ಪುತ್ತೂರು ಪೇಟೆಯ ಬೀದಿ ನಾಯಿಗಳಿಗೆ ತಟ್ಟದ ಲಾಕ್‌ಡೌನ್ ಎಫೆಕ್ಟ್: 15 ವರ್ಷಗಳಿಂದ ಬೀದಿ ನಾಯಿಗಳ ಹಸಿವು ನೀಗಿಸುತ್ತಿರುವ ರಾಜೇಶ್ ಬನ್ನೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪುತ್ತೂರು ಪೇಟೆಯ 150 ಬೀದಿ ನಾಯಿಗಳಿಗೆ ಅನ್ನದಾತನಾಗಿರುವ ಮಾಜಿ ಪುರಸಭಾಧ್ಯಕ್ಷ

ಪುತ್ತೂರು: ಕೋವಿಡ್-19 ವೈರಸ್‌ನಿಂದ ಉಂಟಾದ ಸಮಸ್ಯೆಯಿಂದಾಗಿ ವಿಶ್ವವೇ ತಲ್ಲಣಿಸಿ ಹೋಗಿರುವ ಪ್ರಸ್ತುತ ಕಾಲಘಟ್ಟದಲ್ಲಿ ಬೀದಿ ನಾಯಿಗಳಿಗೂ ಅನ್ನ ನೀಡುವ ಮೂಲಕ ಮಾನವೀಯತೆ ಮೆರೆಯುವವರು ಅನೇಕರಿದ್ದಾರೆ.ಆದರೆ ಪುತ್ತೂರು ಪೇಟೆಯ ಬೀದಿ ನಾಯಿಗಳಿಗೆ ಲಾಕ್‌ಡೌನ್ ಪರಿಣಾಮ ದೊಡ್ಡ ಮಟ್ಟದಲ್ಲಿ ತಟ್ಟಿಲ್ಲ ಎಂದೇ ಹೇಳಬಹುದು.ಇಲ್ಲಿ ಲಾಕ್‌ಡೌನ್ ಇದ್ದರೂ ಇಲ್ಲದಿದ್ದರೂ ಕಳೆದ 15 ವರ್ಷಗಳಿಂದ ಬೀದಿ ನಾಯಿಗಳಿಗೆ ನಿತ್ಯ ಒಂದು ಹೊತ್ತಿನ ಊಟವನ್ನು ಮಾಜಿ ಪುರಸಭೆಯ ಅಧ್ಯಕ್ಷ ’ಪ್ರಾಣಿ ಪ್ರಿಯ’ ರಾಜೇಶ್ ಬನ್ನೂರು ನೀಡುತ್ತಾ ಬರುತ್ತಿದ್ದಾರೆ.

ಕೋವಿಡ್ ಪ್ರಥಮ ಅಲೆಯ ಸಂದರ್ಭ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ನ ಕಠಿಣ ಪರಿಸ್ಥಿತಿಯಲ್ಲಿ ತಿಂಗಳುಗಟ್ಟಲೆ ದೇಶವಿಡೀ ಸ್ತಬ್ಧವಾಗಿತ್ತು. ಹೊಟೇಲ್‌ಗಳು, ಕ್ಯಾಂಟೀನ್‌ಗಳು, ರಸ್ತೆ ಬದಿಯ ಊಟ, ತಿಂಡಿ ಅಂಗಡಿಗಳು ತಿಂಗಳುಗಳ ಕಾಲ ಮುಚ್ಚಿದ್ದವು.ಅದೇ ರೀತಿ ಕೋವಿಡ್ ಎರಡನೇ ಅಲೆಗೆ ಸಂಬಂಧಿಸಿ ಜನತಾ ಕರ್ಫ್ಯೂ, ಲಾಕ್‌ಡೌನ್ ಸಂದರ್ಭದಲ್ಲೂ ಅದೇ ಸಮಸ್ಯೆ ಎದುರಾಗಿದ್ದು ಬೀದಿ ನಾಯಿಗಳಿಗೂ ಹೊಟ್ಟೆಗೆ ಹಿಟ್ಟು ಸಿಗದಿರುವುದು ಸಹಜ.ಅದರೆ ಪುತ್ತೂರು ಪೇಟೆಯಲ್ಲಿನ ಸುಮಾರು 15೦ ಬೀದಿ ನಾಯಿಗಳಿಗೆ ಆಹಾರದ ಕೊರತೆ ಆಗಿಲ್ಲ.ನಿತ್ಯ ಒಂದು ಹೊತ್ತಿನ ಮೃಷ್ಟಾನ್ನ ಭೋಜನ ರಾಜೇಶ್ ಬನ್ನೂರು ಅವರಿಂದ ಸಿಗುತ್ತಿದೆ.

