ನೆಲ್ಲಿಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರದಲ್ಲಿ ಶೀಟ್ ಅಳವಡಿಕೆ-ಲಸಿಕೆಗೆಂದು ಬರುವವರಿಗೆ ವಿಶ್ರಾಂತಿ ಸೌಲಭ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ ಲಸಿಕೆ ಪಡೆಯಲು ಬರುವ ಜನರಿಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂಬ ಶಾಸಕರ ಚಿಂತನೆಯಂತೆ ಪುತ್ತೂರು ನೆಲ್ಲಿಕಟ್ಟೆಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರದಲ್ಲಿ ಶೀಟ್ ಅಳವಡಿಸುವ ಕಾರ್ಯವನ್ನು ನಗರಸಭೆ ಅಧ್ಯಕ್ಷರ ನೇತೃತ್ವದಲ್ಲಿ ಶಾಮಿಯಾನದ ಮಾಲಕರೊಬ್ಬರು ಮುಂದೆ ಬಂದು ಉಚಿತವಾಗಿ ಶೀಟ್ ಅಳವಡಿಸಿಕೊಟ್ಟಿದ್ದಾರೆ. ಮೇ 21ರಂದು ಶೀಟ್ ಅಳವಡಿಕೆ ಪೂರ್ಣಗೊಂಡಿದೆ.

 

ಹವಾಮಾನ ವೈಪರಿತ್ಯದಿಂದಾಗಿ ಮಳೆ, ಬಿಸಿಲಿನಿಂದ ಕೋವಿಡ್ ಲಸಿಕೆ ಪಡೆಯಲು ಬರುವವರಿಗೆ ರಕ್ಷಣೆ ಕೊಡಬೇಕು. ಅದೆ ರೀತಿ ಅವರ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ಸಂಜೀವ ಮಠಂದೂರು ಮೇ 21ರಂದು ನೆಲ್ಲಿಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಅವರ ನೇತೃತ್ವದಲ್ಲಿ ಮಂಜಲ್ಪಡ್ಪು ವಿಜಯಶ್ರೀ ಶಾಮಿಯಾನದ ಮಾಲಕ ಮಂಜುನಾಥ್ ಅವರು ಉಚಿತವಾಗಿ ಶೀಟ್ ಅಳವಡಿಸುವ ಸೇವಾ ಕಾರ್ಯ ಮಾಡುವುದಾಗಿ ಮುಂದೆ ಬಂದು ಲಸಿಕೆ ಕೇಂದ್ರದ ವಠಾರದಲ್ಲಿ ಶೀಟ್ ಅಳವಡಿಕೆ ಮಾಡಿಕೊಟ್ಟಿದ್ದಾರೆ. ಇದೇ ವೇಳೆ ಬಜರಂಗದಳ ದಕ್ಷಿಣ ಪ್ರಾಂತ ವಿಭಾಗ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಅವರು ಲಸಿಕೆ ಕೇಂದ್ರದ ವಠಾರದಲ್ಲಿ ಮಳೆ ನೀರು ನಿಲ್ಲದಂತೆ ಮಣ್ಣಿನ ಕೆಲಸವನ್ನು ತನ್ನ ಸಂಸ್ಥೆ ಧರಿತ್ರಿಯಿಂದ ಜೆಸಿಬಿ ಮೂಲಕ ಮಾಡಿಸಿಕೊಡುವುದಾಗಿ ಭರವಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಶಾಸಕರ ವಾರ್‌ರೂಮ್‌ನ ಪ್ರಮುಖ್ ಸಾಜ ರಾಧಾಕೃಷ್ಣ ಆಳ್ವ, ಬಜರಂಗದಳ ಜಿಲ್ಲಾ ಸಂಚಾಲಕ ಶ್ರೀಧರ್ ತೆಂಕಿಲ, ವಿಶ್ವಹಿಂದೂ ಪರಿಷತ್‌ನ ಜಯಂತ್, ರಂಜಿತ್, ಜೀವನ್ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.