ಸರಿಗಮಪ ಲಿಟ್ಲ್ ಚಾಂಪಿಯನ್ ಖ್ಯಾತಿಯ ಪೋರಿಯಿಂದ ಸಾಧನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ನಿರ್ಮಿಸಿದ ಜ್ಞಾನ

ಪುತ್ತೂರು: ತನ್ನ ಸಣ್ಣ ವಯಸ್ಸಿನಲ್ಲಿಯೇ ತೊದಲು ನುಡಿಯ ಮೂಲಕ ದೇಶದಾದ್ಯಂತ ಜನರ ಗಮನ ಸೆಳೆದಿದ್ದ ಪುಟ್ಟ ಬಾಲೆ ಜ್ಞಾನರವರು ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ.

 

 

ಕಿರಿಯ ವಯಸ್ಸಿನಲ್ಲಿಯೇ ಹಿರಿಯ ಗರಿಮೆ ಪಡೆದಿರುವ ಜ್ಞಾನರವರು ಕನ್ನಡ ವಾಹಿನಿಯ ‘ಸರಿಗಮಪ’ದ ಮೂಲಕ ಖ್ಯಾತಿ ಪಡೆದಿದ್ದರು. ಇದೀಗ ಮೂರು ವರ್ಷ ಪ್ರಾಯದ ಈ ಪೋರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ್ದಾರೆ.

ಎರಡೂವರೆ ವರ್ಷದಲ್ಲೇ ಸಂಗೀತ ಲೋಕಕ್ಕೆ ಏರಿದ್ದ ಈ ಪುಟ್ಟ ಬಾಲೆ ತೊದಲು ನುಡಿಯುವ ವಯಸ್ಸಿನಲ್ಲೇ ತನ್ನ ಮುದ್ದು ಮುದ್ದಾದ ಕಂಠದಲ್ಲಿ 20 ಪದ್ಯಗಳನ್ನು ಹಾಡಿದ್ದು ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರನ್ನು ಗಿಟ್ಟಿಸಿಕೊಂಡಿದ್ದಾರೆ. ಈಕೆ ಈಗಾಗಲೇ 112 ಮೆಡಲ್ಸ್ ಹಾಗೂ ಟ್ರೊಫಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಕೊಂಬಾರು ಗ್ರಾಮದ ಕಟ್ಟೆ ಇಡ್ಯಡ್ಕದ ಗುರುರಾಜ್ ಹಾಗೂ ರೇಖಾ ದಂಪತಿಯ ಪುತ್ರಿಯಾಗಿರುವ ಜ್ಞಾನರವರು ತನ್ನ ಸಾಧನೆಯ ಮೂಲಕ ಪುತ್ತೂರಿನ ಹೆಸರನ್ನು ಹತ್ತೂರಿಗೆ ಪಸರಿಸಿದ್ದಾರೆ. ನೂರಾರು ವೇದಿಕೆಗಳಲ್ಲಿ ಪ್ರತಿಭೆ ಪ್ರದರ್ಶಿಸಿರುವ ಜ್ಞಾನರವರು ಖ್ಯಾತ ನಟರಿಂದ, ಸಂಗೀತ ಮಾಂತ್ರಿಕರಿಂದ ಭೇಷ್ ಎನಿಸಿಕೊಂಡಿದ್ದಾರೆ.

 

ಮೂಲತಃ ಪುತ್ತೂರಿನವರಾದ ರೇಖಾರವರು ಬೆಂಗಳೂರಿನ ರಾಮನಗರ ಆನುಮಾನ ಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿದ್ದಾರೆ. ಸಂಗೀತ ಶಿಕ್ಷಕಿಯ ಪುತ್ರಿಯಾಗಿರುವ ಜ್ಞಾನರವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಮಯದಲ್ಲಿ ಮಹಾಲಿಂಗೇಶ್ವರ ದೇವರ ಕುರಿತಾಗಿ ಹಾಡಿದ್ದ ಹಾಡೊಂದು ವ್ಯಾಪಕ ವೈರಲ್ ಆಗಿತ್ತಲ್ಲದೆ ಸಾವಿರಾರು ಮಂದಿಯ ಮೆಚ್ಚುಗೆ ಪಡೆದಿತ್ತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.