HomePage_Banner
HomePage_Banner

ಅರಿಯಡ್ಕ ಗ್ರಾಮದಲ್ಲಿ ತುರ್ತು ವಿಶೇಷ ಕೋವಿಡ್ 19 ಕಾರ್ಯಪಡೆಯ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಅರಿಯಡ್ಕ: ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಿಯಡ್ಕ ಗ್ರಾಮದ ತುರ್ತು ವಿಶೇಷ ಕೋವಿಡ್ 19 ಕಾರ್ಯಪಡೆಯ ಸಭೆಯೂ ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ ಸಭಾಧ್ಯಕ್ಷತೆಯಲ್ಲಿ ಮೇ 22 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.

 

ಕೋವಿಡ್ 19 ಪ್ಲೇಯಿಂಗ್ ಸ್ಕ್ವಾಡ್ ಅಧಿಕಾರಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ರವರು ಮಾತನಾಡಿ, ಅರಿಯಡ್ಕ ಗ್ರಾಮದಲ್ಲಿ ಹೆಚ್ಚೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಕೌಡಿಚ್ಚಾರು ಸಿ.ಆರ್.ಸಿ ಕಾಲೊನಿಯಲ್ಲಿ ಕೋವಿಡ್ 19 ಪಾಸಿಟಿವ್ ಇದ್ದು ಅವರ ಆರೋಗ್ಯದ ಬಗ್ಗೆ ಗಮನ ಹರಿಸಬೇಕಾಗಿದೆ, ಸಾರ್ವಜನಿಕರಿಗೆ ಪಡಿತರ ಸಾಮಗ್ರಿಗಳನ್ನು ಸೋಮವಾರ ವಿತರಿಸಲು ಕ್ರಮ ಕೈಗೊಳ್ಳಬೇಕು. ಯಾರಿಗೂ ತೊಂದರೆಯಾಗಬಾರದು, ಸಮಸ್ಯೆಗಳು ಬಂದಾಗ ನನಗೆ ತಿಳಿಸಿ, ಎಂದು ಹೇಳಿದರು. ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಸಂತೋಷ್ ಮಣಿಯಾಣಿ ಕುತ್ಯಾಡಿ, ಗ್ರಾಮಕರಣಿಕ ಶಬ್ಬೀರ್, ಸಂಪ್ಯ ಠಾಣೆಯ ಎ.ಎಸ್.ಐ ಎ.ಕೆ ಚಕ್ರಪಾಣಿ, ಉಪಸ್ಥಿತರಿದ್ದರು. ಕಿರಿಯ ಆರೋಗ್ಯ ಸಹಾಯಕಿ ನವ್ಯಾ ಎ ಮಾಹಿತಿ ನೀಡಿ, ಅರಿಯಡ್ಕದಲ್ಲಿ 5 , ಮಾಡ್ನೂರು 4 ಪ್ರಕರಣಗಳು ದಾಖಲಾಗಿವೆ, ಡೆಂಗ್ಯೂ ಪ್ರಕರಣ ಇರುವ 4 ನೇ ವಾರ್ಡಿನಲ್ಲಿ ಈ ದಿನ ಫಾಗಿಂಗ್ ಮಾಡುತ್ತೇವೆ ಎಂದು ಹೇಳಿದರು.

ಸಭೆಯಲ್ಲಿ ಪಂಚಾಯತ್ ಸದಸ್ಯರಾದ ಲೋಕೇಶ್ ಚಾಕೋಟೆ, ನಾರಾಯಣ ನಾಯ್ಕ ಚಾಕೋಟೆ, ಪ್ರವೀಣ ಎ, ಸದಾನಂದ ಮಣಿಯಾಣಿ, ಭಾರತಿ ವಸಂತ್ ಕೌಡಿಚ್ಚಾರು, ಪುಷ್ಪಾವತಿ ಮರತ್ತಮೂಲೆ,ವಿಜೀತ್ ಕಾವು, ಹರೀಶ್ ರೈ ಜಾರತ್ತಾರು ಮತ್ತು ರಾಜೇಶ್ ಮಣಿಯಾಣಿ ಕೋರೊನ ವಾರಿಯರ್ಸ್ ತಂಡದ ಸದಸ್ಯರಾದ ಸಚಿನ್ ರೈ ಪಾಪೆಮಜಲು, ತಿಲಕ್ ರೈ ಕುತ್ಯಾಡಿ, ಪ್ರಮೋದ್ ರೈ ಪನೆಕ್ಕಲ ಮತ್ತು ಸಂಕಪ್ಪ ಪೂಜಾರಿ ಕಾವು, ಸಂಪ್ಯ ಠಾಣೆಯ ಪೊಲೀಸ್ ಪ್ರಕಾಶ್, ಆಶಾ ಕಾರ್ಯಕರ್ತೆಯರಾದ ದೇವಿಕಾ, ವೇದಾವತಿ, ಸೀತಾ, ಲೀಲಾವತಿ ಮತ್ತು ಉಷಾ ಉಪಸ್ಥಿತರಿದ್ದರು. ಪಂಚಾಯತ್ ಪಿ.ಡಿ.ಓ ಪದ್ಮ ಕುಮಾರಿ ಸ್ವಾಗತಿಸಿ, ಸಿಬ್ಬಂದಿ ಪ್ರಭಾಕರ ವಂದಿಸಿದರು.

ಕೌಡಿಚ್ಚಾರು ಸಿ.ಆರ್.ಸಿ ಕಾಲೊನಿಯಲ್ಲಿ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ.ಇಲ್ಲಿರುವ 60 ಕುಟುಂಬಗಳು ರಬ್ಬರ್ ದಿನಗೂಲಿ ಕಾರ್ಮಿಕರು ಆಗಿರುವುದರಿಂದ ಅವರ ಆರೋಗ್ಯದ ದೃಷ್ಟಿಯಿಂದ ದಿನಾಂಕ 24ರಂದು ಬೆಳಗ್ಗೆ 9 ಗಂಟೆಗೆ ಸದರಿ ಕಾಲೊನಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತಿಂಗಳಾಡಿ ಇಲ್ಲಿಯ ಲ್ಯಾಬ್ ಟೆಕ್ನಿಷಿಯನ್ ಸ್ಲಾಬ್ ಟೆಸ್ಟ್ ಮಾಡಲಾಗುವುದು.ಈ ಸಂದರ್ಭದಲ್ಲಿ ಕಾರ್ಮಿಕರಿಗೆ ಪಾಸಿಟಿವ್ ಪ್ರಕರಣಗಳು ಕಂಡು ಬಂದರೆ ಕಾರ್ಮಿಕರಿಗೆ ರಜೆ ಹಾಗೂ ದಿನಗೂಲಿ ಸಂಬಳವನ್ನು ಕೆ.ಎಫ್.ಡಿ.ಸಿ ನಿಗಮ ಕಡಿತ ಮಾಡದಂತೆ ಪತ್ರ ಬರೆಯಲು ನಿರ್ಣಯಿಸಲಾಗಿದೆ.
                                                                                                                   

                                                                                                                                                  –   ರಾಮಚಂದ್ರ.ಎ
                                                              ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.