ಕೊಡಿಯಾಲ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ನಿಂದ ಆಹಾರ ಸಾಮಾಗ್ರಿ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಮಹಾಮಾರಿ ರೋಗ ಕೊರೋನಾದಿಂದ ಸಮಾಜದ ಬಹುತೇಕ ಎಲ್ಲಾ ವರ್ಗದ ಜನರಿಗೆ ತೊಂದರೆಯಾಗಿರುವುದನ್ನು ಮನಗಂಡು ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ಕಲ್ಪಡ, ಕೊಡಿಯಾಲ, ಇದರ ವತಿಯಿಂದ ಗ್ರಾಮದ ತೀರಾ ಕಡುಬಡವರಿಗೆ,ಅಶಕ್ತರಿಗೆ ಅಕ್ಕಿ ಸೇರಿದಂತೆ ಆಹಾರ ಸಾಮಾಗ್ರಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಸಾಮಾಜಿಕ ಮುಂದಾಳು ಯತೀಶ್ ಆರುವಾರ, ಶ್ರೀ ಉಳ್ಳಾಕುಲು ದೈವಸ್ಥಾನ ಕಲ್ಪಡ ಇದರ ಮೊಕ್ತೇಸರ ಶಿವರಾಮ ಉಪಾಧ್ಯಾಯ ಮತ್ತು ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ್ ರೈ , ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ಇದರ ಅಧ್ಯಕ್ಷ ಸುಬ್ರಹ್ಮಣ್ಯ ಕೆ.ಎಂ, ಕಾರ್ಯದರ್ಶಿ ಹರ್ಷನ್ ಕೆ.ಟಿ, ಭಾಸ್ಕರ ಗೌಡ ಕೆ, ಲೋಹಿತ್ ಪಿ, ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿ ಸಂತೋಷ್ ನಾಯಕ್ ಕೊಡಿಯಾಲ, ಜಯಂತ್ ಕಾಯರ್ತಡ್ , ಕೇಶವ ಕೆ.ಪಿ, ಗಣೇಶ್ ಪೆರ್ಲೋಡಿ ಮತ್ತು ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ನ ಸದಸ್ಯರು ಭಾಗವಹಿಸಿದ್ದರು. ಕೊಡಿಯಾಲ ಗ್ರಾಮದ ಕಲ್ಪಡ ಒಂದನೇ ವಾರ್ಡಿನ 18 ಬಡ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಅಗತ್ಯ ಆಹಾರ ವಸ್ತುಗಳನ್ನು ವಿತರಿಸಲಾಯಿತು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.