ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರಿಗೆ ಪ್ರತ್ಯೇಕ ಶವಗಾರ – ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಪುತ್ತೂರು ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಈಗಿರುವ ಶವಗಾರ ಕೊಠಡಿಯ ಬಳಿ ಕೋವಿಡ್‌ನಿಂದ ಮೃತಪಟ್ಟವರಿಗೆಂದು ಪ್ರತ್ಯೇಕ ಶವಗಾರ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ಪುತ್ತೂರು ಬಿಜೆಪಿ ಕಚೇರಿಯಲ್ಲಿ ಮೇ ೨೧ರಂದು ಶಾಸಕರ ವಾರ್‌ರೂಮ್, ಸೇವಾ ಭಾರತಿ, ಸಂಘಸಂಸ್ಥೆಗಳ ಮೂಲಕ ನಡೆಯುವ ಕೋವಿಡ್ ಸೋಂಕಿತರಿಗೆ ನೀಡಿದ ಸೇವಾ ಕಾರ್ಯದ ಮಾಹಿತಿ ಪಡೆದ ಬಳಿಕ ಪತ್ರಿಕಾ ಮಾದ್ಯಮದವರೊಂದಿಗೆ ಮಾತನಾಡಿದರು. ಪುತ್ತೂರು ತಾಲೂಕಿನಲ್ಲಿ ಈಗಾಗಲೇ ಕೋವಿಡ್ ಅನ್ನು ನಿಯಂತ್ರಣಕ್ಕೆ ತರುವಂತಹ ಕೆಲಸವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘಸಂಸ್ಥೆಗಳು, ಕಾರ್ಯಪಡೆಯ ಮೂಲಕ ನಡೆಯುತ್ತಿದೆ. ಈಗಾಗಲೇ ಕೋವಿಡ್ ಸೋಂಕು ಅಲ್ಲದ ವ್ಯಕ್ತಿಯೊಬ್ಬರು ಮೃತಪಟ್ಟರೆ ಇಡುವ ಶವಗಾರ ಕೊಠಡಿಯಲ್ಲೇ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಮೃತ ದೇಹವನ್ನು ಇಡುವ ಸಮಸ್ಯೆ ಎದುರಾಗಿತ್ತು. ಇದನ್ನು ಮನಗಂಡು ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಮೃತ ದೇಹವನ್ನು ಇಡಲು ಪ್ರತ್ಯೇಕವಾಗಿ ತಾತ್ಕಾಲಿಕ ಶವಗಾರ ಕೊಠಡಿಯನ್ನು ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ದಿನ ನಿತ್ಯದ ಅಪಘಾತ ಅಥವಾ ವಯೋಸಹಜ ಮೃತಪಟ್ಟವರ ಮೃತ ದೇಹವನ್ನು ಇರಿಸಲು ಮೀಸಲಿಟ್ಟ ಶವಗಾರ ಕೊಠಡಿಯಲ್ಲೇ ಯಾವುದೇ ಆತಂಕವಿಲ್ಲದೆ ಇಡಬಹುದು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಶಾಸಕರ ವಾರ್‌ರೂಮ್‌ನ ಪ್ರಮುಖ್ ಸಾಜ ರಾಧಾಕೃಷ್ಣ ಆಳ್ವ, ತುರ್ತು ಸೇವಾ ವಿಭಾಗದ ಪ್ರಮುಖ್ ಪಿ.ಜಿ.ಜಗನ್ನಿವಾಸ ರಾವ್, ತಾ.ಪಂ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಆರ್.ಸಿನಾರಾಯಣ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಖಾಯಿಲೆಯಿಂದ ಮೃತ ಪಟ್ಟ ವ್ಯಕ್ತಿಯ ಶವವನ್ನು ಕೋವಿಡ್ ಪರೀಕ್ಷೆಯ ಬಳಿಕ ಸಂಬಂಧಿಕರಿಗೆ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಒಂದಷ್ಟು ಸಮಯಾವಕಾಶ ತೆಗೆದು ಕೊಳ್ಳಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಆ ವ್ಯಕ್ತಿಯ ಮೃತ ದೇಹವನ್ನು ಕೋವಿಡ್ ಮಾದರಿಯಲ್ಲೇ ಅಂತ್ಯಕ್ರಿಯೆ ಮಾಡುವ ಬದಲು ಆ ಮೃತ ದೇಹದ ಕೋವಿಡ್ ಪರೀಕ್ಷಾ ವರದಿ ಬರುವ ತನಕ ತಾತ್ಕಾಲಿಕ ಶವಗಾರ ಕೊಠಡಿಯಲ್ಲಿ ಇರಿಸಿ ಬಳಿಕ ಕೊಡುವ ವ್ಯವಸ್ಥೆ ಮಾಡುವುದರಿಂದ ಕೋವಿಡ್ ಸೋಂಕಿತವಲ್ಲದ ಮೃತ ದೇಹವನ್ನು ಅವರ ಸಂಬಂಧಿಕರೇ ಕೊಂಡೊಯ್ಯವ ಅವಕಾಶ ನೀಡುವ ಕೆಲಸ ಮಾಡುವ ಮೂಲಕ ಸಂಬಂದಿಕರ ಆತಂಕ ದೂರ ಆಗಲಿದೆ-ಸಂಜೀವ ಮಠಂದೂರು, ಶಾಸಕರು ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.