ಗಂಡಿಬಾಗಿಲು ಮಸೀದಿ ಮಾಜಿ ಅಧ್ಯಕ್ಷ ಯೂಸುಫ್ ಹಾಜಿ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಕೊಲ ಗ್ರಾಮದ ಗಂಡಿಬಾಗಿಲು ನಿವಾಸಿ, ಮುಖ್ರಿ ಫ್ಯಾಮಿಲಿ ಹಿರಿಯ ಸದಸ್ಯ ಯೂಸುಫ್ ಹಾಜಿ ಗಂಡಿಬಾಗಿಲು (೮೮ ವ.) ಕೆಲ ದಿನಗಳ ಅನಾರೋಗ್ಯದಿಂದ ಮೇ. ೨೨ರಂದು ತನ್ನ ಮನೆಯಲ್ಲಿ ನಿಧನ ಹೊಂದಿದರು.

ಗಂಡಿಬಾಗಿಲು ಹಿಮಾಯತ್ತುಲ್ ಇಸ್ಲಾಂ ಮದ್ರಸ ಸ್ಥಾಪಕರಾಗಿ, ಅಧ್ಯಕ್ಷರಾಗಿ, ಮಸೀದಿ ಸಮಿತಿಯ ಖಜಾಂಚಿಯಾಗಿಯೂ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು ಇತರೇ ಹಲವಾರು ಧಾರ್ಮಿಕ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ಅದಾಗ್ಯೂ ಶಿಕ್ಷಣ ಪ್ರೇಮಿಯೂ ಆಗಿದ್ದ ಇವರು ೧೯೯೫ರಲ್ಲಿ ಗಂಡಿಬಾಗಿಲುಗೆ ಪ್ರಾಥಮಿಕ ಶಾಲೆ ಮಂಜೂರಾತಿ ಆದಾಗ ಶಾಲೆಗೆ ಕಟ್ಟಡ ಇಲ್ಲದ ಸಂದರ್ಭದಲ್ಲಿ ತನ್ನ ಕಟ್ಟಡದಲ್ಲಿ ಶಾಲೆ ಆರಂಭಿಸಲು ಅನುಮತಿ ನೀಡಿ ತನ್ನ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದ್ದರು.

ಮೃತರು ಪುತ್ರಿಯರಾದ ಬೀಫಾತುಮ್ಮ, ಮರಿಯಮ್ಮ, ಸಫೀಯ, ಮೈಮೂನ, ಪುತ್ರರಾದ ಇಸ್ಮಾಯಿಲ್, ಝಕರಿಯಾ, ಅಬೂಬಕ್ಕರ್ ಸಿದ್ದಿಕ್, ಆದಂ ಮದನಿ, ಮಹಮ್ಮದ್ ರಫೀಕ್, ಹಾರೂನ್ ರಶೀದ್‌ರನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.