ದಿನಕ್ಕೆ ೨೦ ಕೆ.ಜಿ ಅಕ್ಕಿ: ಪ್ರತಿದಿನ ಮಧ್ಯಾಹ್ನ ನಾಯಿಗಳಿಗಾಗಿ 2೦ ಕೆ.ಜಿ ಅಕ್ಕಿಯ ಅನ್ನ ಬೇಯಿಸುವ ಕಾರ್ಯ ಆರಂಭ.ಅನ್ನವಾದ ಬಳಿಕ ಅದರೊಂದಿಗೆ ಕೋಳಿ ಮಾಂಸ ಹಾಗೂ ಇತರ ಖಾದ್ಯಗಳನ್ನು ಬೆರೆಸಿ ಸಂಜೆ ಬೀದಿಗೆ ತೆರಳಿ ನಾಯಿಗಳ ಹಸಿವನ್ನು ನೀಗಿಸುವ ಕೆಲಸ ನಡೆಯುತ್ತದೆ.ಮುಸ್ಸಂಜೆಯಿಂದ ರಾತ್ರಿಯ ತನಕ ಅನ್ನದಾನ ನಡೆಯುತ್ತದೆ.ನಾಯಿಗಳಿಗೆ ಊಟ ನೀಡಲಿಕ್ಕಾಗಿಯೇ ಪೇಪರ್ ಪ್ಲಾಸ್ಟಿಕ್ ಬಳಸಲಾಗುತ್ತದೆ.ಕೊರೋನಾ ಬರುವ ಮೊದಲು ಪ್ರತಿ ದಿನ ಕೋಳಿ ಮಾಂಸ ಊಟವಿತ್ತು.ಇದೀಗ ಹೊಟೇಲ್ ಉದ್ಯಮಗಳು ಬಂದ್ ಆಗಿದ್ದರಿಂದ ಒಣ ಮೀನು ಊಟ.ಇದರ ನಡುವೆ ಮೊಸರನ್ನ ಊಟವೂ ನಾಯಿಗಳಿಗೆ ನೀಡಲಾಗುತ್ತಿದೆ.

ಹಾರ್ನ್‌ಗೆ ಓಡೋಡಿ ಬರುವ ನಾಯಿಗಳು: ಸಂಜೆ ಗಂಟೆ 4 ರಿಂದ ರಾತ್ರಿ ಸುಮಾರು 10 ಗಂಟೆಯ ತನಕ ಬೀದಿ ನಾಯಿಗಳು ಒಟ್ಟಾಗಿ ಸೇರುವ ಜಾಗಗಳನ್ನು ಗುರುತಿಸಿ ಅಲ್ಲಿಗೆ ತೆರಳಿ ಊಟೋಪಚಾರವನ್ನು ನೀಡಲಾಗುತ್ತದೆ.ವಾತ್ಸಲ್ಯದ ಊಟವನ್ನು ನೀಡುತ್ತಿರುವ ರಾಜೇಶ್ ಬನ್ನೂರು ಅವರ ಮಾತನಾಡುವ ಶಬ್ದ ಅಥವಾ ಅವರ ಸ್ಕೂಟರ್ ಶಬ್ದ ಕೇಳಿದರೆ ಸಾಕು ಬೀದಿ ನಾಯಿಗಳು ಅಲ್ಲಿ ಪ್ರತ್ಯಕ್ಷವಾಗುತ್ತವೆ.ಪ್ರತಿ ದಿನ ಅವರು ಮಂಜಲ್ಪಡ್ಪು, ಬೈಪಾಸ್, ದರ್ಬೆ, ಕೋರ್ಟು ರಸ್ತೆ, ಮಹಾಲಿಂಗೇಶ್ವರ ದೇವಸ್ಥಾನದ ವಠಾರ, ಬಸ್‌ನಿಲ್ದಾಣ, ಮುಖ್ಯರಸ್ತೆಯಲ್ಲಿ ನಾಯಿಗಳಿಗೆ ಊಟ ಹಾಕುತ್ತಾರೆ.ಈ ಸಂದರ್ಭ ಅವರ ಸ್ಕೂಟರ್‌ನ ಶಬ್ದಕ್ಕೆ ಮತ್ತು ಸ್ಕೂಟರ್ ಹಾರ್ನ್‌ಗೆ ಬೀದಿ ನಾಯಿಗಳು ಸ್ಕೂಟರ್ ಅನ್ನು ಸುತ್ತುವರಿಯುತ್ತವೆ.

