ಪುತ್ತೂರು ಅಡಿಕೆ ವ್ಯಾಪಾರಸ್ಥರ ಸಂಘದ ಕೋಶಾಧಿಕಾರಿ ಉದಯ ಶೆಟ್ಟಿ ಹೃದಯಾಘಾತದಿಂದ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಡಿಕೆ ವ್ಯಾಪಾರಸ್ಥರ ಸಂಘದ ಕೋಶಾಧಿಕಾರಿ ಸಾಲ್ಮರ ನಿವಾಸಿ ಲೀಡ್ಸ್ ಸುಫಾರಿ ಪ್ರಾಡಕ್ಟ್‌ನ ಮಾಲಕ ಉದಯ ಶೆಟ್ಟಿ(46ವ)ರವರು ಮೇ 23ರಂದು ಸಂಜೆ ಹೃದಯಾಘಾತದಿಂದ ನಿಧನರಾದರು.

.
ಉಡುಪಿ ಮೂಲದವರಾದ ಉದಯ ಶೆಟ್ಟಿಯವರು ಪುತ್ತೂರಿನಲ್ಲಿ ಅಡಿಕೆ ಉದ್ಯಮವನ್ನು ಆರಂಭಿಸಿ, ಸಾಲ್ಮರದಲ್ಲಿ ವಾಸ್ತವ್ಯ ಹೊಂದಿದ್ದರು. ಮೇ 23ರಂದು ಸಂಜೆ ತನ್ನ ಪತ್ನಿ ಪುತ್ರಿಯರೊಂದಿಗೆ ವಾಕಿಂಗ್ ಮುಗಿಸಿ ಮನೆ ತಲುಪಿದಾಗ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟಿದ್ದಾರೆ. ಪುತ್ತೂರು ಎಪಿಎಂಸಿ ಯಾರ್ಡ್‌ನಲ್ಲಿ ಲೀಡ್ಸ್ ಸುಫಾರಿ ಪ್ರಾಡಕ್ಟ್ ಮತ್ತು ಪಡೀಲ್‌ನಲ್ಲಿ ಅಡಿಕೆ ಗಾರ್ಬಲ್‌ನ್ನು ಹೊಂದಿದ್ದರು. ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಅವರು ಪುತ್ತೂರು ರೋಟರಿ ಸಿಟಿಯ ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.