ಕಾಂಗ್ರೆಸ್ ಅಪಪ್ರಚಾರದಿಂದ ಆರಂಭದಲ್ಲಿ ಲಸಿಕೆ ನಿರಾಕರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಈಗ ಲಸಿಕೆಗೆ ಬೇಡಿಕೆ ಬರುತ್ತಿದ್ದು, ಪೂರೈಕೆಗೆ ಕ್ರಮ: ಸಚಿವ ಎಸ್. ಅಂಗಾರ

ಪುತ್ತೂರು: ಆರಂಭದಲ್ಲಿ ಕೋವಿಡ್ ಸೋಂಕಿನ ಲಸಿಕೆ ವಿರುದ್ಧ ಕಾಂಗ್ರೆಸ್‌ನಿಂದ ಅಪಪ್ರಚಾರ ನಡೆದಿತ್ತು. ಇದರಿಂದಾಗಿ ಲಸಿಕೆ ಪಡೆಯಲು ಜನರು ನಿರಾಕರಿಸಿದ್ದರೂ ಕೂಡ. ಆದರೆ ಈಗ ಜನರು ಲಸಿಕೆ ಪಡೆದುಕೊಳ್ಳಲು ಮುಂದೆ ಬರುತ್ತಿದ್ದಾರೆ. ಒಂದಷ್ಟು ದಿನ ಲಸಿಕೆ ಕೊರತೆ ಆದದ್ದು ನಿಜ. ಆದರೆ ಈಗ ಕೊರತೆ ಇಲ್ಲ. ಬೇಡಿಕೆ ತಕ್ಕಂತೆ ಲಸಿಕೆಯನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಹೇಳಿದರು.

ಮೇ.22ರಂದು ಪುತ್ತೂರಿಗೆ ಭೇಟಿ ನೀಡಿದ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಿಂದಿನ ವರ್ಷ ಸಾರ್ವಜನಿಕರಲ್ಲಿ ಹಾಗೂ ಕೋವಿಡ್ ಸೋಂಕಿತರಲ್ಲಿ ಕೋವಿಡ್ ಬಗ್ಗೆ ಭಯ ತುಂಬಿತ್ತು. ಆದರೆ ಈ ವರ್ಷ ಪರಿಸ್ಥಿತಿ ಹಾಗಿಲ್ಲ. ಜನರಿಗೆ ಹಾಗೂ ಕೋವಿಡ್ ಸೋಂಕಿತರು ಭಯದಿಂದ ಮುಕ್ತರಾಗಿದ್ದಾರೆ. ಇದುವೇ ಕೋವಿಡ್ ಸೋಂಕಿನ ವಿರುದ್ಧದ ಹೋರಾಟಕ್ಕೆ ಸ್ವಲ್ಪ ತೊಡಕಾಯಿತು. ಆದ್ದರಿಂದ ಸರಕಾರ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ. ಹಿಂದಿನ ವರ್ಷ ಸೋಂಕಿತರನ್ನು ನೇರವಾಗಿ ಕ್ವಾರಂಟೈನ್‌ಗೆ ಹಾಕಲಾಗುತ್ತಿತ್ತು. ಆದರೆ ಈ ವರ್ಷ ಪ್ರಾರಂಭದಲ್ಲಿ ಹೋಂ ಕ್ವಾರಂಟೈನ್‌ಗೆ ಪ್ರಾಶಸ್ತ್ಯ ನೀಡಿದ್ದೇವು. ಆದರೆ ಸೋಂಕು ಹೆಚ್ಚಾಗುತ್ತಿರುವುದನ್ನು ಮನಗಂಡು, ಇದೀಗ ಮತ್ತೆ ಸೋಂಕಿತರನ್ನು ಕ್ವಾಂಟೈನ್‌ಗೆ ದಾಖಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ತೌಖ್ತೆ ಚಂಡಮಾರುತದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಸಚಿವರು, ಹಾನಿಯಾದ ಪ್ರದೇಶಗಳಿಗೆ ಈಗಾಗಲೇ ಭೇಟಿ ನೀಡಿದ್ದೇನೆ. ೧೨೮ ಮನೆಗಳಿಗೆ ಸಮಸ್ಯೆಯಾಗಿದೆ. 116 ದೋಣಿಗಳಿಗೆ ಹಾನಿಯಾಗಿದೆ. ಸೋಮೇಶ್ವರದಲ್ಲಿ ಸ್ಮಶಾನ ಕೆಟ್ಟು ಹೋಗಿದೆ. ಮನೆ ಕುಸಿತ ಆದವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಕಡಲ್ಕೊರತೆ ಆಗಿರುವಲ್ಲಿಗೆ ಕಲ್ಲು ಹಾಕುವ ಕೆಲಸಕ್ಕೆ ಸೂಚನೆ ನೀಡಿದ್ದು, ಮಂಗಳವಾರದಿಂದ ಕೆಲಸ ಆರಂಭವಾಗಲಿದೆ. ಮುಂದಿನ ಚಂಡಮಾರುತವನ್ನು ಎದುರಿಸಲು ಮೇ.22ರಂದು ಕ್ಯಾಬಿನೆಟ್ ಸಭೆ ಕರೆದಿದ್ದು, ಮುಂಜಾಗ್ರತೆ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದರು.