ಸುಮಾರು 15 ವರ್ಷಗಳಿಂದ ಬೀದಿ ನಾಯಿಗಳಿಗೆ ಊಟ ಹಾಕುವ ಸೇವಾ ಕಾರ್ಯ ನಡೆಯುತ್ತಿದೆ.ಲಾಕ್‌ಡೌನ್‌ನಿಂದಾಗಿ ಕೋಳಿ ಊಟದ ಬದಲು ಒಣ ಮೀನಿನ ಊಟ, ಮೊಸರನ್ನ, ಸಾಂಬಾರು ಊಟ ನೀಡಲಾಗುತ್ತಿದೆ. ದಿನಕ್ಕೆ ಸುಮಾರು 2೦ ಕೆ.ಜಿಯಷ್ಟು ಅಕ್ಕಿ ಬೇಕಾಗುತ್ತದೆ. ಪ್ರಸ್ತುತ ಮೊಸರನ್ನ ಊಟ ಮಾಡಿದಂದು ಕೆಲವೊಂದು ಅಲೆಮಾರಿ ದನಗಳಿಗೂ ಊಟ ನೀಡಲಾಗುತ್ತಿದೆ.ಬಹಳಷ್ಟು ಪಕ್ಷಿಗಳಿಗೂ ಇತ್ತೀಚಿಗಿನ ದಿನಗಳಲ್ಲಿ ಆಹಾರದ ಕೊರತೆ ಕಾಣುತ್ತಿದೆ.ಅವುಗಳಿಗೂ ಆಹಾರ ಕೊಡುವುದು ಉತ್ತಮ. ನನ್ನೊಂದಿಗೆ ಸೂರ್ಯ ಕುಮಾರ್ ಸಹಾಯಕರಾಗಿ ಸಹಕಾರ ನೀಡುತ್ತಿದ್ದಾರೆ.ನಮ್ಮ ನಿರಂತರ ಸೇವಾ ಕಾರ್ಯ ನೋಡಿ ದಾನಿಗಳು ಅಕ್ಕಿ ಸಾಮಾಗ್ರಿಗಳನ್ನು ನೀಡಿದ್ದಾರೆ.ಲಾಕ್‌ಡೌನ್ ಸಮಯದಲ್ಲಿ ಹರಿಣಿ ಪುತ್ತೂರಾಯ ಅವರು 2 ಕ್ವಿಂಟಾಲ್ ಅಕ್ಕಿ ನೀಡಿದ್ದಾರೆ.ಅದೇ ರೀತಿ ಹಲವಾರು ಮಂದಿ ಹಲವು ತರದಲ್ಲಿ ಸಹಾಯ ಮಾಡುತ್ತಿದ್ದಾರೆ. ರಾಜೇಶ್ ಬನ್ನೂರು, ಪ್ರಾಣಿ ಪ್ರಿಯ

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.