ಬೆಳಿಗ್ಗೆ 7 ಗಂಟೆಯಿಂದ ಪಡಿತರ ವಿತರಣೆಗೆ ಜಿಲ್ಲಾಧಿಕಾರಿ ಆದೇಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಮಂಗಳೂರು: ನ್ಯಾಯಬೆಲೆ ಅಂಗಡಿದಾರರು ಬೆಳಗ್ಗೆ ಏಳು ಗಂಟೆಗೆ ಮುಂಚಿತವಾಗಿ ಬಂದು ಕಡ್ಡಾಯವಾಗಿ ಏಳು ಗಂಟೆಗೆ ಪಡಿತರ ವಿತರಣೆ ಪಾರಂಭಿಸುವಂತೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ. ಪಡಿತರ ಚೀಟಿದಾರರು ದಟ್ಟಣೆಯಾದಲ್ಲಿ ಆದ್ಯತೆ ಮೇರೆಗೆ ಸಾಲಿನಲ್ಲಿ ನಿಲ್ಲಲು ಕ್ಯೂ ಸ್ಲಿಪ್ ಯಾ ಟೋಕನ್‌ಗಳನ್ನು ನೀಡಿ ಪಡಿತರ ವಿತರಿಸಬೇಕು. 10 ಗಂಟೆಯ ನಂತರವೂ ಕ್ಯೂನಲ್ಲಿದ್ದ ಪಡಿತರ ಚೀಟಿದಾರರನ್ನು ಹಿಂದಕ್ಕೆ ಕಳುಹಿಸದೆ ಕಡ್ಡಾಯವಾಗಿ ಪಡಿತರ ವಿತರಿಸಬೇಕು.

ಪಡಿತರ ವಿತರಣಾ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಅಂತೆಯೇ ಸ್ಯಾನಿಟೈಸರ್ ಹಾಗೂ ನೀರಿನ ವ್ಯವಸ್ಥೆಯನ್ನು ಮಾಡಿಕೊಳ್ಳುವುದು. ಆಧಾರ್ ಓಟಿಪಿ ಸೌಲಭ್ಯವನ್ನು ಒದಗಿಸಿರುವುದರಿಂದ ಯಾವುದೇ ಗೊಂದಲಕ್ಕೆ ಒಳಗಾಗದೆ ಪಡಿತರ ವಿತರಿಸುವುದು ಮತ್ತು ಪಡಿತರ ಚೀಟಿದಾರರನ್ನು ಬಯೋಮೆಟ್ರಿಕ್ ಕೊಡಲು ಒತ್ತಾಯಿಸಬಾರದು. ನ್ಯಾಯಬೆಲೆ ಅಂಗಡಿಗಳಲ್ಲಿ ೨೦೨೧ನೇ ಮೇ ಮಾಹೆಯ PMGKAY ಒಳಗೊಂಡ ವಿತರಣಾ ಪ್ರಮಾಣದ ಫಲಕವನ್ನು ಅಳವಡಿಸುವುದು, ಮಾತ್ರವಲ್ಲದೆ ಪಡಿತರ ಚೀಟಿಗಳಿಗೆ ನಿಗದಿಪಡಿಸಲಾದ ಪ್ರಮಾಣದಲ್ಲಿ ಪಡಿತರ ವಿತರಣೆಯನ್ನು ಕೈಗೊಳ್ಳುವುದು. ಯಾವುದೇ ಕಾರಣಕ್ಕೂ ಕಡಿಮೆ ಪ್ರಮಾಣದಲ್ಲಿ ಪಡಿತರವನ್ನು ವಿತರಿಸತಕ್ಕದಲ್ಲ. ಪಡಿತರದಲ್ಲಿ ಬೆಳ್ತಿಗೆ ಹಾಗೂ ಕುಚ್ಚಿಲಕ್ಕಿಯನ್ನು ಸಮ ಪ್ರಮಾಣದಲ್ಲಿ ವಿತರಿಸುವುದು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಉಚಿತವಾಗಿ ಪಡಿತರವನ್ನು ವಿತರಿಸುವುದು. ಯಾವುದೇ ಕಾರಣಕ್ಕೂ ಕಾನೂನು ಬಾಹಿರವಾಗಿ ಹಣ ಪಡೆಯಬಾರದು. ನ್ಯಾಯಬೆಲೆ ಅಂಗಡಿದಾರರು ಪಡಿತರ ಚೀಟಿದಾರರೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಗೆ ಜನ ದಟ್ಟಣೆಯಾಗದಂತೆ ಹಾಗೂ ಸುವ್ಯವಸ್ಥೆ ಕಾಪಾಡಲು ಈಗಾಗಲೇ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆ. ಯಾವುದೇ ರೀತಿಯಲ್ಲೂ ಪಡಿತರ ವಿತರಣೆಯಲ್ಲಿ ಲೋಪವಾಗದಂತೆ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿಕೊಂಡು ಸಮಸ್ಯೆಗಳಿಗೆ ಆಸ್ಪದ ನೀಡದೆ ಪಡಿತರ ವಿತರಣೆಯನ್ನು ಮಾಡತಕ್ಕದ್ದು.ಹೊರ ಜಿಲ್ಲೆಯ ಪಡಿತರ ಚೀಟಿದಾರರು ದಾಸ್ತಾನು ಇರುವ ಸಮೀಪದ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆಯತಕ್ಕದ್ದು. ಪಡಿತರ ಪಡೆಯಲು ಮಾಹಿತಿಗಾಗಿ ಕೆಳಕಂಡ ದೂರವಾಣಿಯನ್ನು ಸಂಪರ್ಕಿಸಬಹುದು. ಶ್ರೀಮತಿ ಶೋಭಾ, ಆಹಾರ ನಿರೀಕ್ಷಕರು 9480250251, ಪುತ್ತೂರು ತಾಲೂಕು 08251 – 231349, ತಾಲೂಕು ಸಹಾಯವಾಣಿ ಸಿಬ್ಬಂದಿಗಳು ಮೊಬೈಲ್ ನಂಬ್ರಮಂಗಳೂರು ಅ.ಪ.ಪ್ರದೇಶ 0824 – 2423622 ರೇಖಾ, ಆಹಾರ ನಿರೀಕ್ಷಕರು 9110452676, ಮಂಗಳೂರು ತಾಲೂಕು 0824 – 2412033, ರಾಜ್ಯಶ್ರೀ ಅಡ್ಯಂತಾಯ, ಆಹಾರ ನಿರೀಕ್ಷಕರು 9482502247, ಬಂಟ್ವಾಳ ತಾಲೂಕು 08255 – 232125 ಸರಸ್ವತಿ.ಕೆ, ಆಹಾರ ನಿರೀಕ್ಷಕರು 9449389715, ಬೆಳ್ತಂಗಡಿ ತಾಲೂಕು 08256 – 232383, ವಿಶ್ವ.ಕೆ, ಆಹಾರ ನಿರೀಕ್ಷಕರು 8762698174, ಸುಳ್ಯ ತಾಲೂಕು 08257 – 231330, ವಸಂತಿ, ಆಹಾರ ನಿರೀಕ್ಷಕರು 9845466149 ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.