ಚಿಕ್ಕಪುತ್ತೂರು ಹಾರಾಡಿ ರಸ್ತೆ ಸಂಪರ್ಕ ಕಾಮಗಾರಿ ಪ್ರಗತಿ – ಶಾಸಕರಿಂದ ಪರಿಶೀಲನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹಲವು ವರ್ಷಗಳ ಹಿಂದೆ ನೆನೆಗುದಿಗೆ ಬಿದ್ದಿದ್ದ ಚಿಕ್ಕಪುತ್ತೂರು ಹಾರಾಡಿ ಸಂಪರ್ಕ ರಸ್ತೆ ನಿರ್ಮಾಣ ಯೋಜನೆಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ೬ ತಿಂಗಳ ಹಿಂದೆ ನಡೆದ ಚಿಂತನೆಯಂತೆ ಇದೀಗ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು ಮೇ ೨೨ರಂದು ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಿ ಮಾಹಿತಿ ನಗರಸಭೆ ಅಧ್ಸಕ್ಷರಿಂದ ಮಾಹಿತಿ ಪಡೆದರು.

 

೬ ತಿಂಗಳ ಚಿಕ್ಕಪುತ್ತೂರು ರಸ್ತೆ ಅಗತ್ಯತೆ ಮತ್ತು ರಸ್ತೆಗೆ ಜಮೀನು ಬಿಟ್ಟು ಕೊಡುವವರ ಜೊತೆ ಮಾತು ಕತೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವ ಕುರಿತು ಮಾತುಕತೆ ನಡೆಸಲಾಗಿತ್ತು. ಆ ಬಳಿಕ ರಸ್ತೆ ಕಾಮಗಾರಿ ಹಂತಹಂತವಾಗಿ ನಡೆಯುತ್ತಿದ್ದು, ಇದೀಗ ಹಾರಾಡಿ ಕಡೆಯಿಂದ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಮಳೆ ನೀರು ಹರಿಯಲು ಚರಂಡಿ ಕಾಮಗಾರಿ ನಡೆಯುತ್ತಿದೆ. ಶಾಸಕ ಸಂಜೀವ ಮಠಂದೂರು ಕಾಮಗಾರಿ ಪರಿಶೀಲಿಸಿ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಶಾಸಕರ ವಾರ್‌ರೂಮ್ ಪ್ರಮುಖ್ ಪುರುಷೋತ್ತಮ ಮುಂಗ್ಲಿಮನೆ ಕಿರಣ್ ಶಂಕರ್ ಮಲ್ಯ, ನವೀನ್ ಪಡಿವಾಳ್, ಅಶೋಕ್ ಹಾರಾಡಿ, ಶ್ರೀಧರ್ ತೆಂಕಿಲ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.