ನಗರಸಭೆ ಸದಸ್ಯರ ಕಾರ್ಯಪಡೆಯಿಂದ ಮನೆ ಸಂಪರ್ಕ ಅಭಿಯಾನ ನಾಲ್ಕೇ ದಿನದಲ್ಲಿ 7,300 ಮನೆ ಸಂಪರ್ಕ-ಜೀವಂಧರ್ ಜೈನ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ ನಿರ್ವಹಣೆಗಾಗಿ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ನಗರಸಭಾ ಸದಸ್ಯರ ನೇತೃತ್ವದಲ್ಲಿ 5 ಮಂದಿಯ ಕಾರ್ಯಪಡೆಯಿಂದ ಮೇ.16ರಂದು ಆರಂಭಗೊಂಡಿದ್ದ ಮನೆ ಮನೆ ಭೇಟಿ ಅಭಿಯಾನಕ್ಕೆ ಸಂಬಂಧಿಸಿ 31 ವಾರ್ಡ್‌ಗಳಲ್ಲಿ ನಾಲ್ಕೇ ದಿನದಲ್ಲಿ 730೦ ಮನೆಯನ್ನು ಸಂಪರ್ಕ ಮಾಡಲಾಗಿದೆ. ಇನ್ನು ಮೂರು ದಿನಗಳಲ್ಲಿ ಶೇ.೧೦೦ ಮನೆ ಸಂಪರ್ಕ ಪೂರ್ಣಗೊಳ್ಳಲಿದೆ ಎಂದು ನಗರಸಭೆ, ಅಧ್ಯಕ್ಷ ಕೆ.ಜೀವಂಧರ್ ಜೈನ್ ತಿಳಿಸಿದ್ದಾರೆ.

ಅವರು ನಗರಸಭೆ ಕಚೇರಿಯಲ್ಲಿ ಸುದ್ದಿಯೊಂದಿಗೆ ಮಾತನಾಡಿ ಕೋವಿಡ್ ನಿಯಂತ್ರಣಕ್ಕಾಗಿ ಒಂದು ಸಲ ಮನೆ ಸಂಪರ್ಕ ಮಾಡಿದರೆ ಸಾಲದು. ಅದನ್ನು ಪಾಲೋಅಪ್ ಮಾಡಬೇಕು ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಂತೆ ಈ ಅಭಿಯಾನ ಆರಂಭಗೊಂಡಿತ್ತು. ಕೋವಿಡ್‌ನಿಂದ ಸಾವು ನೋವು ಆಗದ ರೀತಿಯಲ್ಲಿ ನಗರಸಭೆ ವ್ಯಾಪ್ತಿಯ ಕಾರ್ಯಪಡೆ ದಿನ ನಿತ್ಯ ಮನೆ ಸಂಪರ್ಕ ಮಾಡಬೇಕೆನ್ನುವ ಉದ್ದೇಶದಿಂದ ಆರಂಭದಲ್ಲಿ ಏಕದಿನದ ಮನೆ ಮನೆ ಅಭಿಯಾನ ನಡೆಯಿತು. ಅದನ್ನು ಮುಂದುರಿಸಿ ನಗರಸಭಾ ಸದಸ್ಯರ ನೇತೃತ್ವದಲ್ಲಿ ಆಶಾ ಕಾರ್ಯಕರ್ತರು, ಬೀಟ್ ಪೊಲೀಸರು, ಅಂಗನವಾಡಿ ಕಾರ್ಯಕರ್ತೆ ಮತ್ತು ನಗರಸಭೆ ಸಿಬ್ಬಂದಿಗಳ ತಂಡದೊಂದಿಗೆ ಮನೆ ಮನೆ ಸಂಪರ್ಕ ಅಭಿಯಾನ ಮಾಡಿ ಎಲ್ಲರ ಮಾಹಿತಿ ಪಡೆಯುವ ಮೂಲಕ ಮನೆಗೆ ಹೊಸದಾಗಿ ಬಂದವರ ಮತ್ತು ಸೋಂಕತರ ಪಟ್ಟಿ ಮಾಡುತ್ತಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ 2011ರ ಜನಗಣತಿಯ ಆಧಾರದಲ್ಲಿ 11,378 ಮನೆಗಳಿವೆ. ಪ್ರಸ್ತುತ ದಿನಗಳಲ್ಲಿ ಆ ಮನೆಗಳ ಸಂಖ್ಯೆ ಹೆಚ್ಚಾಗಿರುಬಹುದು. ಈ ನಿಟ್ಟಿನಲ್ಲಿ ಮನೆ ಸಂಖ್ಯೆ ಹೆಚ್ಚು ಸಿಗುವ ಸಾಧ್ಯತೆ ಇದೆ. ಮೇ 20ರಂದು ನಗರಸಭಾ ಸದಸ್ಯರಿಂದ ಪಡೆದ ಮಾಹಿತಿಯಂತೆ ಮೇ 19ರ ತನಕ 7,300 ಮನೆಗಳನ್ನು ಸಂಪರ್ಕ ಮಾಡಲಾಗಿದ್ದು, ಒಟ್ಟು 191 ಮಂದಿಗೆ ಪಾಸಿಟಿವ್ ವರದಿ ಲಭ್ಯವಾಗಿದೆ. ಇದರಲ್ಲಿ 141 ಮಂದಿ ಹೋಮ್ ಐಸೋಲೇಶನ್ ಮತ್ತು ೩೭ ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆದರೆ ಮೇ 19ರ ಬಳಿಕ ಇದರಲ್ಲಿ ಕೆಲವರು ಗುಣಮುಖರಾಗಿರಲೂ ಬಹುದು. ಮನೆ ಮನೆ ಸಂಪರ್ಕದ ಅಭಿಯಾನದಲ್ಲಿ ಮನೆಯಲ್ಲಿ ಒಂದೇ ಶೌಚಾಲಯ ಮತ್ತು ಕೊಠಡಿ ಇಲ್ಲದ ಹಿನ್ನೆಲೆಯಲ್ಲಿ ಇಬ್ಬರನ್ನು ಬಲ್ನಾಡು ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯ ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಿಕೊಡಲಾಗಿದೆ. ಇನ್ನೂ ಉಳಿದಂತೆ ಹಲವಾರು ಮಂದಿ ಐಸೋಲೇಶನ್‌ನಲ್ಲಿದ್ದು ಅವರಿಗೆ ಪ್ರತ್ಯೇಕ ಶೌಚಾಲಯ ಮತ್ತು ಕೊಠಡಿ ಇಲ್ಲದಿರುವುದನ್ನು ಗಮನಿಸಿದ್ದು, ಅವರಿಗೆ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗುವುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.