಟದಲ್ಲಿ, ಮಾನವೀಯತೆ ಸೋಲಬಾರದು. ನಾವು ಕೊರೋನಾ ವೈರಸ್ ವಿರುದ್ಧ ಗೆಲ್ಲಬೇಕೆಂಬ ನಿಟ್ಟಿನಲ್ಲಿ ಕೇವಲ ನೃತ್ಯ ಮಾತ್ರವಲ್ಲ ಧಾರ್ಮಿಕ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯಕರಸೇವಕರಲ್ಲೊಬ್ಬರಾದ ಪುತ್ತೂರು ದರ್ಬೆ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯಪಟು ವಿದ್ವಾನ್ ಗಿರೀಶ್ ಅವರು ಕೋವಿಡ್ 2ನೇ ಅಲೆಯ ಜನತಾ ಕರ್ಪ್ಯೂ ಆರಂಭದಿಂದಲೇ ನಗರಸಭೆ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಚೆಕ್ ಪಾಯಿಂಟ್ ಕರ್ತವ್ಯ ನಿರತ ಪೊಲೀಸರ ದಾಹ ತಣಿಸುವ ಸೇವೆ ಮಾಡುತ್ತಿದ್ದಾರೆ. ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ನಿರಂತರ ಅವರ ಸೇವೆ ನಡೆಯುತ್ತಿದೆ. ಕೋವಿಡ್ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸುವುದು ಅತಿ ಅವಶ್ಯ. ಈ ನಿಟ್ಟಿನಲ್ಲಿ ಹಗಲಿರುಳು  ಕರ್ತವ್ಯದಲ್ಲಿರುವ ಪೊಲೀಸರ ಆರೋಗ್ಯ ಚೆನ್ನಾಗಿ ಇರಬೇಕೆಂದು ಅವರ ರೋಗ ನಿರೋಧಕ ಶಕ್ತಿಗಾಗಿ ವಿದ್ವಾನ್ ಗಿರೀಶ್ ಕುಮಾರ್ ಅವರು ಪೊಲೀಸರಿಗೆ ನಿತ್ಯ ಒಂದು ದಿನ ಒಂದು ರುಚಿಯನ್ನು ಹೋಲುವ ಕಷಾಯ, ನಿಂಬೆ ಷರಬತ್ತು, ಕ್ಯಾರೆಟ್, ಕಾರ್‌ಫ್ರುಟ್, ಬೀಟ್ರೋಟ್, ಜಂಬುನೇರಳೆ, ಪನ್ನೇರಳೆ ಜ್ಯೂಸ್‌ಗಳು, ಟೊಮೆಟೋ, ಕ್ಯಾರೆಟ್ ಸೂಪು ಸೇರಿದಂತೆ ಸಂಜೆ ಲೆಮೆನ್ ಚಹಾವನ್ನು ನೀಡುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬೆಳಗ್ಗೆ ಮತ್ತು ಸಂಜೆ ನಿತ್ಯ ಪೊಲೀಸರಿಗೆ ಆರೋಗ್ಯಕರ ಪಾನೀಯ ವ್ಯವಸ್ಥೆ ಮಾಡುತ್ತಿದ್ದೇನೆ. ಸುಮಾರು 7 ಚೆಕ್‌ಪಾಯಿಂಟ್ ಪೊಲೀಸರಿಗೆ ಸೇರಿದಂತೆ ಕೆಲವೊಂದು ಕಚೇರಿಗಳಿಗೂ ಸೇವೆ ನೀಡುತ್ತಿದ್ದೇನೆ. ಒಂದೊಂದು ದಿನ ಒಂದೊಂದು ಸ್ಪೆಷಲ್ ಪಾನೀಯ ಇರುತ್ತದೆ. ಎಲ್ಲವೂ ಆರೋಗ್ಯಕರ ಪಾನೀಯವಾಗಿದೆ.
ವಿದ್ವಾನ್ ಗಿರೀಶ್ ಕುಮಾರ್

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.