HomePage_Banner
HomePage_Banner

ತೆಗ್ಗು ಹಾಲು ಸೊಸೈಟಿ ಕಾರ್ಯದರ್ಶಿ ಭಾಸ್ಕರ್ ರೈ ದೇರಾಜೆ ಹೃದಯಾಘಾತದಿಂದ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆಯ್ಯೂರು ಗ್ರಾಮದ ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಭಾಸ್ಕರ ರೈ ದೇರಾಜೆ (೫೭ವ)ರವರು ಹೃದಯಾಘಾತದಿಂದ ಮೇ.23ರಂದು ನಿಧನರಾದರು.ಇವರು ತೆಗ್ಗು ಸ್ನೇಹ ಫ್ರೆಂಡ್ಸ್ ಕ್ಲಬ್‌ನ ಮಾಜಿ ಸ್ಥಾಪಕ ಗೌರವಾಧ್ಯಕ್ಷ, ಹಾಲಿ ಗೌರವ ಸಲಹೆಗಾರರಾಗಿದ್ದರು. ಇದಲ್ಲದೆ ಪುತ್ತೂರು ಸತ್ಯಸಾಯಿ ಸಮಿತಿ ಹಾಗೂ ಪ್ರಶಾಂತಿ ಸದ್ಭಾವನ ಟ್ರಸ್ಟ್ ಇದರಲ್ಲಿ ಸಕ್ರೀಯರಾಗಿದ್ದರು. ಸಾಯಿಬಾಬರ ಭಕ್ತರಾಗಿದ್ದ ಇವರು ಧಾರ್ಮಿಕ, ಶೈಕ್ಷಣಿಕ,ಸಾಮಾಜಿಕವಾಗಿ ಗುರುತಿಸಿಕೊಂಡು ಊರಲ್ಲಿ ಎಲ್ಲರಿಗೂ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು.

ಮೃತರು ಪತ್ನಿ ಫ್ರಫುಲ್ಲ ರೈ, ಪುತ್ರ ಪ್ರೀತಮ್ ರೈ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

ವಿಧಿಯಾಟ ಬೇರೆನೇ ಆಗಿತ್ತು
ಭಾಸ್ಕರ ರೈಯವರಿಗೆ ಮನೆಯಲ್ಲಿ ಹೃದಯಾಘಾತ ಉಂಟಾದ ತಕ್ಷಣವೆ ಪುತ್ರ ಪ್ರೀತಮ್‌ರವರ ತನ್ನ ಕಾರಲ್ಲಿ ಕುಳ್ಳಿರಿಸಿಕೊಂಡು ಪುತ್ತೂರು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಕಾರು ಸಂಟ್ಯಾರು ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಬಿತ್ತೆನ್ನಲಾಗಿದೆ. ತಕ್ಷಣವೇ ಆಟೋ ರಿಕ್ಷಾದಲ್ಲಿ ಭಾಸ್ಕರ ರೈಯವರನ್ನು ಆಸ್ಪತ್ರೆಗೆ ತಂದರೂ ಆ ವೇಳೆಗಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.ಕಾರು ಅಪಘಾತವಾಗದೇ ಇದ್ದಿದ್ದರೆ ರೈಯವರು ಉಳಿಯುತ್ತಿದ್ದರೋ ಗೊತ್ತಿಲ್ಲ. ವಿಧಿಯಾಟವನ್ನು ಬಲ್ಲವರ್‍ಯಾರು?

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.