ಕಡಬ ಡಿಕೆಶಿ ಅಭಿಮಾನಿ ಬಳಗದಿಂದ ಕೊರೋನಾ ಪೀಡಿತ ಬಡ ರೋಗಿಗಳಿಗೆ ಆಹಾರ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಇಲ್ಲಿನ ಡಿಕೆಶಿ ಅಭಿಮಾನಿ ಬಳಗದ ವತಿಯಿಂದ ಕಡಬ ತಾಲೂಕು ವ್ಯಾಪ್ತಿಯ ಕೊರೋನಾ ಪೀಡಿತ ಕಡು ಬಡ ರೋಗಿಗಳಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ಮೇ.೨೧ರಂದು ಕಡಬದಲ್ಲಿ ನಡೆಯಿತು.

ಕಡಬ ತಾಲೂಕಿನ ೨೧ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಕೊರೋನಾ ಪೀಡಿತ ಸುಮಾರು ೧೫೦ ಮನೆಗಳಿಗೆ ಆಹಾರ ಸಾಮಾಗ್ರಿ ವಿತರಿಸಲಾಯಿತು. ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರು ಪಂಚಾಯತ್ ವ್ಯಾಪ್ತಿಗಳಿಗೆ ತಲುಪಿಸಲು ಸುಧೀರ್ ದೇವಾಡಿಗ ಅವರಿಗೆ ಕಿಟ್ ವಿತರಿಸುವ ಮೂಲಕ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದರು. ಕಡಬ ಡಿಕೆಶಿ ಅಭಿಮಾನಿ ಬಳಗದ ಅಧ್ಯಕ್ಷ ಪೈಝಲ್ ಎಸ್.ಇ.ಎಸ್. ಕಾರ್ಯದರ್ಶಿ ಮನೋಜ್ ಬಳ್ಳೇರಿ, ಪಂಚಾಯತ್ ಸದಸ್ಯ ರಾದ ಶಕೀರ್ ಪಿಳ್ಯ,ಸುಧೀರ್ ದೇವಾಡಿಗ, ಪ್ರಮುಖರಾದ ಪಝಲ್ ಕೋಡಿಂಬಾಳ, ಇಲ್ಯಾಸ್ ಜೆ.ಕೆ, ಝಾಪೀರ್ ವೆರ‍್ಯಾಟಿ, ಆಶೀಸ್, ಅನಿಲ್ ವರ್ಗೀಸ್ ಉಳಿಪ್ಪು, ದೀಕ್ಷಿತ್, ಅಜಯ್, ಇಕ್ಬಾಲ್ ಹೊಸ್ಮಠ ಇವರುಗಳ ನೇತೃತ್ವದಲ್ಲಿ ಆಹಾರ ಕಿಟ್ ಪ್ರಾಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಸದಸ್ಯ ಡಾ| ರಘು, ಜಿ.ಪಂ.ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ರಾಜ್ಯ ಅಲ್ಪಸಂಖ್ಯಾತ ವಿಭಾಗದ ಸಂಚಾಲಕರಾದ ಎ.ಸಿ.ಜಯರಾಜ್, ಶರೀಫ್ ಎ.ಎಸ್.ಕಡಬ ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಕೃಷ್ಣಪ್ಪ.ಜಿ, ಡಿಸಿಸಿ ಪ್ರಧಾನ ಕಾರ‍್ಯದರ್ಶಿ ಎಚ್.ಕೆ.ಇಲ್ಯಾಸ್, ಕಾರ‍್ಯದರ್ಶಿ ಸೈಮನ್ ಸಿ.ಜೆ, ಉಪಾಧ್ಯಕ್ಷ ವಿಜಯಕುಮಾರ್ ರೈ ಕರ್ಮಾಯಿ, ಸದಸ್ಯೆ ನೀಲಾವತಿ ಶಿವರಾಮ್, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ, ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗಣೇಶ್ ಕೈಕುರೆ, ಕಡಬ ವಲಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ, ಕಾಂಗ್ರೆಸ್ ಕಿಸಾನ್ ಘಟಕದ ಯತೀಶ್ ಬಾನಡ್ಕ, ಪ್ರಮುಖರಾದ ತಾ.ಪಂ. ಮಾಜಿ ಸದಸ್ಯ ಫಝಲ್ ಕೋಡಿಂಬಾಳ, ಕಡಬ ಸಿ.ಎ.ಬ್ಯಾಂಕ್ ನಿರ್ದೇಶಕ ಸತೀಶ್ ನಾಕ್ ಮೇಲಿನ ಮನೆ, ಹಾಜಿ ಹನೀಫ್.ಕೆ.ಎಮ್, ಸುಧೀರ್ ದೇವಾಡಿಗ, ಸತೀಶ್ಚಂದ್ರ ಬೀರುಕ್ಕು, ಹರೀಶ್ ರೈ ನಡುಮಜಲು, ಬಾಬು ಮುಗೇರ ಮೊದಲಾದವರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.