ಉಪ್ಪಿನಂಗಡಿಗೆ ಜಿಲ್ಲಾ ಗೃಹರಕ್ಷಕ ಕಮಾಂಡೆಂಟ್ ಡಾ. ಮುರಲೀಮೋಹನ್ ಭೇಟಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಗೃಹ ರಕ್ಷಕ ದಳದ ಉಪ್ಪಿನಂಗಡಿ ಕಾರ್ಯಾಲಯಕ್ಕೆ ದ.ಕ ಜಿಲ್ಲಾ ಗೃಹ ರಕ್ಷಕ ಕಮಾಂಡೆಂಟ್ ಡಾ. ಮುರಲೀ ಮೋಹನ್ ಚೂಂತಾರು ಭೇಟಿ ನೀಡಿ ಉಪ್ಪಿನಂಗಡಿ ಪ್ರವಾಹ ರಕ್ಷಣಾ ತಂಡದ ಪೂರ್ವ ಸಿದ್ದತೆಯ ಪರಿಶೀಲನೆ ನಡೆಸಿದರು.

 

ಇದೇ ವೇಳೆ ಅವರು ರಕ್ಷಣಾ ತಂಡಕ್ಕೆ ಜಿಲ್ಲಾಡಳಿತ ಒದಗಿಸಿದ ಟೆಂಟ್ ಹಾಗೂ 5 ಗಮ್ ಬೂಟುಗಳನ್ನು ವಿತರಿಸಿದರು. ಹಾಗೂ ತಂಡವನ್ನು ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ ರವರ ನೇತೃತ್ವದಲ್ಲಿ ಓರ್ವ ನುರಿತ ಈಜುಗಾರ, ಎಲೆಕ್ಟ್ರೀಷಿಯನ್, ಕಟ್ಟಡ ನಿರ್ಮಾಣ ಪರಿಣತ ಹಾಗೂ ಇಬ್ಬರು ಸಹಾಯಕರನ್ನು ಒಳಗೊಂಡ ತಂಡವನ್ನು ರಚಿಸಲಾಯಿತು.


ತಂಡವು ಪುತ್ತೂರು ಸಹಾಯಕ ಕಮಿಷನರ್ ಹಾಗೂ ತಹಶೀಲ್ದಾರ್ ರವರ ನಿರ್ದೇಶನದಂತೆ ಕಾರ್ಯನಿರ್ವಹಿಸಲಿದ್ದು, ಕಂದಾಯ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಲಿದೆ ಎಂದು ತಿಳಿಸಿದರು. ರಕ್ಷಣಾ ತಂಡದ ಸದಸ್ಯರಾದ ಎ ಎಸ್ ಎಲ್ ಜನಾರ್ಧನ ಆಚಾರ್ಯ, ಗೃಹ ರಕ್ಷಕರಾದ ವಸಂತ, ಸಮದ್, ಸೋಮನಾಥ್, ಮಂಗಳೂರು ಘಟಕದ ದಿವಾಕರ್, ದಿಷ್ಯಂತ್, ಉಪ್ಪಿನಂಗಡಿ ಘಟಕದಲ್ಲಿ ಮಾರ್ಷಲ್ ಕರ್ತವ್ಯದಲ್ಲಿರುವ ಚೇತನ್, ಗೋಪಾಲ್, ಯತಿರಾಜ್, ನಿಖಿಲ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.