ಶಾಸಕ ಸಂಜೀವ ಮಠಂದೂರು ಮಾತನಾಡಿ, ಪುತ್ತೂರಿನ 15 ಖಾಸಗಿ ಆಂಬುಲೆನ್ಸ್‌ಗಳ ಜೊತೆ ಮಾತನಾಡಿ, ಬಡವರಿಗೆ ರಿಯಾಯಿತಿ ದರದಲ್ಲಿ ಸೇವೆ ಸಲ್ಲಿಸಲು ಸೂಚಿಸಲಾಗಿದೆ. ಅವರು ಸೋಂಕಿತರಿಗೆ ಒದಗಿಸುವ ಪಿಪಿಇ ಕಿಟ್, ಮಾಸ್ಕ್‌ಗಳನ್ನು ಶಾಸಕರ ವಾರ್ ರೂಂ ಕಡೆಯಿಂದ ಪೂರೈಸಿದ್ದು, ಬಡ ಸೋಂಕಿತರಿಗೆ ಈ ಶುಲ್ಕದಿಂದ ವಿನಾಯಿತಿ ನೀಡುವಂತೆ ಸೂಚಿಸಲಾಗಿದೆ. ಇದರಿಂದ ಬಡವರಿಗೆ ಅಷ್ಟು ಹೊರೆ ಕಡಿಮೆಯಾಗಲಿದೆ ಎಂದರು.

ಪಡಿತರ ಅಂಗಡಿಗಳು ಬೆಳಿಗ್ಗೆ ೭ ಗಂಟೆಯಿಂದ ೧೦ ಗಂಟೆಯವರೆಗೆ ತೆರೆದಿರುವಂತೆ ಸೂಚನೆ ನೀಡಲಾಗಿದೆ. ವಿಟ್ಲದ ಬಳಿಯ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದ ಹಿನ್ನೆಲೆಯಲ್ಲಿ, ಈ ಆದೇಶವನ್ನು ಹೊರಡಿಸಿದ್ದಾರೆ. ಕೆಲವು ಕಡೆಗಳಲ್ಲಿ ೯ ಗಂಟೆಗೆ ಪಡಿತರ ಅಂಗಡಿಯ ಬಾಗಿಲು ತೆರೆಯುತ್ತಿದ್ದುದರಿಂದ ಈ ಸಮಸ್ಯೆ ಎದುರಾಗಿತ್ತು. ಪಡಿತರ ಖರೀದಿಗೆ ತಡವಾದ ಪಕ್ಷದಲ್ಲಿ, ಅವರನ್ನು ಬರಿಗೈಯಿಂದ ಕಳುಹಿಸಿದೇ, ಪಡಿತರ ನೀಡಿಯೇ ಕಳುಹಿಸುವಂತೆಯೂ ಸೂಚನೆ ನೀಡಲಾಗಿದೆ ಎಂದರು. ಮುಂದಿನ ತಿಂಗಳಿಗೆ ಬೇಕಾಗುವಷ್ಟು ಅಂದರೆ ೯ ಸಾವಿರದ ೧೦೦ ಕ್ವಿಂಟಾಲ್ ಕುಚ್ಚುಲು ಅಕ್ಕಿ ಹಾಗೂ ೯ ಸಾವಿರದ ೧೦೦ ಕ್ವಿಂಟಾಲ್ ಬೆಳ್ತಿಗೆ ಅಕ್ಕಿ ಈಗಾಗಲೇ ಬಂದಿದೆ. ಮುಂದಿನ ೨-೩ ದಿನದಲ್ಲಿ ಆಯಾ ಪಡಿತರ ಅಂಗಡಿಗಳಿಗೆ ಇದು ಸರಬರಾಜಾಗಲಿದೆ. ಈ ತಿಂಗಳ ಪಡಿತರ ತೆಗೆದುಕೊಳ್ಳುವವರು ತಕ್ಷಣವೇ ತೆಗೆದುಕೊಳ್ಳುವಂತೆ ಶಾಸಕರು ಸೂಚಿಸಿದರು.

ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಪುತ್ತೂರು ಶಾಸಕರ ವಾರ್ ರೂಂನ ಚಂದ್ರಶೇಖರ್ ಬಪ್ಪಳಿಗೆ ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.