HomePage_Banner
HomePage_Banner

ಕಾಲ್ನಡಿಗೆಯಲ್ಲೇ ಪೇಟೆಯಲ್ಲಿ ತಿರುಗಿ ವಾಸ್ತವ ಸಮಸ್ಯೆ ಅರಿವು – ನಗರಸಭಾ ಅಧ್ಯಕ್ಷರಿಂದ ಜನಸೇವಾ ಸ್ಪಂದನಾ

ಪುತ್ತೂರು: ಕೊರೋನಾ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್ ಸಂದರ್ಭದಲ್ಲೂ ತನ್ನ ಸ್ಥಾನದ ಜವಾಬ್ದಾರಿಗೆ ಚ್ಯುತಿ ಬಾರದಂತೆ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಅವರು ಪುತ್ತೂರು ಮುಖ್ಯರಸ್ತೆಯ ವಿವಿಧ ಕಡೆ ತೆರಳಿ ಸಮಸ್ಯೆಗಳನ್ನು ಅಧ್ಯಯನ ಮಾಡುವ ಮೂಲಕ ಜನಸೇವಾ ಸ್ಪಂದನೆ ಮಾಡುತ್ತಿದ್ದಾರೆ.

ಮೇ.23ರಂದು ಅವರು ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಅವರ ಜೊತೆ ಪುತ್ತೂರು ಪೇಟೆಯ ವಿವಿಧ ಕಡೆ ತೆರಳಿ ಸಮಸ್ಯೆಗಳ ವಾಸ್ತವ ವಿಚಾರವನ್ನು ತಿಳಿದು ಕೊಂಡರು. ಇಲ್ಲಿನ ಶ್ರೀ ಲಕ್ಷ್ಮೀ ಹೊಟೇಲ್ ಬಳಿಯಲ್ಲಿ ಡಾಮರ್ ಕಿತ್ತು ಹೋದ ಕಡೆ ಇಂಟರ್‌ಲಾಕ್ ಅಳವಡಿಸುವ ಕುರಿತು ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಹೂವಿನ ಮಾರುಕಟ್ಟೆಯ ಬಳಿಕ ಚರಂಡಿ ವ್ಯವಸ್ಥೆಗೂ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಮಾತನಾಡಿದರು.

ಸುದ್ದಿ ಜನಾಧಿಕಾರಕ್ಕೆ ಧ್ವನಿಯಾದ ಅಧ್ಯಕ್ಷರು
ಸುದ್ದಿ ಜನಾಧಿಕಾರ ಅನಾವರಣ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಪೋನ್‌ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರು ರಸ್ತೆ ಬದಿ ಡಾಮರು ಕಿತ್ತು ಹೋಗಿರುವ ಕುರಿತು ತಿಳಿಸಿದ್ದರು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು ಮಾರನೇ ದಿನವೇ ಬೆಳಿಗ್ಗೆ ಸ್ಥಳ ಪರೀಶಿಲಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.